AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seven horse painting: ಈ ಚಿತ್ರ ಮನೆಯ ಸರಿಯಾದ ದಿಕ್ಕಿನಲ್ಲಿದ್ದರೆ ನಿಮ್ಮ ಯಶಸ್ಸನ್ನು ಯಾರಿಂದಲೂ ತಡೆಯಲಾಗದು

ಕೆಲವರ ಮನೆಗಳಲ್ಲಿ ಏಳು ಬಿಳಿ ಕುದುರೆಗಳು ಓಡುವ ಚಿತ್ರಗಳನ್ನು ನೋಡಿರಬಹುದು. ವಾಸ್ತು ಶಾಸ್ತ್ರದಲ್ಲಿ ಈ ಫೋಟೋಗೆ ಹೆಚ್ಚಿನ ಮಹತ್ವವಿದೆ ಎಂದು ಹೇಳಲಾಗುತ್ತದೆ. ಈ ದೃಶ್ಯವನ್ನು ವೇಗ, ಧೈರ್ಯ, ಯಶಸ್ಸು, ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಚಿತ್ರವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ಯಶಸ್ಸು ನಿಮ್ಮದಾಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಏಳು ಕುದುರೆಗಳ ಚಿತ್ರವನ್ನು ಇಟ್ಟರೆ, ಆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಮತ್ತು ಅದೃಷ್ಟವು ಸಿಗುತ್ತದೆ.

Seven horse painting: ಈ ಚಿತ್ರ ಮನೆಯ ಸರಿಯಾದ ದಿಕ್ಕಿನಲ್ಲಿದ್ದರೆ ನಿಮ್ಮ ಯಶಸ್ಸನ್ನು ಯಾರಿಂದಲೂ ತಡೆಯಲಾಗದು
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 24, 2024 | 6:18 PM

Share

ನೀವು ಕೇಳಿರಬಹುದು, ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕುದುರೆಗಳ ಚಿತ್ರ ಇದ್ದಲ್ಲಿ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಕೂಡ ಇರುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಏಳನ್ನು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಮದುವೆಯಲ್ಲಿ ಸಪ್ತಪಧಿ ಅಂದರೆ ಏಳು ಹೆಜ್ಜೆಗಳು. ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳು, ಈ ಭೂಮಿಯ ಮೇಲೆ ಏಳು ಮಹಾಸಾಗರಗಳಿವೆ, ಏಳು ಅಂಶಗಳಿವೆ, ಸೂರ್ಯನ ರಥಕ್ಕೆ ಏಳು ಕುದುರೆಗಳಿವೆ. ಈ ರೀತಿ ಏಳು ಸಮೃದ್ಧಿಯ ಸಂಕೇತವಾಗಿದೆ. ಅಲ್ಲದೆ ಏಳು ಬಿಳಿ ಕುದುರೆಗಳು ಓಡುವ ದೃಶ್ಯವನ್ನು ವೇಗ, ಧೈರ್ಯ, ಯಶಸ್ಸು, ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ಮತ್ತು ಹಿಂದೂ ಧರ್ಮದಲ್ಲಿ ಏಳನೇ ಸಂಖ್ಯೆಯನ್ನು ಶುಭವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಏಳು ಕುದುರೆಗಳ ವರ್ಣಚಿತ್ರವು ಮಂಗಳಕರ ಎಂದು ನಂಬಲಾಗಿದೆ. ಆದರೆ ಏಳು ಬಿಳಿ ಕುದುರೆಗಳ ಚಿತ್ರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಕೂಡ ಅತ್ಯಗತ್ಯ. ಆಗ ಮಾತ್ರ ಅದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಏಳು ಬಿಳಿ ಕುದುರೆಗಳ ಚಿತ್ರವು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುತ್ತದೆ. ಹಾಗಾಗಿ ಏಳು ಬಿಳಿ ಕುದುರೆಗಳ ಫೋಟೋವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬೇಕು ಎಂಬ ನಂಬಿಕೆ ಇದೆ. ಏಳು ಬಿಳಿ ಕುದುರೆಗಳ ಆಕೃತಿಯನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಜೀವನದಲ್ಲಿ ಯಶಸ್ಸನ್ನು ತರುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣಬಹುದು. ಈ ದಿಕ್ಕು ಯಶಸ್ಸು ಮತ್ತು ಖ್ಯಾತಿಗೆ ಸಂಬಂಧ ಹೊಂದಿದ್ದು, ಚಿತ್ರವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇರಿಸಿದರೆ, ನಿಮ್ಮ ಜೀವನದಲ್ಲಿಯೂ ಯಶಸ್ಸು ಸಿಗುತ್ತದೆ.

ಆದರೆ ವಾಸ್ತು ಶಾಸ್ತ್ರದ ಪ್ರಕಾರ. ಈ ವರ್ಣಚಿತ್ರವನ್ನು ನೇತು ಹಾಕುವಾಗ ಕುದುರೆಗಳ ಮುಖಗಳು ಬಾಗಿಲಿಗೆ ಎದುರಾಗಿ ಇರಬಾರದು. ಇದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪೂರ್ವ ದಿಕ್ಕಿನಲ್ಲಿ ಇಟ್ಟರೆ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬಿಳಿ ಬಣ್ಣದ ಕುದುರೆಗಳು ಶಾಂತಿ, ಯಶಸ್ಸು ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತವೆ. ಅದಕ್ಕಾಗಿಯೇ ನೀವು ಈ ಬಣ್ಣದ ಕುದುರೆ ವರ್ಣಚಿತ್ರವನ್ನು ಮನೆ ಮತ್ತು ಕಚೇರಿಯಲ್ಲಿ ಇಟ್ಟುಕೊಳ್ಳಬಹುದು. ಆದರೆ ಇದನ್ನು ಮಲಗುವ ಕೋಣೆ, ಪೂಜಾ ಕೊಠಡಿ, ಅಧ್ಯಯನ ಕೊಠಡಿ, ವಾಶ್ ರೂಮ್ ಬಳಿ ಯಾವುದೇ ಕಾರಣಕ್ಕೂ ಹಾಕಬಾರದು.

ಇದನ್ನೂ ಓದಿ: ನಿಮ್ಮ ಬದುಕಿನ ಈ ಗುಟ್ಟುಗಳು ರಟ್ಟಾಗದಿರಲಿ ಜೋಕೆ

ಏಳು ಕುದುರೆಗಳು ಇರುವ ಚಿತ್ರವನ್ನು ಮನೆಗೆ ತರುವಾಗ ಮೊದಲು ಅವುಗಳ ಬಣ್ಣವನ್ನು ಪರಿಶೀಲಿಸಬೇಕು. ಕಪ್ಪು ಬಣ್ಣದ ಕುದುರೆಗಳು ಶನಿಯನ್ನು ಪ್ರತಿನಿಧಿಸುತ್ತವೆ. ಬೂದು ಬಣ್ಣದ ಕುದುರೆಗಳು ರಾಹು ಗ್ರಹವನ್ನು ಪ್ರತಿನಿಧಿಸುತ್ತವೆ. ಚಿನ್ನದ ಬಣ್ಣದ ಕುದುರೆಗಳು ಸೂರ್ಯನನ್ನು ಸಂಕೇತಿಸುತ್ತವೆ ಎಂದು ಹೇಳಲಾಗುತ್ತದೆ. ಫೋಟೋದಲ್ಲಿ ಎಲ್ಲಾ ಬಿಳಿ ಕುದುರೆಗಳು ಒಂದೇ ಕಡೆಗೆ ಓಡುತ್ತಿರುವ ಚಿತ್ರವನ್ನು ಖರೀದಿಸುವುದು ತುಂಬಾ ಒಳ್ಳೆಯದು.