ದೇಹವನ್ನು ಆರೋಗ್ಯವಾಗಿಡಲು ಪ್ರೋಟೀನ್ ಅತ್ಯಗತ್ಯವಾಗಿದೆ. ಸೇವಿಸುವ ಆಹಾರ, ದಿನನಿತ್ಯದ ಜೀವನಶೈಲಿ ಎಲ್ಲವೂ ಕೂಡ ಪ್ರೋಟೀನ್ ಪೂರೈಕೆಗೆ ಸಹಾಯಕವಾಗಿದೆ. ದೇಹಕ್ಕೆ ಪ್ರೋಟೀನ್ ಅತ್ಯಗತ್ಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಫೆ.27ರಂದು ರಾಷ್ಟ್ರೀಯ ಪ್ರೋಟೀನ್ ದಿನ(National Protein Day) ವನ್ನಾಗಿ ಆಚರಿಸಲಾಗುತ್ತದೆ. ಎಲ್ಲಾ ವಯಸ್ಸಿನವರ ಆರೋಗ್ಯ, ದೇಹದ ಬೆಳವಣಿಗೆ ಸರಿಯಾದ ರೀತಿಯಲ್ಲಿರಲು ಪ್ರೋಟೀನ್(Protein) ಅತ್ಯಗತ್ಯವಾಗಿದೆ. ಪ್ರೋಟೀನ್ ದೇಹದಲ್ಲಿ ಸ್ನಾಯುಗಳ ಬಲವರ್ಧನೆಗೆ, ಮೂಳೆಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹೀಗಾಗಿ ಭಾರತದಲ್ಲಿ ಪ್ರೋಟೀನ್ ಕುರಿತು ಜಾಗೃತಿ ಮತ್ತು ಅಗತ್ಯವನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. 2020ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪ್ರೋಟೀನ್ ದಿನವನ್ನು ಆಚರಣೆಗೆ ತರಲಾಯಿತು. ರೈಟ್ ಟು ಪ್ರೋಟೀನ್(Right to Protein) ಎನ್ನುವ ಥೀಮ್ನಲ್ಲಿ ಆಚರಣೆಗೆ ತರಲಾಯಿತು. ರಾಷ್ಟ್ರೀಯ ಮಟ್ಟದ ಸಾರ್ವಜನಿಕ ಆರೋಗ್ಯ ಕ್ರಮವು ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.
ಈ ಬಾರಿ ರಾಷ್ಟ್ರೀಯ ಪ್ರೋಟೀನ್ ದಿನವನ್ನು ಫುಡ್ ಫ್ಯೂಚರಿಸಂ (Food Futurism) ಎನ್ನುವ ಥೀಮ್ನಲ್ಲಿ ಆಚರಿಸಲಾಗುತ್ತಿದೆ. ಆಹಾರ ವಿಜ್ಞಾನಿಗಳು, ಪೌಷ್ಟಿಕಾಂಶ ತಜ್ಞರು ಮತ್ತು ಜೀವಶಾಸ್ತ್ರಜ್ಞರನ್ನು ಆಹಾರ ವಿಜ್ಞಾನ ಮತ್ತು ಭಾರತದಲ್ಲಿ ಪ್ರೋಟೀನ್ ಸಮರ್ಪಕತೆ ಮತ್ತು ಆಹಾರ ಭಧ್ರತೆಯಲ್ಲಿ ಪ್ರೋಟೀನ್ನ ಪಾತ್ರವನ್ನು ಚರ್ಚಸಿವ ಗುರಿಯನ್ನು ಈ ಥೀಮ್ ಹೊಂದಿದೆ.
ಪ್ರೋಟೀನ್ ಕೊರತೆಯಿಂದ ದೇಹದಲ್ಲಿ ಹಲವು ರೀತಿಯ ಕಾಯಿಲೆಗಳು ದೇಹಕ್ಕೆ ಅಂಟಿಕೊಳ್ಳುತ್ತದೆ. ಪ್ರೋಟೀನ್ ಕೊರೆತೆಯಾದರೆ ಸ್ನಾಯುಗಳ ಸೆಳೆತ, ಮೂಳೆಗಳು ದುರ್ಬಲಗೊಳ್ಳುವುದು, ಕೂದಲು ಉದುರುವಿಕೆ, ಯಕೃತ್ತಿನ ಸಮಸ್ಯೆ, ಚರ್ಮ ಒರಟಾಗುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಹೆಚ್ಚು ಹಸಿರು ತರಕಾರಿಗಳು, ಪೋಷಕಾಂಶಯುಕ್ತ ಆಹಾರ ಸೇವನೆ ಅತ್ಯಗತ್ಯವಾಗಿದೆ. ಪ್ರೋಟೀನ್ ದಿನವನ್ನು ಆಚರಿಸುವುದು ಪ್ರೋಟೀನ್ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ಅರಿವು ಮೂಡಿಸಿ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ತಿಳಿಸಿವುದಾಗಿದೆ.
ಇದನ್ನೂ ಓದಿ: