AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗಿ ಟೀ, ಬಟರ್ ಚಿಕನ್… ಭಾರತ-ಜರ್ಮನಿ ಗೆಳೆತನಕ್ಕೆ ಉದಾಹರಣೆ ಕೊಟ್ಟ ರಾಯಭಾರಿ ಗುಪ್ತೆ

News9 Global Summit 2024: ಭಾರತ ಮತ್ತು ಜರ್ಮನಿ ನಡುವಿನ ಐತಿಹಾಸ ಗೆಳೆತನದಲ್ಲಿ ಸಾಂಸ್ಕೃತಿಕ ನಂಟು ಗಾಢವಾಗಿ ಬೆಸೆದುಕೊಂಡಿದೆ ಎಂದು ಜರ್ಮನಿಗೆ ಭಾರತದ ರಾಯಭಾರಿಯಾಗಿರುವ ಅಜಿತ್ ಗುಪ್ತೆ ಹೇಳಿದ್ದಾರೆ. ಯೋಗಿ ಟೀ ಮತ್ತು ಬಟರ್ ಚಿಕನ್ ಈ ಎರಡು ದೇಶಗಳ ಸಾಂಸ್ಕೃತಿಕ ಬಾಂಧವ್ಯಕ್ಕೆ ಸಂಕೇತ ಎನಿಸಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜರ್ಮನಿಯ ಸ್ಟುಟ್​ಗಾಟ್​ನಲ್ಲಿ ನಿನ್ನೆ ಆರಂಭವಾದ ಮೂರು ದಿನಗಳ ಜಾಗತಿಕ ಶೃಂಗಸಭೆಯಲ್ಲಿ ಗುಪ್ತೆ ಮಾತನಾಡುತ್ತಿದ್ದರು.

ಯೋಗಿ ಟೀ, ಬಟರ್ ಚಿಕನ್... ಭಾರತ-ಜರ್ಮನಿ ಗೆಳೆತನಕ್ಕೆ ಉದಾಹರಣೆ ಕೊಟ್ಟ ರಾಯಭಾರಿ ಗುಪ್ತೆ
ಅಜಿತ್ ಗುಪ್ತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 22, 2024 | 11:26 AM

Share

ನವದೆಹಲಿ, ನವೆಂಬರ್ 22: ಭಾರತ ಮತ್ತು ಜರ್ಮನಿ ನಡುವಿನ ದ್ವಿಪಕ್ಷೀಯ ವ್ಯಾಪಾರ 33 ಬಿಲಿಯನ್ ಡಾಲರ್ ಮುಟ್ಟಿದೆ. ಜರ್ಮನಿಯ ಕಂಪನಿಗಳು ಭಾರತದಲ್ಲಿ 20 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಮಾಡಿವೆ. 2030ರೊಳಗೆ ಭಾರತದೊಂದಿಗಿನ ತಮ್ಮ ವಹಿವಾಟನ್ನು ನಾಲ್ಕು ಪಟ್ಟು ಹೆಚ್ಚಿಸಲು ಈ ಕಂಪನಿಗಳು ಯೋಜಿಸಿವೆ ಎಂದು ಜರ್ಮನಿಗೆ ಭಾರತದ ರಾಯಭಾರಿಯಾಗಿರುವ ಅಜಿತ್ ಗುಪ್ತೆ ಹೇಳಿದ್ದಾರೆ. ನಿನ್ನೆ ಜರ್ಮನಿಯ ಸ್ಟುಟ್​​ಗಾಟ್ ನಗರದಲ್ಲಿ ಆರಂಭಗೊಂಡ ನ್ಯೂಸ್9 ಜಾಗತಿಕ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅಜಿತ್ ಗುಪ್ತೆ, ಭಾರತ ಮತ್ತು ಜರ್ಮನಿಯ ನಡುವಿನ ಸಾಂಸ್ಕೃತಿಕ ನಂಟಿನ ವಿಚಾರವನ್ನೂ ಬಿಚ್ಚಿಟ್ಟರು.

‘ಜರ್ಮನ್ನರಿಗೆ ಯೋಗಿ ಟೀ ಗೊತ್ತಿದೆ. ಭಾರತ ಮತ್ತು ಜರ್ಮನಿಯ ಸಾಂಸ್ಕೃತಿಕ ಬಾಂಧವ್ಯಕ್ಕೆ ಇದು ಒಂದು ನಿದರ್ಶನ. ಯೋಗಿ ಟೀ, ಅದೊಂದು ಮಸಾಲ ಚಾಯ್. ಜರ್ಮನ್ನರು ಭಾರತೀಯ ರೆಸ್ಟೋರೆಂಟ್​ಗೆ ಹೋದರೆ ಮೊದಲು ಕೇಳುವ ಆಹಾರಗಳಲ್ಲಿ ಯೋಗಿ ಟೀ ಕೂಡ ಒಂದು,’ ಎಂದು ರಾಯಭಾರಿ ಗುಪ್ತೆ ಹೇಳಿದರು.

ಇದನ್ನೂ ಓದಿ: ಮ್ಯಾಂಗೋ ಲಸ್ಸಿಗಾಗಿ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ಸಚಿವ ಅಶ್ವಿನಿ ವೈಷ್ಣವ್

ಹಾಗೆಯೇ, ಅಜಿತ್ ಗುಪ್ತೆ ಅವರು ಜರ್ಮನ್ನರ ಮತ್ತೊಂದು ಫೇವರಿಟ್ ತಿಂಡಿಯಾದ ಬಟರ್ ಚಿಕನ್ ಅನ್ನೂ ಪ್ರಸ್ತಾಪಿಸಿದರು. ಇಂದಿನ ಕಿರಿಯ ತಲೆಮಾರಿನ ಜರ್ಮನ್ನರಿಗೆ ಬಟರ್ ಚಿಕನ್ ಫೇವರಿಟ್ ಎನಿಸಿದೆ. ಹ್ಯಾಲೋವೀನ್ ನೈಟ್ ಆಟದಲ್ಲಿ ಕ್ಯಾಂಡಿಗಳ ಬದಲು ಬಟರ್ ಚಿಕನ್​ಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದ ಭಾರತದ ರಾಯಭಾರಿ, ‘ಮುಂದಿನ ಬಾರಿ ಹ್ಯಾಲೋವೀನ್ ನೈಟ್​ನಲ್ಲಿ ಹೆದರಿಸಲು ಬರುವ ಮಕ್ಕಳಿಗೆ ಬಟರ್ ಚಿಕನ್ ಮಾಡಿಕೊಡೋಣ ಎಂದು ನನ್ನ ಪತ್ನಿಗೆ ತಿಳಿಸಿದೆ,’ ಎಂದು ತಮಾಷೆ ಮಾಡಿದರು.

ಭಾರತ ಮತ್ತು ಜರ್ಮನಿಯ ನಡುವಿನ ಸ್ನೇಹ ಇತ್ತೀಚಿನ ವರ್ಷದ್ದಲ್ಲ. ಈ ಸ್ನೇಹ ಐತಿಹಾಸಿಕವಾದುದು ಎಂದು ಬಣ್ಣಿಸಿದ ಅಜಿತ್ ಗುಪ್ತೆ, ಈ ಎರಡು ದೇಶಗಳ ನಡುವಿನ ಸಂಬಂಧ ಇನ್ನೂ ಎತ್ತರಕ್ಕೆ ಹೋಗಲು ಸುಸ್ಥಿರ ಪ್ರಗತಿಯ ಅಂಶ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ಮೊದಲ ದಿನದ ಝಲಕ್

ನಿನ್ನೆ ಆರಂಭವಾದ ನ್ಯೂಸ್9 ಗ್ಲೋಬಲ್ ಸಮಿಟ್ ಮೂರು ದಿನಗಳ ಕಾಲ, ಶನಿವಾರದವರೆಗೂ ನಡೆಯುತ್ತದೆ. ನಿನ್ನೆ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂದಿಯಾ, ಡಾ. ಅಶ್ವಿನಿ ವೈಷ್ಣವ್ ಅವರು ಮಾತನಾಡಿದರು. ಮೈ ಹೋಮ್ ಇಂಡಸ್ಟ್ರೀಸ್​ನ ವೈಸ್ ಛೇರ್ಮನ್ ರಾಮುರಾವ್ ಜುಪಲ್ಲಿ ಕೂಡ ಮಾತನಾಡಿದರು.

ಇವತ್ತು ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ, ಉದ್ಯಮಿಗಳಾದ ಅನನ್ಯಾ ಬಿರ್ಲಾ ಬಾಬಾ ಕಲ್ಯಾಣಿ ಮೊತದಲಾದವರು ಭಾಷಣ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ