Legal Advice: ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು

ತಮ್ಮ ಪ್ರೀತಿಗೆ ಪೋಷಕರು, ಕುಟುಂಬದವರು ವಿರೋಧ ವ್ಯಕ್ತ ಪಡಿಸಿದಾಗ ಕೆಲ ಪ್ರೇಮಿಗಳು ಓಡಿ ಹೋಗಿ ಮದುವೆಯಾಗಲು ನಿರ್ಧಾರ ಮಾಡುತ್ತಾರೆ. ಹೀಗೆ ಓಡಿ ಹೋಗಿ ಕೋರ್ಟ್‌ ಮ್ಯಾರೇಜ್‌ ಆದಂತಹ ಅದೆಷ್ಟೋ ಜೋಡಿಗಳಿದ್ದಾರೆ. ಹೀಗೆ ಪ್ರೇಮಿಗಳು ಕೋರ್ಟ್‌ ಮ್ಯಾರೇಜ್‌ ಆಗುತ್ತಿದ್ದಾರೆ ಎಂದಾದರೆ ಇದಕ್ಕೆ ಕೆಲವೊಂದಿಷ್ಟು ಅಗತ್ಯ ದಾಖಲೆಗಳು ಬೇಕಾಗುತ್ತವೆ. ಈ ಪ್ರೇಮ ವಿವಾಹಕ್ಕೆ ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Legal Advice: ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Apr 29, 2025 | 8:18 PM

ಜಾತಿ, ಆಸ್ತಿ-ಅಂತಸ್ತು, ಪ್ರತಿಷ್ಠೆಯ ಕಾರಣಗಳಿಗಾಗಿ ಕೆಲ ಮನೆಯವರು ತಮ್ಮ ಮಕ್ಕಳ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಹೀಗೆ ಮನೆಯವರು ತಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದಾಗ ಪ್ರೇಮಿಗಳು (Lovers) ಓಡಿ ಹೋಗಿ ಕೋರ್ಟ್‌ ಮ್ಯಾರೇಜ್‌ನ (Court Marrige) ಹಾದಿಯನ್ನು ಹಿಡಿಯುತ್ತಾರೆ. ಹೀಗೆ ಓಡಿ ಹೋಗಿ ಕೋರ್ಟ್‌ ಮ್ಯಾರೇಜ್‌ ಮಾಡಿಕೊಂಡಂತಹ ಸುಮಾರಷ್ಟು ಜೋಡಿಗಳಿದ್ದಾರೆ.  ಇನ್ನೂ ಅನೇಕ ಮಂದಿ ತಮ್ಮ ಕುಟುಂಬ ಸದಸ್ಯರ ಒಪ್ಪಿಗೆಯೊಂದಿಗೆ ಆಡಂಬರವಿಲ್ಲದೆ ಕೋರ್ಟ್‌ ಮ್ಯಾರೇಜ್‌ ಮಾಡಿಕೊಳ್ಳುತ್ತಾರೆ.  ಹೀಗೆ ತಮ್ಮ ಪ್ರೇಮ ವಿವಾಹಕ್ಕೆ ಕಾನೂನು ಅನುಮೋದನೆ ಪಡೆಯಲು, ಪ್ರೇಮಿಗಳು ಹಲವು ರೀತಿಯ ದಾಖಲೆಗಳನ್ನು ಸಲ್ಲಿಸಲೇಬೇಕಾಗುತ್ತದೆ. ಹಾಗಾದ್ರೆ ಪ್ರೇಮಿಗಳು ಮನೆಯವರ ವಿರೋಧದ ನಡುವೆಯೂ ಕೋರ್ಟ್‌ ಮ್ಯಾರೇಜ್‌ ಆಗ್ತಿದ್ದಾರೆ ಎಂದಾದರೆ ಈ ಪ್ರೇಮ ವಿವಾಹಕ್ಕೆ (Love Marriage) ಯಾವೆಲ್ಲಾ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ ಎಂಬುದನ್ನು ತಿಳಿಯಿರಿ.

ಪ್ರೇಮ ವಿವಾಹಕ್ಕೆ ಅಗತ್ಯವಾಗಿ ಬೇಕಾಗಿರುವ ದಾಖಲೆಗಳು:

ನೀವು ಕೋರ್ಟ್‌ ಮ್ಯಾರೇಜ್‌ ಅಥವಾ ವಿಶೇಷ ವಿವಾಹ ಕಾಯ್ದೆ 1954 ಅಡಿಯಲ್ಲಿ ಪ್ರೇಮ ವಿವಾಹ ಆಗುತ್ತಿದ್ದರೆ, ಈ ಕೆಲವೊಂದು ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತವೆ. ಅವುಗಳೆಂದರೆ,

  • ಜನನ ಪ್ರಮಾಣ ಪತ್ರ, 10 ನೇ ತರಗತಿಯ ಅಂಕಪಟ್ಟಿ,
  • ಗುರುತಿನ ಪುರಾವೆಗೆ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸನ್ಸ್‌ ಇತ್ಯಾದಿ.
  • ವಿಳಾಸ ಪುರಾವೆಗೆ: ಮತದಾರರ ಗುರುತಿನ ಚೀಟಿ, ವಿದ್ಯುತ್‌ ಬಿಲ್‌, ನೀರಿನ ಬಿಲ್‌, ಬ್ಯಾಂಕ್‌ ಸ್ಟೇಟ್‌ಮೆಂಟ್‌ ಇತ್ಯಾದಿ.
  • ಪಾಸ್‌ಪೋರ್ಟ್ ಸೈಜ್ ಫೋಟೋ (4-6)
  • ಒಂದು ವೇಳೆ ಈ ಮುಂಚೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರೆ, ನ್ಯಾಯಾಲಯವು ನೀಡಿದ ವಿಚ್ಛೇದನ ತೀರ್ಪಿನ ಪ್ರಮಾಣೀಕೃತ ಪ್ರತಿ, ಮೊದಲ ಪತಿ ಅಥವಾ ಪತ್ನಿ ತೀರಿ ಹೋಗಿದ್ದರೆ ಮರಣ ಪ್ರಮಾಣ ಪತ್ರ

ಇದನ್ನೂ ಓದಿ: 8 ಗಂಟೆ ಕೆಲಸವನ್ನು 4 ಗಂಟೆಯಲ್ಲಿ ಮುಗಿಸಬಹುದು, ಕೆಲಸದ ಕಡೆ ಗಮನ ಹೆಚ್ಚಿಸಲು ಇದು ಸಹಕಾರಿ

ಇದನ್ನೂ ಓದಿ
8 ಗಂಟೆ ಕೆಲಸವನ್ನು 4 ಗಂಟೆಯಲ್ಲಿ ಮುಗಿಸಬಹುದು, ಹೇಗೆ?
ಮೇ ತಿಂಗಳಿನಲ್ಲಿ ಆಚರಿಸುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳು
ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಒಂದೇ ರೇಖಾಂಶದಲ್ಲಿ ನೆಲೆಗೊಂಡಿರುವ ಎಂಟು ಶಿವ ದೇವಾಲಯಗಳಿವು

ಹುಡುಗನಿಗೆ 21 ವರ್ಷಕ್ಕಿಂತ ಕಡಿಮೆ ಮತ್ತು ಹುಡುಗಿಗೆ 18 ವರ್ಷಕ್ಕಿಂತ ಕಡಿಮೆ ಇದ್ದರೆ ಮದುವೆ ಸಾಧ್ಯವಿಲ್ಲ. ವಯಸ್ಸಿನ ಜೊತೆಗೆ ಇಬ್ಬರೂ ಮಾನಸಿಕವಾಗಿ ಸಮರ್ಥರಾಗಿರಬೇಕು. ಒಬ್ಬ ವ್ಯಕ್ತಿ ಈಗಾಗಲೇ ಮದುವೆಯಾಗಿದ್ದರೆ, ಆತ ಇನ್ನೊಂದು ಮದುವೆಯಾಗಲು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರಬೇಕು. ಮದುವೆಗೆ 30 ದಿನಗಳ ಮೊದಲು ಈ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಕನಿಷ್ಠ ಮೂವರು ಸಾಕ್ಷಿಗಳ ಉಪಸ್ಥಿತಿ ಕಡ್ಡಾಯವಾಗಿರಬೇಕು. ಜೊತೆಗೆ ವಿವಾಹ ಅಧಿಕಾರಿಗಳ ಸಮ್ಮುಖದಲ್ಲಿಯೇ ಮದುವೆ ನಡೆಸಬೇಕು.

ಕುಟುಂಬದಿಂದ ಯಾವುದೇ ಬೆದರಿಕೆ ಇದ್ದರೆ (ಮರ್ಯಾದಾ ಹತ್ಯೆಯ ಅಪಾಯ), ಹೈಕೋರ್ಟ್‌ನಲ್ಲಿ ರಕ್ಷಣಾ ಅರ್ಜಿಯನ್ನು ಸಹ ಸಲ್ಲಿಸಬಹುದು. ಪ್ರೀತಿಸಿ ಮದುವೆಯಾದ ದಂಪತಿಗಳಿಗೆ ಭದ್ರತೆ ಒದಗಿಸಲು ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ವಿಶೇಷ ಕೋಶಗಳನ್ನು ರಚಿಸಲಾಗಿದೆ.

ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಪ್ರಮುಖ ತೀರ್ಪುಗಳು:

ಲತಾ ಸಿಂಗ್ vs ಉತ್ತರ ಪ್ರದೇಶ ರಾಜ್ಯ (2006) 5 SCC 475. ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ವಯಸ್ಕ ಹುಡುಗರು ಮತ್ತು ಹುಡುಗಿಯರು ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಮತ್ತು ಅವರೊಂದಿಗೆ ವಾಸಿಸಲು ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ. ಇದಕ್ಕೆ ಕುಟುಂಬ ಅಥವಾ ಸಮಾಜದ ಹಸ್ತಕ್ಷೇಪ ಕಾನೂನುಬಾಹಿರ ಎಂಬುದನ್ನು ಹೇಳಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ