ಅಭ್ಯಂಗ ಸ್ನಾನ ಮಾಡುವುದು ಹೇಗೆ? ಇದರ ಫಲಗಳೇನು?

ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಅಭ್ಯಂಗಕ್ಕೆ ವಿಶೇಷ ಮಹತ್ವವಿದೆ. ಶರೀರಕ್ಕೆ ತೈಲವನ್ನು ಹಚ್ಚಿ ಮೃದುವಾಗಿ ತೀಡಿ, ಸ್ವಲ್ಪ ಹೊತ್ತು ಕಳೆದ ನಂತರ ಸ್ನಾನ ಮಾಡೋದನ್ನು ಅಭ್ಯಂಗ ಸ್ನಾನವೆಂದು ಹೇಳಲಾಗುತ್ತೆ.

ಅಭ್ಯಂಗ ಸ್ನಾನ ಮಾಡುವುದು ಹೇಗೆ? ಇದರ ಫಲಗಳೇನು?
ಸಂಗ್ರಹ ಚಿತ್ರ
Follow us
ಆಯೇಷಾ ಬಾನು
| Updated By: Skanda

Updated on: Apr 24, 2021 | 6:59 AM

ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ. ಅದರಲ್ಲೂ ಅಭ್ಯಂಗ ಸ್ನಾನಕ್ಕೆ ಬಹಳ ಪ್ರಮುಖ ಸ್ಥಾನವಿದೆ. ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಅಭ್ಯಂಗಕ್ಕೆ ವಿಶೇಷ ಮಹತ್ವವಿದೆ. ಶರೀರಕ್ಕೆ ತೈಲವನ್ನು ಹಚ್ಚಿ ಮೃದುವಾಗಿ ತೀಡಿ, ಸ್ವಲ್ಪ ಹೊತ್ತು ಕಳೆದ ನಂತರ ಸ್ನಾನ ಮಾಡೋದನ್ನು ಅಭ್ಯಂಗ ಸ್ನಾನವೆಂದು ಹೇಳಲಾಗುತ್ತೆ. ಆರೋಗ್ಯದ ದೃಷ್ಟಿಯಿಂದ ಜನಿಸಿದ ಶಿಶುವಿನಿಂದ ವೃದ್ಧರವರೆಗೆ ಎಲ್ಲರಿಗೂ ಅಭ್ಯಂಗ ಸ್ನಾನ ಒಳ್ಳೆಯದು ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹಾಗಾದ್ರೆ ಅಭ್ಯಂಗ ಸ್ನಾನವನ್ನು ಯಾವ ದಿನಗಳಲ್ಲಿ ಮಾಡಬೇಕು? ಯಾವ ದಿನಗಳಲ್ಲಿ ಮಾಡಬಾರದು? ಈ ಬಗ್ಗೆ ಇಲ್ಲಿ ತಿಳಿಯಿರಿ.

ಅಭ್ಯಂಗ ಸ್ನಾನದ ನಿಯಮಗಳು -ಸೋಮವಾರ, ಬುಧವಾರ, ಶನಿವಾರಗಳು ಅಭ್ಯಂಗ ಸ್ನಾನಕ್ಕೆ ಒಳ್ಳೆಯ ದಿನಗಳು. -ಭಾನುವಾರ, ಮಂಗಳವಾರ, ಗುರುವಾರ, ಶುಕ್ರವಾರಗಳು ಒಳ್ಳೆಯದಲ್ಲ. -ವಿವಾಹ ಮುಂತಾದ ಶುಭಕಾರ್ಯಗಳಲ್ಲಿ, ಹಬ್ಬಗಳಲ್ಲಿ, ಜಾತ ಶೌಚ, ಮೃತ ಶೌಚ, ಅಂತಿಮ ದಿನಗಳಲ್ಲಿ ನಿಷಿದ್ಧ ವಾರಗಳು ಬಂದರೂ ಸಹ ಅಭ್ಯಂಗ ಸ್ನಾನ ಮಾಡಬಹುದು. -ಸುಬ್ರಹ್ಮಣ್ಯ ಷಷ್ಠಿ, ನಾಗಚೌತಿ, ಕೃಷ್ಣಾಷ್ಟಮಿ, ಶ್ರೀರಾಮನವಮಿ, ಶಿವರಾತ್ರಿ, ಏಕಾದಶಿ, ದ್ವಾದಶಿ, ಅಮಾವಾಸ್ಯೆ ಒಳ್ಳೆಯ ವಾರದಲ್ಲಿ ಬಂದರೂ ಆ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡಬಾರದು. -ಜ್ವರ, ಅಜೀರ್ಣ, ಕಫ ಸಂಬಂಧಿ ವ್ಯಾಧಿಗಳಿಂದ ಬಳಲುತ್ತಿರುವವರು ಹಾಗೂ ಪಂಚಕರ್ಮ ಚಿಕಿತ್ಸೆಗೊಳಪಟ್ಟವರು ನಿರ್ದಿಷ್ಟ ಸಮಯದವರೆಗೆ ಅಭ್ಯಂಗ ಸ್ನಾನ ಮಾಡಬಾರದು. -ನಿತ್ಯವೂ ಅಭ್ಯಂಗ ಸ್ನಾನ ಮಾಡುವುದರಿಂದ ದೇಹಾಯಾಸ, ಮುಪ್ಪು, ಶ್ರಮ, ವಾತ, ಕೋಪ ದೂರವಾಗುತ್ತೆ. ಬದಲಾಗಿ ದೇಹಪುಷ್ಟಿ, ಆಯುಷ್ಯವೃದ್ಧಿ, ಸುಖನಿದ್ರೆ ಹಾಗೂ ಚರ್ಮದ ಮೃದುತ್ವ ಲಭ್ಯವಾಗುತ್ತೆ. ಇದಕ್ಕೆ ಪೂರಕವೆಂಬಂತೆ ಇತ್ತೀಚಿನ ಆಧುನಿಕ ಸಂಶೋಧನೆಗಳು ಇದನ್ನು ಪುಷ್ಟೀಕರಿಸಿವೆ.

ಹಾಗಾದ್ರೆ ಅಭ್ಯಂಗ ಸ್ನಾನಕ್ಕೆ ಯಾವ ಯಾವ ದ್ರವ್ಯಗಳನ್ನು ಉಪಯೋಗಿಸಬಹುದು ಗೊತ್ತಾ? ಆರೋಗ್ಯವಂತರು ಕೇವಲ ತೆಂಗಿನ ಎಣ್ಣೆ, ತುಪ್ಪ ಅಥವಾ ಎಳ್ಳ್ಳೆಣ್ಣೆಯನ್ನು ಬಳಸಬಹುದು. ರೋಗಿಗಳು ಆಯಾ ರೋಗಕ್ಕನುಸಾರವಾಗಿ ಗಿಡಮೂಲಿಕೆಗಳಿಂದ ಸಂಸ್ಕರಿಸಿದ ತೈಲಗಳನ್ನು ಉಪಯೋಗಿಸಬಹುದು. ಶಿಶುಗಳಿಗೆ ಚಂದನ ತೈಲ, ಎಳ್ಳೆಣ್ಣೆ, ಬಾದಾಮಿ ಎಣ್ಣೆ, ತುಪ್ಪವನ್ನು ಬಳಸಬಹುದು.

ಇದನ್ನೂ ಓದಿ: ಧರ್ಮಶಾಸ್ತ್ರದಲ್ಲಿ ಸಚೇಲ ಸ್ನಾನಕ್ಕೆ ಇದೆ ಮಹತ್ವದ ಸ್ಥಾನ; ಅದನ್ನು ಯಾವಾಗ ಮಾಡಬೇಕು?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್