ಮಾವಿನ ಹಣ್ಣನ್ನು ಹಾಗೆಯೇ ತಿಂದರೂ ರುಚಿಯೇ, ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಈ ಮಾವಿನ ಹಣ್ಣಿನಿಂದ ತಯಾರಿಸುವ ಮ್ಯಾಂಗೊ ಲಸ್ಸಿಯ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ. ವಿಶ್ವದ ಟಾಪ್ 16 ಡೇರಿ ಪಾನೀಯಗಳ ಪಟ್ಟಿಯಲ್ಲಿ ಮ್ಯಾಂಗೊ ಲಸ್ಸಿ ಮೊದಲ ಸ್ಥಾನ ಪಡೆದುಕೊಂಡಿದೆ. ಪೌಷ್ಟಿಕಾಂಶಯುಕ್ತ ಈ ಪಾನೀಯವು ಆರೋಗ್ಯಕ್ಕೆ ಬಹಳ ಒಳ್ಳೆಯದು. ರಸಭರಿತವಾದ ಮಾಗಿದ ಮಾವಿನ ಹಣ್ಣಿನಿಂದ ಲಸ್ಸಿಯನ್ನು ಮಾಡಿ ಸವಿಯಬಹುದು. ಹಾಗಾದ್ರೆ ಸುಲಭವಾಗಿ ಮಾಡಬಹುದಾದ ಈ ಮ್ಯಾಂಗೋ ಲಸ್ಸಿ ರೆಸಿಪಿ ಇಲ್ಲಿದೆ.
* ಮಾಗಿದ ಮಾವಿನಹಣ್ಣು – 1
* ಮೊಸರು – 1 ಕಪ್
* ಚಿಯಾ ಬೀಜ – 2 ದೊಡ್ಡ ಚಮಚ
* ಜೇನುತುಪ್ಪ – 1ಚಮಚ
* ನೀರು – 1/2 ಕಪ್
* ಏಲಕ್ಕಿ ಪುಡಿ
* ಐಸ್ ತುಂಡುಗಳು
ಇದನ್ನೂ ಓದಿ: ಯೋಗಿ ಟೀ, ಬಟರ್ ಚಿಕನ್… ಭಾರತ-ಜರ್ಮನಿ ಗೆಳೆತನಕ್ಕೆ ಉದಾಹರಣೆ ಕೊಟ್ಟ ರಾಯಭಾರಿ ಗುಪ್ತೆ
* ಮಾಗಿದ ಮಾವಿನಹಣ್ಣಿನ ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡು ತುಂಡುಗಳಾಗಿ ಕತ್ತರಿಸಿಕೊಳ್ಳಿ.
* ಕತ್ತರಿಸಿಟ್ಟ ಮಾವಿನ ಹಣ್ಣಿನ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ ಮೊಸರು, ಜೇನುತುಪ್ಪ ಹಾಗೂ ನೀರನ್ನು ಸೇರಿಸಿ ಗ್ರೈಂಡ್ ಮಾಡಿಕೊಳ್ಳಿ.
* ಈ ರುಬ್ಬಿದ ಮಿಶ್ರಣಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಬೆರೆಸಿಕೊಳ್ಳಿ. ಪಾನೀಯ ತಂಪಾಗಿಸಲು ಐಸ್ ತುಂಡುಗಳನ್ನು ಸೇರಿಸಿಕೊಳ್ಳಿ.
* ಆ ಬಳಿಕ ಈ ಮಿಶ್ರಣವನ್ನು ಲೋಟಕ್ಕೆ ಹಾಕಿ, ನೆನೆಸಿಟ್ಟ ಚಿಯಾ ಬೀಜಗಳಿಂದ ಅಲಂಕರಿಸಿದರೆ ರುಚಿಕರವಾದ ಮ್ಯಾಂಗೋ ಲಸ್ಸಿ ಸವಿಯಲು ಸಿದ್ಧ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Fri, 22 November 24