LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

| Updated By: ಝಾಹಿರ್ ಯೂಸುಫ್

Updated on: Jul 31, 2021 | 5:57 PM

ನೀವು 2 ಲಕ್ಷ ರೂ ವಿಮಾ ಮೊತ್ತದ ಪಾಲಿಸಿಯನ್ನು ತೆಗೆದುಕೊಂಡರೆ, ಮೊದಲ ಐದು ವರ್ಷಗಳಲ್ಲಿ ವಿಮಾ ಮೊತ್ತದ ವ್ಯಾಪ್ತಿ 2 ಲಕ್ಷ, 6 ರಿಂದ 10 ವರ್ಷಗಳವರೆಗೆ 2.50 ಲಕ್ಷ, 11 ರಿಂದ 15 ವರ್ಷಗಳವರೆಗೆ 3 ಲಕ್ಷ ಮತ್ತು 16 ರಿಂದ 20 ರವರೆಗೆ ವರ್ಷಗಳ ವ್ಯಾಪ್ತಿ 4 ಲಕ್ಷ ರೂ. ಆಗಿರುತ್ತದೆ.

LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ
LIC
Follow us on

ನೀವು ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ (LIC)ನ ಯಾವುದಾದರೂ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಜೀವನ್ ಪ್ರಗತಿ ಸ್ಕೀಮ್ (Jeevan Pragati Scheme)​ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಈ ಪಾಲಿಸಿಯಲ್ಲಿ ನೀವು ದಿನಕ್ಕೆ 200 ರೂ.ಗಳನ್ನು ಹೂಡಿಕೆ ಮಾಡಿದರೆ ಸಾಕು. ಆ ಬಳಿಕ 28 ಲಕ್ಷ ರೂಪಾಯಿಯಾಗಿ ಹಿಂಪಡೆಯಬಹುದು. ಅಷ್ಟೇ ಅಲ್ಲದೆ ಈ ಪಾಲಿಸಿಯ ಮತ್ತೊಂದು ವಿಶೇಷತೆಯೆಂದರೆ ಇದರಲ್ಲಿ ನೀವು 15,000 ಕ್ಕಿಂತ ಹೆಚ್ಚು ಪಿಂಚಣಿಯನ್ನು ಸಹ ಪಡೆಯಬಹುದು. ಹಾಗಿದ್ರೆ ಈ ವಿಶೇಷ ಯೋಜನೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ…

LIC ಜೀವನ್ ಪ್ರಗತಿ ಯೋಜನೆ (Jeevan Pragati Scheme):
LIC ಯ ಜೀವನ್ ಪ್ರಗತಿ ಯೋಜನೆ ಪಾಲಿಸಿಯಲ್ಲಿ ನೀವು ಎಷ್ಟು ವಿಮಾ ಮೊತ್ತವನ್ನು ಪಡೆಯುತ್ತೀರಿ ಅದು ಅಂತ್ಯದ ವೇಳೆಗೆ ಸುಮಾರು ಎರಡು ಪಟ್ಟು ಹೆಚ್ಚಾಗುತ್ತದೆ. ಇದೊಂದು ನಾನ್​ ಲಿಂಕ್ ಪಾಲಿಸಿ ಆಗಿರುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತೆ.

ಈ ಪಾಲಿಸಿಯ ಪ್ರಯೋಜನಗಳೇನು?
ಅಲ್ಪಾವಧಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಪಾಲಿಸಿದಾರನು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅವುಗಳಲ್ಲಿ ಮುಖ್ಯವಾದವು ಈ ಕೆಳಗಿನಂತಿವೆ.

>> ಇದು ಒಂದು ದತ್ತಿ ಯೋಜನೆಯಾಗಿದ್ದು, ಇಲ್ಲಿ ಹೂಡಿಕೆ ಮಾಡುವುದು ಹೆಚ್ಚು ಭದ್ರತೆ ಹಾಗೂ ಇದು ಹೆಚ್ಚಿನ ಉಳಿತಾಯವನ್ನು ಒದಗಿಸುತ್ತದೆ.
>> ಪಾಲಿಸಿಯಲ್ಲಿ ರಿಸ್ಕ್ ಕವರ್ ಪ್ರತಿ ಐದು ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ.
>> ಮೊದಲ ಐದು ವರ್ಷಗಳ ವಿಮಾ ಮೊತ್ತವು ಒಂದೇ ಆಗಿರುತ್ತದೆ.
>> ಇದರ ನಂತರ 6 ರಿಂದ 10 ವರ್ಷಗಳೊಳಗೆ ಇದು 25% ರಿಂದ 125% ಗೆ ಹೆಚ್ಚಾಗುತ್ತದೆ.
>> 11 ರಿಂದ 15 ವರ್ಷಗಳವರೆಗೆ ವಿಮಾ ಮೊತ್ತವು 150% ಆಗುತ್ತದೆ.
>> 16 ರಿಂದ 20 ವರ್ಷಗಳವರೆಗೆ ವಿಮಾ ಮೊತ್ತವು ಮೂಲ ವಿಮೆಯ 200% ಆಗುತ್ತದೆ.

ಅಕಾಲಿಕ ಮರಣವಾದ್ರೆ?
ಈ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಮರಣ ಹೊಂದಿದರೆ ಸಾವಿನ ಮೇಲೆ ವಿಮಾ ಮೊತ್ತ + ಸರಳ ರಿವರ್ಷನರಿ ಬೋನಸ್ (ಠೇವಣಿ ಬೋನಸ್) + ಅಂತಿಮ ಸೇರ್ಪಡೆ ಬೋನಸ್ (ಯಾವುದಾದರೂ ಇದ್ದರೆ) ಆತನ/ಅವಳ ನಾಮಿನಿಗೆ ಪಾವತಿಸಲಾಗುತ್ತದೆ.

ಅಂದರೆ, ನೀವು 2 ಲಕ್ಷ ರೂ ವಿಮಾ ಮೊತ್ತದ ಪಾಲಿಸಿಯನ್ನು ತೆಗೆದುಕೊಂಡರೆ, ಮೊದಲ ಐದು ವರ್ಷಗಳಲ್ಲಿ ವಿಮಾ ಮೊತ್ತದ ವ್ಯಾಪ್ತಿ 2 ಲಕ್ಷ, 6 ರಿಂದ 10 ವರ್ಷಗಳವರೆಗೆ 2.50 ಲಕ್ಷ, 11 ರಿಂದ 15 ವರ್ಷಗಳವರೆಗೆ 3 ಲಕ್ಷ ಮತ್ತು 16 ರಿಂದ 20 ರವರೆಗೆ ವರ್ಷಗಳ ವ್ಯಾಪ್ತಿ 4 ಲಕ್ಷ ರೂ. ಆಗಿರುತ್ತದೆ. ಅಂದರೆ ವರ್ಷ ಕಳೆಯುತ್ತಿದ್ದಂತೆ ವಿಮಾ ಮೊತ್ತವು ದುಪ್ಪಟ್ಟಾಗುತ್ತದೆ. ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯ ಕೂಡ ಈ ಪಾಲಿಸಿಯ ಅಡಿಯಲ್ಲಿ ಬರುತ್ತದೆ. ಇದಕ್ಕಾಗಿ ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

28 ಲಕ್ಷ ರೂ ಸಿಗಲಿದೆ:
ಈ ಯೋಜನೆಯಡಿಯಲ್ಲಿ, 20 ವರ್ಷಗಳ ನಂತರ 15 ಲಕ್ಷಗಳ ಮೊತ್ತದ ವಿಮಾ ಮೊತ್ತ ಮತ್ತು 200 ರೂಗಳ ದೈನಂದಿನ ಹೂಡಿಕೆಯ ಮೇಲೆ ನೀವು ಸುಮಾರು 28 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಎಲ್ಐಸಿ ಜೀವನ್ ಪ್ರಗತಿ ಯೋಜನೆಯ ನಿಯಮಗಳು:
ವಯಸ್ಸು: 12 ರಿಂದ 45 ವರ್ಷಗಳಿನವರು ಈ ಪಾಲಿಸಿ ಪಡೆಯಬಹುದು.
ಪಾಲಿಸಿ ಅವಧಿ: 12 ರಿಂದ 20 ವರ್ಷಗಳು
ಗರಿಷ್ಠ ಮೆಚ್ಯೂರಿಟಿ ವಯಸ್ಸು: 65 ವರ್ಷಗಳು
ಕವರ್ ಮೊತ್ತ ಕನಿಷ್ಠ ರೂ .1,50,000
ಗರಿಷ್ಠ ಯಾವುದೇ ಮಿತಿ ಇಲ್ಲ

ಎಲ್‌ಐಸಿ ಜೀವನ್ ಪ್ರಗತಿ ಯೋಜನೆಯ ಸೆರೆಂಡರ್ ವ್ಯಾಲ್ಯೂ:
ಪಾಲಿಸಿದಾರರು 3 ವರ್ಷಗಳ ಕಾಲ ಪ್ರೀಮಿಯಂ ಪಾವತಿಸಿದ್ದರೆ ಅವರು ಪಾಲಿಸಿಯನ್ನು ಒಪ್ಪಿಸಬಹುದು ಮತ್ತು ಸೆರೆಂಡರ್ ಮೌಲ್ಯವನ್ನು ಪಡೆಯಬಹುದು.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

 

( lic jeevan pragati yojana invest 200 rupees daily and get 28 lakh )