Event Calendar November 2023: ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತರಾಷ್ಟ್ರೀಯ ದಿನಾಚರಣೆಗಳು ಇಲ್ಲಿದೆ
ನವೆಂಬರ್ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹೀಗೆ ಎರಡೂ ಪ್ರಮುಖ ದಿನಾಚರಣೆಗಳಿಂದ ಕೂಡಿದ ತಿಂಗಳು. ಈ ಪ್ರಮುಖ ದಿನಾಚರಣೆಗಳು ಪ್ರಮುಖ ವಿಷಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು, ಐತಿಹಾಸಿಕ ಘಟನೆಗಳು ಮತ್ತು ಸಾಂಸ್ಕೃತಿಕ ತಿಳುವಳಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಆಚರಿಸಲಾಗುತ್ತದೆ. ಹಾಗಾದರೆ ನವೆಂಬರ್ ತಿಂಗಳಿನಲ್ಲಿ ಆಚರಿಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆಚರಣೆಗಳ ಬಗ್ಗೆ ತಿಳಿದುಕೊಳ್ಳೋಣ.
![Event Calendar November 2023: ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತರಾಷ್ಟ್ರೀಯ ದಿನಾಚರಣೆಗಳು ಇಲ್ಲಿದೆ](https://images.tv9kannada.com/wp-content/uploads/2023/10/lifestyle-news-in-kannada-2023-10-25t162524.688.jpg?w=1280)
ನವೆಂಬರ್ ವರ್ಷದ 11ನೇ ತಿಂಗಳಾಗಿದ್ದು, ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಎರಡೂ ಪ್ರಮುಖ ದಿನಾಚರಣೆಗಳಿಂದ ಕೂಡಿದ ತಿಂಗಳು. ಈ ಪ್ರತಿಯೊಂದು ಆಚರಣೆಗಳು ತನ್ನದೇ ಆದ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ವಿಶ್ವ ಸುನಾಮಿ ಜಾಗೃತಿ ದಿನ, ರಾಷ್ಟ್ರೀಯ ಕ್ಯಾನ್ಸರ್ ದಿನ, ರಾಷ್ಟ್ರೀಯ ಕಾನೂನು ಸೇವೆಗಳ ದಿನ, ಅಂತರಾಷ್ಟ್ರೀಯ ಪುರುಷರ ದಿನ ಹೀಗೆ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳನ್ನು ಈ ತಿಂಗಳಲ್ಲಿ ಆಚರಿಸಲಾಗುತ್ತದೆ. ಪ್ರಮುಖ ವಿಷಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು, ಐತಿಹಾಸಿಕ ಘಟನೆಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ಈ ಪ್ರಮುಖ ದಿನಗಳನ್ನು ಆಚರಿಸಲಾಗುತ್ತದೆ. ಹಾಗಾದರೆ ನವೆಂಬರ್ ತಿಂಗಳಲ್ಲಿ ಆಚರಿಸಲಾಗುವು ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆಚರಣೆಗಳ ಬಗ್ಗೆ ತಿಳಿದುಕೊಳ್ಳೋಣ.
ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:
ವಿಶ್ವ ಸಸ್ಯಹಾರಿ ದಿನ:
ಮಾಂಸ ಮತ್ತು ಡೈರಿ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಈ ಜಗತ್ತಿನಲ್ಲಿ ಸಸ್ಯಹಾರದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ 1 ರಂದು ವಿಶ್ವ ಸಸ್ಯಹಾರಿ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಸುನಾಮಿ ಜಾಗೃತಿ ದಿನ:
ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು, ಭೂ ಕುಸಿತ, ಸುನಾಮಿ ಇತ್ಯಾದಿ ನೈಸರ್ಗಿಕ ವಿಕೋಪಗಳು, ಅದರ ಪರಿಣಾಮಗಳು ಮತ್ತು ಇಂತಹ ಘಟನೆ ಸಂಭವಿಸಿದಾಗ ಜನರು ಯಾವ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನವೆಂಬರ್ 5 ರಂದು ವಿಶ್ವ ಸುನಾಮಿ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
ಶಿಶು ಸಂರಕ್ಷಣಾ ದಿನ:
ಶಿಶುಗಳ ಅಪೌಷ್ಟಿಕತೆ, ಸೋಂಕುಗಳು, ಕಾಯಿಲೆಗಳು, ನಿಂದನೆ, ನಿರ್ಲಕ್ಷ್ಯ ಮತ್ತು ಶೋಷಣೆಗಳನ್ನು ತಡೆಗಟ್ಟಲು ಹಾಗೂ ಶಿಶುಗಳ ಹಕ್ಕು ಮತ್ತು ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 7 ರಂದು ಶಿಶು ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಕ್ಯಾನ್ಸರ್ ದಿನ:
ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ ರೋಗದ ತಡೆಗಟ್ಟುವಿಕೆ, ರೋಗನಿರ್ಣಯ, ಚಿಕಿತ್ಸೆ ಮತ್ತು ಕ್ಯಾನ್ಸರ್ ರೋಗಿಗಳ ಆರೈಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಕಾನೂನು ಸೇವೆಗಳ ದಿನ:
ಭಾರತದ ಎಲ್ಲಾ ನಾಗರಿಕರಿಗೆ ವಿಶೇಷವಾಗಿ ಸಮಾಜದ ಬಡ ವರ್ಗದವರಿಗೆ ಉಚಿತ ಕಾನೂನು ಸಹಾಯವನ್ನು ಉತ್ತೇಜಿಸಲು ಮತ್ತು ಕಾನೂನು ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಲು ಭಾರತದಲ್ಲಿ ನವೆಂಬರ್ 9 ರಂದು ರಾಷ್ಟ್ರೀಯ ಕಾನೂನು ಸೇವಾ ದಿನವನನು ಆಚಸಲಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ದಿನ:
ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನದ ನೆನಪಿಗಾಗಿ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಮಹತ್ವ ಮತ್ತು ಈ ವರ್ಷದ ಥೀಮ್ ಏನು ಗೊತ್ತಾ?
ವಿಶ್ವ ನ್ಯಮೋನಿಯಾ ದಿನ:
ನ್ಯುಮೋನಿಯ ಕಾಯಿಲೆ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 12 ರಂದು ವಿಶ್ವ ನ್ಯುಮೋನಿಯ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ದಯೆ ದಿನ:
ಜನರು ಇತರರ ಮೇಲೆ ದಯೆ ಮತ್ತು ಸಹಾನುಭೂತಿಯನ್ನು ತೋರಬೇಕೆನ್ನುವ ಸಲುವಾಗಿ ನವೆಂಬರ್ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತದೆ.
ಮಕ್ಕಳ ದಿನಾಚರಣೆ:
ಪಂಡಿತ್ ಜವರರಲಾಲ್ ನೆಹರೂ ಅವರ ಜನ್ಮದಿನದ ನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಪ್ರತಿವರ್ಷ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ವಿಶ್ವ ಮಧುಮೇಹ ದಿನ:
ಮಧುಮೇಹ ಕಾಯಿಲೆಯ ಪರಿಣಾಮ, ಅದರ ತಡಗಟ್ಟುವಿಕೆ ಮತ್ತು ಮಧುಮೇಹ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ:
ಅಪಸ್ಮಾರ ಕಾಯಿಲೆ, ಅದರ ಲಕ್ಷಣಗಳು ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ನವೆಂಬರ್ 17 ರಂದು ರಾಷ್ಟ್ರೀಯ ಅಪಸ್ಮಾರ ದಿನವನ್ನು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಪುರುಷರ ದಿನ:
ಪುರುಷರ ಆರೋಗ್ಯನ್ನು ಉತ್ತೇಜಿಸಲು ಹಾಗೂ ಪುರುಷರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 19 ರಂದು ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಶೌಚಾಲಯ ದಿನ:
ಜಾಗತಿಕ ನೈರ್ಮಲ್ಯದ ಮಹತ್ವ ಹಾಗೂ ಶುಚಿತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಲಸು ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಮಕ್ಕಳ ದಿನಾಚರಣೆ:
ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು, ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದ ವಂಚಿತರಾದ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಒದಗಿಸಲು, ಮಕ್ಕಳ ಕಲ್ಯಾಣವನ್ನು ಸುಧಾರಿಸಲು ವಿಶ್ವ ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ನವೆಂಬರ್ 20 ರಂದು ಆಚರಿಸಲಾಗುತ್ತದೆ
ವಿಶ್ವ ದೂರದರ್ಶನ ದಿನ:
ಸಂವಹನ ಮತ್ತು ಜನರ ದೈನಂದಿನ ಜೀವನದಲ್ಲಿ ದೂರದರ್ಶನದ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಲಸು ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನ:
ಮಹಿಳೆಯ ಮೇಲಿನ ದೌರ್ಜನ್ಯವನ್ನು, ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನವನ್ನು ಪ್ರತಿವರ್ಷ ನವೆಂಬರ್ 25 ರಂದು ಆಚರಿಸಲಾಗುತ್ತದೆ.
ಭಾರತದ ಸಂವಿಧಾನ ದಿನ:
ಭಾರತದ ಸಂವಿಧಾನದ ಅಂಗೀಕಾರದ ನೆನಪಿಗಾಗಿ ಪ್ರತಿವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ