Krishna janmashtami 2024 : ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಶ್ರೀಕೃಷ್ಣನ ಸಂದೇಶಗಳಿವು
ನಾಳೆ ಆಗಸ್ಟ್ 26 ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಹಿಂದೂಗಳ ಪ್ರಮುಖ ಹಬ್ಬವಾದ ಜನ್ಮಾಷ್ಟಮಿಯನ್ನು ದೇಶದೆಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕೃಷ್ಣನ ದೇವಾಲಯಗಳು ಮತ್ತು ಮಠಗಳಲ್ಲಿ ವಿಶೇಷ ಪೂಜೆ ಹಾಗೂ ಆಚರಣೆಗಳಿರುತ್ತದೆ. ಧರ್ಮದ ಹಾದಿಯಲ್ಲಿ ನಡೆಯುವ ಶ್ರೀಕೃಷ್ಣನು ಎಲ್ಲರಿಗೂ ಕೂಡ ಪ್ರೇರಣಾದಾಯಕ. ಜಗದ್ದೋದಾರಕನ ಪ್ರತಿಯೊಂದು ನುಡಿಮುತ್ತುಗಳು ಬದುಕಿನಲ್ಲಿ ಯಶಸ್ಸಿಗೆ ಕಾರಣವಾಗಿದೆ.
ಶ್ರೀಕೃಷ್ಣನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲು ಮೀಸಲಾಗಿರುವ ದಿನವೇ ಶ್ರೀ ಕೃಷ್ಣ ಜನ್ಮಾಷ್ಟಮಿ. ಬೆಣ್ಣೆ ಕಳ್ಳ ಕೃಷ್ಣನು ಜನಿಸಿದ ದಿನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯನ್ನು ಸಂಭ್ರಮಿಸುವ ನಾವು ನೀವುಗಳು ಧರ್ಮ ರಕ್ಷಕ ಕೃಷ್ಣ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಕೊಂಡರೆ ಬದುಕಿನಲ್ಲಿ ಯಶಸ್ಸಿನ ದಾರಿಯು ಸುಗಮವಾಗುತ್ತದೆ. ಗೋಪಾಲನ ಈ ಮಾತುಗಳು ಧರ್ಮದ ಹಾದಿಯಲ್ಲಿ ಮುನ್ನಡೆಯಲು ಸದಾ ಪ್ರೇರಣಾದಾಯಕವಾಗಿದೆ.
- ನಾವು ಯಾವುದೇ ಸಮಸ್ಯೆಯಲ್ಲಿದ್ದರೂ ನಮ್ಮ ಕರ್ತವ್ಯವನ್ನು ಮರೆಯಬಾರದು ಎಂಬುದನ್ನು ಹೇಳಿದ್ದಾನೆ. ಧರ್ಮದ ಮಾರ್ಗದಲ್ಲಿ ನಡೆಯಬೇಕೆಂದು ಶ್ರೀಕೃಷ್ಣನು ಹೇಳುತ್ತಾನೆ.
- ಗುರಿಯನ್ನು ಸಾಧಿಸುವಲ್ಲಿ ನೀವು ವಿಫಲವಾದರೇ ತಂತ್ರವನ್ನು ಬದಲಿಸಿ, ಗುರಿಯನ್ನಲ್ಲ
- ಭಾವನೆಗಳಿಗೆ ಒಳಗಾದಾಗ ಅದು ನಮ್ಮನ್ನು ಶಕ್ತಿಹೀನರನ್ನಾಗಿ ಮಾಡುತ್ತದೆ ಮತ್ತು ಕರ್ತವ್ಯದಿಂದ ವಂಚಿತರಾಗುವಂತೆ ಮಾಡುತ್ತದೆ.
- ಧರ್ಮದ ಮಾರ್ಗ ನಮ್ಮ ಭಾವನೆಗೂ ಮೀರಿದ್ದು, ಆದರೆ ವಾತ್ಸಲ್ಯ, ತಿರಸ್ಕಾರ, ಆಸೆಯು ಭಾವನಾತ್ಮಕವಾದುದ್ದಾಗಿದೆ.
- ನಿಮ್ಮ ಕೆಲಸವನ್ನು ನಿಷ್ಠೆ, ಪ್ರಾಮಾಣಿಕವಾಗಿ ಮಾಡಿ, ಅದರಿಂದ ಯಾವುದೇ ಪ್ರತಿಫಲಗಳನ್ನು ನಿರೀಕ್ಷಿಸಬೇಡಿ.
- ಬದಲಾವಣೆಗಳಿಗೆ ಹೆದರಬೇಡಿ, ಬದಲಾವಣೆ ನಿಸರ್ಗದ ನಿಯಮವಾಗಿದೆ.
- ಎಲ್ಲವೂ ಅಂದುಕೊಂಡಂತೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಬಂದದ್ದನ್ನು ಸ್ವೀಕರಿಸುವುದನ್ನು ಕಲಿಯಿರಿ.
- ಯಾವುದೇ ಒಳ್ಳೆಯ ಕಾರ್ಯವಾಗಲಿ ಪ್ರಯತ್ನವೆಂಬುದು ಅಧಿಕವಾದರೆ ಹಣೆಬರಹವು ಕೂಡ ಶಿರ ಭಾಗುತ್ತದೆ.
- ನೀವು ಜೀವನದಲ್ಲಿ ಕಷ್ಟಗಳನ್ನೇ ಅನುಭವಿಸುತ್ತಿದ್ದರೆ ಅದರ ಹಿಂದೆ ಒಂದು ಕಾರಣ ಇದ್ದೆ ಇರುತ್ತದೆ.
- ಎಲಾ ರೀತಿಯ ಕೊಲೆಗಾರರಿಗೆ ಹೋಲಿಸಿದರೆ ಸಮಯವೇ ಅಂತಿಮವಾಗಿದೆ, ಏಕೆಂದರೆ ಅದು ಎಲ್ಲವನ್ನೂ ಕೊಲ್ಲುತ್ತದೆ.
- ನಮ್ಮ ಜೀವನದಲ್ಲಿ ನಾವು ಮಾಡುವ ತೀರ್ಮಾನಗಳು ನಮ್ಮ ಹಣೆಬರಹವನ್ನು ನಿರ್ದೇಶಿಸುತ್ತವೆ.
- ನಾವು ಮಾಡುವ ಕೆಲಸವನ್ನು ನಾವು ಯಾವಾಗಲೂ ಗೌರವಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Sun, 25 August 24