Krishna Janmashtami 2024 : ನಿಮ್ಮ ಮುದ್ದಾದ ಮಗುವಿಗೆ ಕೃಷ್ಣವೇಷ ಹಾಕುತ್ತಿದ್ದೀರಾ? ಇಲ್ಲಿದೆ ಟಿಪ್ಸ್

ಆಗಸ್ಟ್ 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಅದರಲ್ಲಿಯು ಬೆಣ್ಣೆ ಕಳ್ಳ ಕೃಷ್ಣನ ಹುಟ್ಟುಹಬ್ಬವೆಂದರೆ ಎಲ್ಲಾ ತಾಯಂದಿರ ಸಡಗರವು ಹೆಚ್ಚೆ ಎನ್ನಬಹುದು. ಈ ಹಬ್ಬದ ಸಂಭ್ರಮದಂದು ತಮ್ಮ ಮುದ್ದು ಕಂದಮ್ಮನಿಗೆ ರಾಧೆ ಕೃಷ್ಣನ ವೇಷಗಳನ್ನು ತೊಟ್ಟು ಸಂಭ್ರಮಿಸುತ್ತಾರೆ. ಒಂದು ವೇಳೆ ನಿಮ್ಮ ಮಗುವಿಗೆ ಕೃಷ್ಣನ ವೇಷ ಹಾಕಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ.

Krishna Janmashtami 2024 : ನಿಮ್ಮ ಮುದ್ದಾದ ಮಗುವಿಗೆ ಕೃಷ್ಣವೇಷ ಹಾಕುತ್ತಿದ್ದೀರಾ? ಇಲ್ಲಿದೆ ಟಿಪ್ಸ್
ಮುದ್ದಾದ ಮಗುವಿಗೆ ಕೃಷ್ಣವೇಷImage Credit source: Pinterest
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on:Aug 25, 2024 | 10:36 AM

ಕೃಷ್ಣ ಜನ್ಮಾಷ್ಟಮಿಯು ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಅತಿ ದೊಡ್ಡ ಹಿಂದೂ ಹಬ್ಬಗಳಲ್ಲಿ ಒಂದು. ಭಾದ್ರಪದ ಮಾಸದ ಎಂಟನೆಯ ದಿನವು ಕೃಷ್ಣನು ಹುಟ್ಟಿದ ದಿನವಾಗಿದೆ. ಈ ಬಾರಿ ಆಗಸ್ಟ್ 26 ರಂದು ಕೃಷ್ಣ ಜನ್ಮಾಷ್ಟಮಿಯ ಆಚರಿಸಲಾಗುತ್ತದೆ. ಶ್ರೀಕೃಷ್ಣನು ಹುಟ್ಟಿದ ದಿನದಂದು ಕೃಷ್ಣನ ದೇಗುಲಗಳಲ್ಲಿ ವಿಶೇಷವಾದ ಪೂಜೆ ಹಾಗೂ ಆಚರಣೆಗಳಿರುತ್ತದೆ. ಇತ್ತ ಜನ್ಮಾಷ್ಟಮಿ ಹತ್ತಿರ ಬರುತ್ತಿದ್ದಂತೆ ಮುದ್ದು ಕಂದಮ್ಮಗಳಿಗೆ ಕೃಷ್ಣನ ವೇಷ ತೊಡಿಸಿ ತಾಯಂದಿರು ಅವರಲ್ಲಿಯೇ ಮುದ್ದು ಕೃಷ್ಣನನ್ನು ಕಾಣುತ್ತಾರೆ.

ಧೋತಿ :

ಮಾರುಕಟ್ಟೆಯಲ್ಲಿ ಕೃಷ್ಣನ ರೆಡಿಮೆಡ್‌ ಡ್ರೆಸ್‌ಗಳು ದೊರಕುತ್ತವೆ. ಈ ರೆಡಿಮೇಡ್‌ ಬೇಡ ಎನ್ನುವವರು ಮಗುವಿಗೆ ಪುಟ್ಟ ಪಂಚೆ ಅಥವಾ ಧೋತಿಯನ್ನು ತೊಡಿಸಬಹುದು. ಸಿಲ್ಕ್‌ ಅಥವಾ ಕಾಟನ್ ಧೋತಿಗಳು ಲಭ್ಯವಿದ್ದು, ಧೋತಿ ಆಯ್ಕೆ ಮಾಡುವಾಗ ಮಗುವಿನ ಮೈಬಣ್ಣಕ್ಕೆ ಒಪ್ಪುತ್ತದೆಯೇ ಎಂದು ನೋಡಿಕೊಳ್ಳುವುದು ಸೂಕ್ತ.

ಕಿರೀಟ :

ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಕಿರೀಟ ಲಭ್ಯವಿದೆ. ಆದರೆ ಕಿರೀಟ ಖರೀದಿಸುವಾಗ ಹಗುರ ಅಥವಾ ಬಟ್ಟೆಯ ಕಿರೀಟ ಖರೀದಿಸಿದರೆ ಉತ್ತಮ. ಇದು ಮಕ್ಕಳಿಗೆ ಕಿರಿಕಿರಿಯೆನಿಸುವುದಿಲ್ಲ. ಇಲ್ಲವಾದರೆ ಮನೆಯಲ್ಲೇ ರಟ್ಟಿನಿಂದ ಕಿರೀಟವನ್ನು ಮಾಡಿಕೊಳ್ಳಬಹುದಾಗಿದೆ.

ನವಿಲುಗರಿ :

ಕೃಷ್ಣನ ವೇಷದಲ್ಲಿ ಆಕರ್ಷಕವಾಗಿ ಕಾಣುವಂತೆ ಮಾಡುವುದೇ ಈ ನವಿಲುಗರಿ. ಹೀಗಾಗಿ ನಿಮ್ಮ ಮಗುವಿಗೆ ಕೃಷ್ಣ ವೇಷ ಹಾಕಿದರೆ ಕಿರೀಟದ ಬಳಿ ಸಣ್ಣದಾದ ನವಿಲುಗರಿಯನ್ನು ಹಾಕುವುದನ್ನು ಮರೆಯಬೇಡಿ.

ಕೊಳಲು :

ಕೃಷ್ಣನ ಕೊಳಲನಾದಕ್ಕೆ ಎಲ್ಲರೂ ಕೂಡ ತಲೆದೂಗಲೇಬೇಕು. ನಿಮ್ಮ ಮಗುವಿಗೆ ಬಾಲ ಕೃಷ್ಣನ ವೇಷ ಹಾಕುತ್ತಿದ್ದರೆ ಕೊಳಲು ಇರಲೇಬೇಕು. ಮಾರುಕಟ್ಟೆಯಲ್ಲಿ ವಿವಿಧ ಬಣ್ಣ ಹಾಗೂ ವಿನ್ಯಾಸದ ಕೊಳಲು ದೊರಕುತ್ತದೆ. ಇಲ್ಲದಿದ್ದರೆ ಮನೆಯಲ್ಲೇ ಪೈಪ್ ನಿಂದ ಕೊಳಲು ರೆಡಿಮಾಡಬಹುದು. ಅದಲ್ಲದೇ, ನಿಮ್ಮ ಮಗುವಿಗೆ ಕೊಳಲು ಹಿಡಿಯುವುದು ಹೇಗೆ ಎಂದು ಹೇಳಿಕೊಡುವುದು ಮುಖ್ಯ.

ಆಭರಣಗಳು :

ಕೃಷ್ಣನ ವೇಷಕ್ಕೆ ಈ ಮೇಲಿನ ವಸ್ತುಗಳು ಎಷ್ಟು ಮುಖ್ಯವೋ ಆಭರಣಗಳು ಕೂಡ ಅಂದವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಗುವಿಗೆ ಸೊಂಟಪಟ್ಟಿ, ಕೊರಳಿಗೆ, ಕೈಗೆ, ಕಿವಿಗೆ ಸುಂದರವಾದ ಆಭರಣಗಳನ್ನು ಹಾಕಿ. ಆದರೆ ಚುಚ್ಚುವಂತಹ ಆಭರಣಗಳನ್ನು ಆದಷ್ಟು ತಪ್ಪಿಸಿ, ಇದು ಮಗುವಿಗೆ ಕಿರಿಕಿರಿಯಾಗುವಂತೆ ಮಾಡುತ್ತದೆ.

ಇದನ್ನೂ ಓದಿ: ಜನ್ಮಾಷ್ಟಮಿಗೆ ಭೇಟಿ ನೀಡಬಹುದಾದ ಕರ್ನಾಟಕದ ಶ್ರೀಕೃಷ್ಣ ದೇವಾಲಯಗಳಿವು

ಮೇಕಪ್ :

ಮಗುವಿನ ತ್ವಚೆಯು ಸೂಕ್ಷ್ಮವಾಗಿರುವ ಕಾರಣ ಅತಿಯಾಗಿ ಮೇಕಪ್ ಮಾಡುವುದನ್ನು ತಪ್ಪಿಸಿ. ಹಣೆಗೊಂದು ತಿಲಕವಿಡುವುದು ಮಗುವಿಗೆ ಕೃಷ್ಣನ ಕಳೆಯನ್ನು ತಂದುಕೊಡುತ್ತದೆ. ಮಗುವಿನ ಮೈಬಣ್ಣವು ಬಿಳಿಯಿದ್ದರೆ ಹೆಚ್ಚು ಮೇಕಪ್ ಅವಶ್ಯಕತೆಯಿರುವುದಿಲ್ಲ. ಕಪ್ಪು ಬಣ್ಣವಿದ್ದರೂ ಆಭರಣಗಳನ್ನು ತೊಟ್ಟು ಅಲಂಕಾರ ಮಾಡಿದರೆ ಮಗುವು ಸುಂದರವಾಗಿಯೇ ಕಾಣಿಸುತ್ತದೆ. ಬೇಕಿದ್ದರೆ ಸ್ವಲ್ಪ ಪೌಡರ್ ಹಾಕಬಹುದು.

ಮಣ್ಣಿನ ಮಡಿಕೆ :

ಮುದ್ದು ಕೃಷ್ಣನ ವೇಷಕ್ಕೆ ಮಣ್ಣಿನ ಮಡಕೆ ಅಗತ್ಯವಾಗಿರಲೇಬೇಕು. ಚಿಕ್ಕ ಮಣ್ಣಿನ ಮಡಿಕೆಯಲ್ಲಿ ಬೆಣ್ಣೆ ತುಂಬಿ ಕೊಟ್ಟರೆ ನಿಮ್ಮ ಮಗುವನ್ನು ಕೂರಿಸಿ ಫೋಟೋ ಶೂಟ್ ಮಾಡಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 am, Sun, 25 August 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ