ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದಾಕ್ಷಣ ನೆನಪಾಗುವುದು ಶ್ರೀ ಕೃಷ್ಣ, ಯಶೋದೆಯರ ವೇಷಧಾರಿಗಳು, ಮೊಸರು ಕುಡಿಕೆ, ಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ, ಹಬ್ಬದ ಸಂಭ್ರಮ ಹಾಗೂ ಅಷ್ಟಮಿಯಂದು ತಯಾರಿಸಲಾಗುವ ಬಗೆ ಬಗೆಯ ಖಾದ್ಯಗಳು. ಈ ದಿನ ಕೃಷ್ಣನಿಗೆ ಪ್ರಿಯವಾದ ಉಂಡೆಗಳು, ಚಕ್ಕುಲಿ, ನಿಪ್ಪಟ್ಟು ಇಂತಹ ತಿನಿಸುಗಳನ್ನು ತಯಾರಿಸಿ ನೈವೇದ್ಯವಾಗಿ ಇಡಲಾಗುತ್ತದೆ. ಆದರೆ ಕೃಷ್ಣನಿಗೆ ಅವಲಕ್ಕಿ ಲಡ್ಡು ಪ್ರಿಯವಾಗಿದ್ದು, ಈ ಕೆಲವು ಐಟಂಗಳಿದ್ದರೆ ಮನೆಯಲ್ಲೇ ಸುಲಭವಾಗಿ ಈ ತಿನಿಸನ್ನು ಮಾಡಬಹುದಾಗಿದೆ.
* 200 ಗ್ರಾಂ ಅವಲಕ್ಕಿ
* 100 ಗ್ರಾಂ ಬೆಲ್ಲ
* ಕಾಲು ಕಪ್ ಒಣ ತೆಂಗಿನಕಾಯಿ ತುರಿ
* ಗೋಡಂಬಿ ಮತ್ತು ಒಣ ದ್ರಾಕ್ಷಿ
* ಏಲಕ್ಕಿ ಪುಡಿ
* ತುಪ್ಪ
ಇದನ್ನೂ ಓದಿ: ಭಾರತಕ್ಕೆ ಹೆಮ್ಮೆ ತಂದ ಇಸ್ರೋ, ಈ ಸಾಹಸದ ಹಿಂದಿದೆ ಹಲವು ವಿಜ್ಞಾನಿಗಳ ಶ್ರಮ
* ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಅವಲಕ್ಕಿ ಹಾಕಿ ಸ್ವಲ್ಪ ಹುರಿದುಕೊಳ್ಳಿ, ನಂತರ ಒಣ ತೆಂಗಿನಕಾಯಿ ತುರಿಯನ್ನು ಹುರಿದುಕೊಂಡು ತಣ್ಣಗಾಗಲು ಬಿಡಿ.
* ಈ ಮಿಶ್ರಣ ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ, ಬೆಲ್ಲವನ್ನು ತುರಿದುಕೊಂಡು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
* ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಂಡು ಅದರಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹುರಿದುಕೊಳ್ಳಿ.
* ನಂತರ ಪ್ಯಾನ್ ಗೆ ಸ್ವಲ್ಪ ತುಪ್ಪವನ್ನು ಹಾಕಿ, ರುಬ್ಬಿಟ್ಟ ಬೆಲ್ಲ ಮತ್ತು ಅವಲಕ್ಕಿಯ ಮಿಶ್ರಣ, ಏಲಕ್ಕಿ ಪುಡಿ, ಹುರಿದಿಟ್ಟ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಆ ಬಳಿಕ ಅಂಗೈಗೆ ಸಲ್ಪ ತುಪ್ಪವನ್ನು ಸವರಿಕೊಂಡು ಅವಲಕ್ಕಿ ಮಿಶ್ರಣದಿಂದ ಸಣ್ಣ ಸ್ಣಣ ಲಡ್ಡುಗಳನ್ನು ಮಾಡಿಕೊಂಡರೆ ಕೃಷ್ಣನಿಗೆ ಪ್ರಿಯವಾದ ನೈವೇದ್ಯ ಪ್ರಸಾದ ಸಿದ್ಧವಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ