Constipation: ಮಲಬದ್ದತೆ ಸಮಸ್ಯೆ ಪರಿಹರಿಸಿಕೊಳ್ಳಲು ಈ ಆಹಾರ ಸೇವಿಸಿ
ಮಲಬದ್ದತೆಗೆ ಸುಲಭ ಪರಿಹಾರ ಎಂದರೆ ಬಾಳೆಹಣ್ಣಿನ ಸೇವನೆ. ಪ್ರತಿದಿನ ಒಂದಾದರೂ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ.
ವರ್ಕ್ ಫ್ರಾಮ್ ಹೋಮ್(Work From Home) ಎಲ್ಲಾ ರೀತಿಯಲ್ಲಿಯೂ ಆರೋಗ್ಯಕ್ಕೆ ಹಾನಿಯನ್ನೇ ಉಂಟು ಮಾಡುತ್ತಿದೆ. ದಿನದ ಬಹುತೇಕ ಸಮಯ ಕುಳಿತಲ್ಲೇ ಕುಳಿತುಕೊಂಡು ಕೆಲಸ ಮಾಡುವುದರಿಂದ ಮಲಬದ್ಧತೆ (Constipation) ಯಂತಹ ಸಮಸ್ಯೆಗಳು ಕಾಡುತ್ತವೆ. ಸರಿಯಾದ ಸಮಯದಲ್ಲಿ, ಪೌಷ್ಟಿಕ ಆಹಾರ ಸೇವಿಸದಿರುವುದೂ ಕೂಡ ಮಲಬದ್ದತೆಗೆ ಕಾರಣವಾಗುತ್ತದೆ. ಸೇವಿಸಿದ ಆಹಾರ ಹೊಟ್ಟೆಯಲ್ಲಿ ಜೀರ್ಣವಾಗದೆ ಉಳಿದು ಗಟ್ಟಿಯಾಗುತ್ತದೆ. ಇದರಿಂದ ಮಲಬದ್ದತೆಯಂತಹ ಸಮಸ್ಯೆಗಳು ಕಾಡುತ್ತದೆ. ಆಹಾರ (Food) ಸೇವನೆ ಹಾಗೂ ಜೀವನ ಶೈಲಿ ಮಲಬದ್ಧತೆಗೆ ಮುಖ್ಯ ಕಾರಣವಾಗುತ್ತದೆ. ಹೀಗಾಗಿ ನೀವು ಒಂದಷ್ಟು ಆಹಾರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಲೇಬೇಕು. ಆಗ ಮಾತ್ರ ಮಲಬದ್ದತೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹದು. ಹಾಗಾದರೆ ಯಾವೆಲ್ಲ ಆಹಾರಗಳು ನಿಮ್ಮ ಮಲಬದ್ದತೆ ಸಮಸ್ಯೆಯನ್ನು ಪರಿಹರಿಸುತ್ತವೆ. ಎನ್ನುವ ಮಾಹಿತಿ ಇಲ್ಲಿದೆ.
ಬಾಳೆಹಣ್ಣು: ಮಲಬದ್ದತೆಗೆ ಸುಲಭ ಪರಿಹಾರ ಎಂದರೆ ಬಾಳೆಹಣ್ಣಿನ ಸೇವನೆ. ಪ್ರತಿದಿನ ಒಂದಾದರೂ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ. ಹೀಗಾಗಿ ಬಾಳೆಹಣ್ಣು ಹೊಟ್ಟೆಯ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ. ಬಾಳೆಹಣ್ಣನ್ನು ಸಲಾಡ್, ಪಾಯಸದ ರೀತಿಯಲ್ಲಿ ಸೇವಿಸಬಹುದು.
ಸೊಪ್ಪು ಮತ್ತು ಹಸಿರು ತರಕಾರಿಗಳು: ಸಮೃದ್ಧವಾದ ಫೈಬರ್ ಅಂಶವಿರುವ ಸೊಪ್ಪು ಮತ್ತು ಹಸಿರು ತರಕಾರಿಗಳ ಸೇವನೆಯಿಂದ ಮಲಬದ್ಧತೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಉದಾಹರಣೆಗೆ ಬಸಳೆ ಸೊಪ್ಪು, ಪಾಲಕ್ ಸೊಪ್ಪು ಇತ್ಯಾದಿ. ಸೊಪ್ಪುಗಳಲ್ಲಿ ಸುಮಾರು 4.7 ಗ್ರಾಂನಷ್ಟು ಫೈಬರ್ ಅಂಶ ಅಡಕವಾಗಿರುತ್ತದೆ. ಹೀಗಾಗಿ ಸೊಪ್ಪಿನ ಸೇವನೆಯಿಂದ ಮಲಬದ್ದತೆ ಸಮಸ್ಯೆ ದೂರವಾಗುತ್ತದೆ.
ನೆನಸಿದ ಒಣದ್ರಾಕ್ಷಿ: ಒಣದ್ರಾಕ್ಷಿಯನ್ನು ರಾತ್ರಿ ನೀರಲ್ಲಿ ನೆನೆಸಿಟ್ಟು ಬೆಳಗ್ಗೆ ತಿನ್ನಿರಿ. ಇದರಿಂದಲೂ ಮಲಬದ್ದತೆ ಸಮಸ್ಯೆ ದೂರವಾಗುತ್ತದೆ. ನೆನೆಸಿಟ್ಟ ಣ ದ್ರಾಕ್ಷಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ಅಡಕವಾಗಿರುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ಮೂಲಂಗಿ: ಮೂಲಂಗಿ ಹೊಟ್ಟೆಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಹಸಿ ಮೂಲಂಗಿಯನ್ನು ತುರಿದು ಅದಕ್ಕೆ ಮೊಸರು, ಸಕ್ಕರೆ ಸೇರಿಸಿ ಸೇವಿಸಿ. ಇದರಿಂದ ಮಲಬದ್ದತೆ ಸಮಸ್ಯೆ ನಿವಾರಣೆಯಾಗುತ್ತದೆ. ಮೂಲಂಗಿ ಮಲಬದ್ದತೆ ಮಾತ್ರವಲ್ಲದೆ ಮೂಲವ್ಯಾದಿಗೂ ಉತ್ಮ ಪರಿಹಾರವಾಗಿದೆ. ಹೀಗಾಗಿ ಮೂಲಂಗಿಯ ನಿಯಮಿತ ಸೇವನೆಯಿಂದ ಮಲಮದ್ದತೆ ಸಮಸ್ಯೆಯನ್ನು ಪರಿಹರಿಸಬಹುದು.
ಕುಳಿತುಕೊಳ್ಳುವ ಭಂಗಿ: ಕೆಲಸಕ್ಕೆ ಕುಳಿತಾಗ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಜತೆಗೆ ಪ್ರತೀ ಅರ್ಧಗಂಟೆಗೊಮ್ಮೆಯಾದರೂ 2 ನಿಮಿಷ ಎದ್ದು ಓಡಾಡಿ. ಊಟಕ್ಕೆ ಕುಳಿತುಕೊಳ್ಳುವಾಗ ಕಾಲನ್ನು ಮಡಚಿ ಕುಳಿತುಕೊಳ್ಳಿ. ಆಗ ತಿಂದ ಆಹಾರ ಜೀರ್ಣವಾಗುತ್ತದೆ.
ಇದನ್ನೂ ಓದಿ:
Black Pepper Tea: ದಿನನಿತ್ಯ ಕರಿಮೆಣಸಿನ ಚಹಾವನ್ನು ಕುಡಿಯಿರಿ: ಆರೋಗ್ಯವಾಗಿರಿ
Published On - 3:29 pm, Thu, 24 February 22