ಕಣ್ಣಿನ ಹುಬ್ಬುಗಳನ್ನು ಟ್ರಿಮ್ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ

ಹೆಣ್ಣಿನ ಅಂದವನ್ನು ಮೇಕಪ್​​ ಮಾತ್ರವಲ್ಲ ಅವರು ಹುಬ್ಬುಗಳು ಸೌಂದರ್ಯವನ್ನು ಹೆಚ್ಚಿಸುತ್ತದೆ. ಹುಬ್ಬುಗಳನ್ನು ಸುಂದರವಾಗಿ ಇಟ್ಟುಕೊಂಡಾಗ ಮುಖದ ಅಂದ ಇನ್ನಷ್ಟು ಹೆಚ್ಚುತ್ತದೆ. ಈ ಕಾರಣಕ್ಕೆ ಹುಬ್ಬುಗಳನ್ನು ಮನೆಯಲ್ಲೇ ಟ್ರಿಮ್​​ ಮಾಡಿಕೊಂಡು ಅಂದವಾಗಿ ಇಟ್ಟುಕೊಳ್ಳಬಹುದು. ಮನೆಯಲ್ಲೇ ಹೇಗೆ ಟ್ರಿಮ್​​ ಮಾಡಿಕೊಳ್ಳುವುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

ಕಣ್ಣಿನ ಹುಬ್ಬುಗಳನ್ನು ಟ್ರಿಮ್ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ
ಸಾಂದರ್ಭಿಕ ಚಿತ್ರ
Image Credit source: pinterest
Updated By: ಪ್ರೀತಿ ಭಟ್​, ಗುಣವಂತೆ

Updated on: Jun 25, 2025 | 7:08 PM

ಹೆಣ್ಮಕ್ಕಳು ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದರಲ್ಲೂ ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವದ ನೀಡುತ್ತಾರೆ. ಆದರೆ ಮುಖದ ಜತೆಗೆ ಹುಬ್ಬುಗಳ (eyebrows) ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯವಿದೆ. ಇದು ಅಂದವನ್ನು ಇಮ್ಮಡಿಗೊಳಿಸುತ್ತದೆ. ಮುಖಕ್ಕೆ ಮೇಕಪ್​​​​ ಹೇಗೋ, ಈ ಹುಬ್ಬುಗಳನ್ನು ಅಂದವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಕಾಲ ಕಾಲಕ್ಕೆ ಹುಬ್ಬುಗಳನ್ನು ಕೂಡ ಸುಂದರವಾಗಿ ಕಾಣುವಂತೆ ಮಾಡಬೇಕು. ಹುಬ್ಬುಗಳಲ್ಲಿ ಅನಗತ್ಯವಾಗಿ ಬೆಳೆದಿರುವ ಕೂದಲುಗಳನ್ನು ಟ್ರಿಮ್ ಮಾಡುವ ಮೂಲಕ ಅವುಗಳ ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಇದು ನಿಮ್ಮ ಮುಖವನ್ನು ಸ್ವಚ್ಛವಾಗಿ ಮತ್ತು ಅಂದವಾಗಿಸುತ್ತದೆ ಹಾಗೂ ನಿಮ್ಮ ಕಣ್ಣುಗಳು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಹುಬ್ಬುಗಳನ್ನು ಟ್ರಿಮ್​​ ಮಾಡುವಾಗ ಈ ಕಾಳಜಿಗಳನ್ನು ವಹಿಸಲೇಬೇಕು. ಇಲ್ಲಿದೆ ನೋಡಿ.

ಅವುಗಳನ್ನು ಹೇಗೆ ಟ್ರಿಮ್ ಮಾಡುವುದು:

ಮೊದಲಿಗೆ, ಸ್ಪೂಲಿ ಬ್ರಷ್ ತೆಗೆದುಕೊಂಡು ಹುಬ್ಬಿನ ಕೂದಲನ್ನು ಮೇಲಕ್ಕೆ ಬಾಚಿಕೊಳ್ಳಿ. ತುಂಬಾ ಉದ್ದವಾಗಿ ಕಾಣುವ ಮತ್ತು ಆಕಾರ ತಪ್ಪುತ್ತಿರುವ ಕೂದಲನ್ನು ಕತ್ತರಿಗಳಿಂದ ತುಂಬಾ ಎಚ್ಚರಿಕೆಯಿಂದ ಕತ್ತರಿಸಿ.

ಹುಬ್ಬುಗಳ ನೈಸರ್ಗಿಕ ಆಕಾರವನ್ನು ಹುಬ್ಬು ಪೆನ್ಸಿಲ್‌ನಿಂದ ರೇಖೆಯ ಮೂಲಕ ಗುರುತಿಸಿ. ಈಗ ಪ್ಲಕ್ಕರ್‌ನಿಂದ ಆ ಆಕಾರದಿಂದ ಹೊರಗಿರುವ ಕೂದಲುಗಳನ್ನು ಕತ್ತರಿಸಿ. ಕತ್ತರಿಸುವಾಗ ಎಚ್ಚರ ಆ ರೇಖೆಯಿಂದ ಹೊರಗಿರುವ ಕೂದಲು ಮಾತ್ರ ಕತ್ತರಿಸಿ. ಇಲ್ಲದಿದ್ದರೆ ಆಕಾರ ಹಾಳಾಗಬಹುದು, ಹುಬ್ಬು ವಿಚಿತ್ರವಾಗಿ ಕಾಣಿಸಬಹುದು.

ಟ್ರಿಮ್ ಮಾಡಿದ ನಂತರ, ಸ್ವಲ್ಪ ಒದ್ದೆಯಾದ ಹತ್ತಿಯನ್ನು ತೆಗೆದುಕೊಂಡು ಹುಬ್ಬಿನ ಭಾಗವನ್ನು ಸ್ವಚ್ಛಗೊಳಿಸಿ. ಬಳಿಕ ಅಲೋವೆರಾ ಜೆಲ್ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿ, ಇದರಿಂದ ಚರ್ಮ ಮೃದುವಾಗಿರುತ್ತದೆ ಮತ್ತು ಯಾವುದೇ ಕಿರಿಕಿರಿ ಇರುವುದಿಲ್ಲ.

ಈ ಕೆಲಸ ಆದ್ಮೇಲೆ, ಹುಬ್ಬುಗಳು ಬೆಳೆದಿರುವ ದಿಕ್ಕಿನಿಂದ ಹಿಂದಕ್ಕೆ ಬಾಚಿಕೊಳ್ಳಿ, ಇದು ನಿಮಗೆ ಹುಬ್ಬಿನ ಅಂತಿಮ ಆಕಾರವನ್ನು ನೀಡುತ್ತದೆ. ಯಾವಾಗಲೂ ಕೂದಲನ್ನು ಅದರ ಬೆಳವಣಿಗೆಯ ದಿಕ್ಕಿನಲ್ಲಿ ಎಳೆಯಿರಿ, ಇದರಿಂದ ನೋವು ಕಡಿಮೆಯಾಗುತ್ತದೆ.

ಕೂದಲನ್ನು ಟ್ರಿಮ್ ಮಾಡಲು ಬಯಸಿದರೆ ಅಮೆಜಾನ್‌ ಅಥವಾ ಇತರ ಆನ್​​ಲೈನ್​​​ ಪ್ಲಾಟ್​​​ಫಾರ್ಮ್​​ಗಳಲ್ಲಿ ಐಬ್ರೋ ಟ್ರಿಮ್ಮರ್‌ಗಳನ್ನು ಖರೀದಿ ಮಾಡಬಹುದು ಇದು ಕಡಿಮೆ ಬೆಲೆಗೆ ನಿಮಗೆ ಸಿಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ