LPG Cylinder: ಗ್ಯಾಸ್ ಸಿಲಿಂಡರ್‌ ಬಣ್ಣ ಕೆಂಪು ಯಾಕೆ? ಇಲ್ಲಿದೆ ಇಂಟ್ರೆಸ್ಟ್ರಿಂಗ್ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 12, 2022 | 12:19 PM

ನಿಮ್ಮ ದೈನಂದಿನ ಜೀವನದಲ್ಲಿ ಬಳಸುವ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಕುರಿತು ಕೆಲವು ಸಂಗತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ಹೌದು ನೀವು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ ಯಾಕೆ ಕೆಂಪು ಬಣ್ಣ ಇರುತ್ತದೆ. ಈ ಬಗ್ಗೆ ಇಂಟ್ರೆಸ್ಟ್ರಿಂಗ್ ಸ್ಟೋರಿ ಇಲ್ಲಿದೆ.

LPG Cylinder: ಗ್ಯಾಸ್ ಸಿಲಿಂಡರ್‌ ಬಣ್ಣ ಕೆಂಪು ಯಾಕೆ? ಇಲ್ಲಿದೆ ಇಂಟ್ರೆಸ್ಟ್ರಿಂಗ್ ಮಾಹಿತಿ
LPG Cylinder
Follow us on

ನೀವು ಮನೆಯಲ್ಲಿ ಬಳಸುವ ಪ್ರತಿಯೊಂದು ವಸ್ತುಗಳಿಗೂ ಒಂದೊಂದು ವಿಶೇಷವಾದ ವಿಚಾರ ಇರುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಬಳಸುವ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಕುರಿತು ಕೆಲವು ಸಂಗತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ಹೌದು ನೀವು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ ಯಾಕೆ ಕೆಂಪು ಬಣ್ಣ ಇರುತ್ತದೆ ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು. ಅದರೂ ಬಗ್ಗೆ ಇಲ್ಲೊಂದು ಆಸಕ್ತಿದಾಯಕ ವಿಚಾರಗಳನ್ನು ತಿಳಿಸಲಾಗಿದೆ.

ಸಿಲಿಂಡರ್ ಕೆಂಪು ಬಣ್ಣ ಯಾಕೆ?

ಸಿಲಿಂಡರ್​ ಯಾವಾಗಲೂ ಕೆಂಪು ಬಣ್ಣದಲ್ಲಿ ಇರುತ್ತದೆ. ಯಾಕೆ ಗೊತ್ತಾ? ಏಕೆಂದರೆ ಕೆಂಪು ಅಪಾಯದ ಸಂಕೇತವಾಗಿದೆ ಮತ್ತು ಕೆಂಪು ಬಣ್ಣವು ಗರಿಷ್ಠ ತರಂಗಾಂತರವನ್ನು ಹೊಂದಿದೆ ಮತ್ತು ಇತರ ಬಣ್ಣಗಳಿಗೆ ಹೋಲಿಸಿದರೆ ಅದು ಎದ್ದು ಕಾಣುತ್ತದೆ.  ನೀವು ಅದನ್ನು ದೂರದಿಂದ ನೋಡಿದ್ರು ಬೇಗ ಪತ್ತೆ ಮಾಡುತ್ತೀರಾ.

ಸಿಲಿಂಡರ್​ನ ಆಕಾರ

ಇದರ ಆಕಾರವು ಯಾವಾಗಲೂ ಸಿಲಿಂಡರಾಕಾರವಾಗಿರುತ್ತದೆ. ಕಾರಣವೆಂದರೆ ಇದು ಒತ್ತಡದಿಂದ ಸಂಗ್ರಹಣೆಯಾಗಿರುತ್ತದೆ. ಇದರಿಂದಾಗಿ ಒತ್ತಡವನ್ನು ಏಕರೂಪವಾಗಿ ಇಡಲು ಸಾಧ್ಯ. ಇದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಅಥವಾ ವಿತರಿಸಲು ಸುಲಭವಾಗಿತ್ತದೆ.

ಸಿಲಿಂಡರ್ ತೂಕ

ಸಾಮಾನ್ಯವಾಗಿ ಸಿಲಿಂಡರ್‌ನ ಖಾಲಿ ತೂಕ 15.3 ಕೆಜಿ ಮತ್ತು ಗ್ಯಾಸ್‌ ತುಂಬಿದ ಸಿಲಿಂಡರ್‌ನ ತೂಕ 29.5 ಕೆಜಿ ಇರುತ್ತದೆ. ಅಂದರೆ ಒಟ್ಟು 14.2 ಕೆಜಿ ಚಾರ್ಜ್ ಮಾಡಿದ ಅನಿಲದ ತೂಕ. ಈ ತೂಕದ ಸಿಲಿಂಡರ್ ಅನ್ನು ಗೃಹ ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತದೆ.

ತುಂಬಿದ ಅನಿಲ ಶಬ್ದ

ಇದು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಎಲ್‌ಪಿಜಿಯಲ್ಲಿ ಪ್ರೊಪೇನ್ ಅಥವಾ ಬ್ಯುಟೇನ್ ಎಂಬ ಉಪವರ್ಗವಿದೆ. ನೀವು ಸಿಲಿಂಡರ್ ಒಂದು ಕಡೆಯಿಂದ ಸಾಗಿಸುವಾಗ ಇದರ ಶಬ್ದ ದ್ರವದಂತೆ ಧ್ವನಿಸುತ್ತದೆ. ಗ್ಯಾಸ್ ತುಂಬಿದ ಸಿಲಿಂಡರ್​ಗಳಲ್ಲಿ ಯಾವ ರೀತಿ ಶಬ್ದಗಳು ಬರುತ್ತದೆ. ಎಂಬ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿಕೊಳ್ಳಬಹುದು. ಇದಕ್ಕೆ ಉತ್ತರ ಅದನ್ನು ದ್ರವ ಸ್ಥಿತಿಗೆ ಸಂಕುಚಿತಗೊಳಿಸಲಾಗಿದೆ.

ಮುಕ್ತಾಯ ದಿನಾಂಕ

ಸಿಲಿಂಡರ್‌ನಲ್ಲಿರುವ ಸಂಖ್ಯೆಗಳು ಮತ್ತು ಬರಹಗಳು ಎನ್‌ಕೋಡ್ ಮಾಡಲಾದ ಮುಕ್ತಾಯ ದಿನಾಂಕವನ್ನು ಸೂಚಿಸುತ್ತವೆ.

ಉದಾಹರಣೆಗೆ

ಉ:- ಜನವರಿಯಿಂದ ಮಾರ್ಚ್

ಬಿ :- ಏಪ್ರಿಲ್ ನಿಂದ ಜೂನ್

ಸಿ:- ಜುಲೈನಿಂದ ಸೆಪ್ಟೆಂಬರ್.

ಡಿ: ಅಕ್ಟೋಬರ್ ನಿಂದ ಡಿಸೆಂಬರ್.

ಮತ್ತು ಸಂಖ್ಯೆ ಎಂದರೆ ವರ್ಷ. ನಿರ್ದಿಷ್ಟ ವರ್ಷ ಮತ್ತು ತಿಂಗಳ ನಂತರ, ಸಿಲಿಂಡರ್ ಅವಧಿ ಮುಗಿಯುತ್ತದೆ.

ಸಂಖ್ಯೆ ಮತ್ತು ವರ್ಣಮಾಲೆಯ ಪ್ರಕಾರ, D ಎಂದರೆ ಸೆಪ್ಟೆಂಬರ್ ನಿಂದ ಡಿಸೆಂಬರ್ ಮತ್ತು 13 ಎಂದರೆ 2013. ಅಂದರೆ ಸೆಪ್ಟೆಂಬರ್ 2013 ರಿಂದ ಡಿಸೆಂಬರ್ 2013 ರವರೆಗೆ, ಸಿಲಿಂಡರ್ ಅವಧಿ ಮುಗಿಯುತ್ತದೆ ಮತ್ತು ಈ ಅವಧಿಯ ನಂತರ ಬಳಸುವಂತಿಲ್ಲ.