ರಾಧಾ- ಕೃಷ್ಣರ ಸಂಬಂಧದ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ!. ಅವರ ಪ್ರೀತಿ, ಅವರಿಬ್ಬರ ನಡುವೆ ಇದ್ದ ಸ್ನೇಹ ಸಂಬಂಧ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. ಅವರು ಜೀವನ ನಡೆಸುವುದಕ್ಕೆ ಜೊತೆಗಾರರಾಗದಿದ್ದರೂ ಅವರ ಪವಿತ್ರ ಸಂಬಂಧ, ಅದನ್ನು ಅವರು ಕಾಪಾಡಿಕೊಂಡ ರೀತಿ ಎಲ್ಲವೂ ಯುವ ಜನತೆಗೆ ಮಾದರಿಯಾಗುವಂತದ್ದು. ಆದರೆ ರಾಧಾ- ಕೃಷ್ಣರು ತಮ್ಮ ಸ್ನೇಹವನ್ನು ಅಷ್ಟು ಚೆಂದವಾಗಿ ಇಟ್ಟುಕೊಳ್ಳಲು ಕಾರಣವೇನು? ಕೃಷ್ಣನ ಹೇಳಿರುವ ಪ್ರಕಾರ ಗೆಳೆತನದಲ್ಲಿ ಈ ಮೂರು ನಿಯಮ ಪಾಲಿಸಿದರೆ ನಿಮ್ಮ ಫ್ರೆಂಡ್ ಶಿಪ್ ಎಂದಿಗೂ ದೂರವಾಗಲಾರದು. ಹಾಗಾದರೆ ಗೆಳೆತನ ಶಾಶ್ವತವಾಗಿ ಉಳಿಯುವಂತಹ ಆ ಮೂರು ನಿಯಮಗಳೇನು? ತಿಳಿದುಕೊಳ್ಳಿ.
ಗೆಳೆತನಕ್ಕೆ ಆಧಾರವಾಗಿರುವುದು ವಿಶ್ವಾಸ. ಅಂದರೆ ಯಾವುದೇ ಸ್ಥಿತಿಯಲ್ಲಿಯೂ ನಿನ್ನ ಗೆಳೆಯನ ಮೇಲೆ ನಂಬಿಕೆ ಕಳೆದುಕೊಳ್ಳಬಾರದು. ಯಾವುದೇ ಸಂದರ್ಭದಲ್ಲಿಯೂ ಸ್ನೇಹಿತನ ಮೇಲೆ ಅನುಮಾನ ಪಡಬಾರದು.
ಪ್ರತಿ ಗೆಳೆತನದಲ್ಲಿಯೂ ಸಾಂಗತ್ಯ ಬಹಳ ಮುಖ್ಯವಾಗುತ್ತದೆ. ಅಂದರೆ ಸ್ನೇಹಿತ ತಪ್ಪು ದಾರಿ ಆಯ್ಕೆ ಮಾಡಿಕೊಂಡರೆ ಅವನನ್ನು ಸರಿಯಾಗಿ ತಿದ್ದಿ, ಬುದ್ದಿ ಹೇಳಬೇಕು. ಅದರ ಜೊತೆಗೆ ಅವನನ್ನು ಸರಿಯಾದ ದಾರಿಗೆ ತರುವ ಪ್ರಯತ್ನ ಮಾಡಬೇಕು. ಗೆಳೆತನದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಗೆಳೆಯನಿಂದ ದೂರ ಆಗಬಾರದು ಎಂದು ಕೃಷ್ಣ ಹೇಳುತ್ತಾನೆ.
ಇದನ್ನೂ ಓದಿ: ಜನ್ಮಾಷ್ಟಮಿಗೆ ಭೇಟಿ ನೀಡಬಹುದಾದ ಕರ್ನಾಟಕದ ಶ್ರೀಕೃಷ್ಣ ದೇವಾಲಯಗಳಿವು
ಗೆಳೆಯ ಯಾವಾಗ ಕರೆದರೂ ಅಂದರೆ ಅವನಿಗೆ ಅಗತ್ಯ ಇದ್ದಾಗ, ಅದು ರಾತ್ರಿ ಇರಲಿ, ಮಳೆ, ಬಿರುಗಾಳಿ ಇರಲಿ ಚಳಿ ಇರಲಿ ಯಾವಾಗ ಕರೆದರೂ ಬರಬೇಕು. ಅಗತ್ಯದಲ್ಲಿ ಬರದವನು ಗೆಳೆಯನೇ ಅಲ್ಲ. ನಿನ್ನ ಗೆಳೆಯನಿಗೋಸ್ಕರ ಯಾವಾಗ ಬೇಕಾದರೂ ಬರಬೇಕು.
ಈ ಮೂರು ನಿಯಮಗಳಿಗೆ ನಿಮ್ಮ ಒಪ್ಪಿಗೆ ಇದ್ದರೆ ನಿಮ್ಮ ಗೆಳೆಯನನ್ನು ಎಂದಿಗೂ, ಯಾರಿಂದಲೂ ದೂರ ಮಾಡಲು ಸಾಧ್ಯವೇ ಇಲ್ಲ ಎನ್ನುತ್ತಾನೆ ಕೃಷ್ಣ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ