AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹವಾಮಾನ ಬದಲಾವಣೆ, ಎಐ ಈ ಜಗತ್ತನ್ನು ವೇಗವಾಗಿ ಆವರಿಸುತ್ತಿರುವ ವಿಷಯ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್

News9 Global Summit Germany: ಜರ್ಮನಿಯ ಐತಿಹಾಸಿಕ ಸ್ಟುಟ್​ಗಾರ್ಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಸ್9 ಗ್ಲೋಬಲ್ ಸಮಿಟ್​ನ ಎರಡನೇ ದಿನದಂದು, ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಮಾತನಾಡಿದರು. ಹವಾಮಾನ ಬದಲಾವಣೆ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈ ಎರಡು ವಿಚಾರಗಳು ಇಂದು ವಿಶ್ವದ ಮೇಲೆ ವೇಗವಾಗಿ ಪ್ರಭಾವ ಬೀರುತ್ತಿವೆ ಎಂದರು. ವಿಶ್ವದ ಎರಡು ಶ್ರೇಷ್ಠ ರಾಷ್ಟ್ರಗಳಾದ ಭಾರತ ಮತ್ತು ಜರ್ಮನಿ ಈ ನಿಟ್ಟಿನಲ್ಲಿ ಸಕಾರಾತ್ಮಕ ಉಪಕ್ರಮಗಳೊಂದಿಗೆ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.

ಹವಾಮಾನ ಬದಲಾವಣೆ, ಎಐ ಈ ಜಗತ್ತನ್ನು ವೇಗವಾಗಿ ಆವರಿಸುತ್ತಿರುವ ವಿಷಯ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್
ಬರುಣ್ ದಾಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 22, 2024 | 2:20 PM

Share

ಇಂದು ನವೆಂಬರ್ 22, ಜರ್ಮನಿಯ ಸ್ಟುಟ್‌ಗಾರ್ಟ್‌ನಲ್ಲಿ ನ್ಯೂಸ್9 ಜಾಗತಿಕ ಶೃಂಗಸಭೆಯ ಎರಡನೇ ದಿನ. ಪ್ರಧಾನಿ ನರೇಂದ್ರ ಮೋದಿ ಇಂದು ಭಾಷಣ ಮಾಡಲಿದ್ದಾರೆ. ಅದಕ್ಕೂ ಮುನ್ನ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಸ್ವಾಗತ ಭಾಷಣದಲ್ಲಿ ಅವರು ಹವಾಮಾನ ಬದಲಾವಣೆ ಮತ್ತು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. ಮುಂಜಾನೆ ಕಠಿಣ ಚಳಿಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕಾಗಿ ಅವರು ಎಲ್ಲಾ ಸಭಿಕರಿಗೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸಮ್ಮೇಳನದ ಮೊದಲ ದಿನದಂದು ಭಾಗವಹಿಸಿದ್ದಕ್ಕಾಗಿ ಕೇಂದ್ರ ಸಚಿವರಾದ ಅಶ್ವನಿ ವೈಷ್ಣವ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬರುಣ್ ದಾಸ್ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ಜರ್ಮನಿಯಂತಹ ಎರಡು ಮಹಾನ್ ರಾಷ್ಟ್ರಗಳು ಹೇಗೆ ದ್ವಿಪಕ್ಷೀಯ ಸಹಕಾರವನ್ನು ಉತ್ಸಾಹದಿಂದ ಅನುಸರಿಸುತ್ತಿವೆ ಎಂಬುದನ್ನು ಇಬ್ಬರೂ ಸಚಿವರ ಭಾಷಣವು ತೋರಿಸುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಭಾಷಣದಲ್ಲಿ ಭಾರತ ಮತ್ತು ಜರ್ಮನಿ ನಡುವಿನ ಬಲವಾದ ಸಂಬಂಧವನ್ನು ಎತ್ತಿ ತೋರಿಸಿದ್ದಾರೆ. ಭಾರತ ಮತ್ತು ಜರ್ಮನಿ ನಡುವೆ ನಿರ್ಮಾಣವಾಗಿರುವ ಸಂಬಂಧದ ಸೇತುವೆ ಉಕ್ಕು ಮತ್ತು ಕಲ್ಲಿನ ಸೇತುವೆಯಲ್ಲ, ಆದರೆ ನಂಬಿಕೆ, ಆದರ್ಶಗಳು ಮತ್ತು ಮೌಲ್ಯಗಳ ಸೇತುವೆಯಾಗಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು. ಭಾರತವು ವಿಶ್ವದಲ್ಲಿ ನಂಬಿಕೆ, ಪ್ರತಿಭೆ ಮತ್ತು ಸ್ಥಿರತೆಯನ್ನು ಒದಗಿಸಲು ಹೆಸರುವಾಸಿಯಾಗಿದೆ ಎಂದು ಅಶ್ವನಿ ವೈಷ್ಣವ್ ಹೇಳಿದರು. ಇಂದು, ಭಾರತ ಮತ್ತು ಜರ್ಮನಿ ನಡುವಿನ ಕೌಶಲ್ಯಗಳ ವಿನಿಮಯವು ಹೆಚ್ಚು ಪ್ರಸ್ತುತವಾಗಿದೆ ಎಂದು ಬರುಣ್ ದಾಸ್ ತಿಳಿಸಿದರು.

ಅಶ್ವನಿ ವೈಷ್ಣವ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನಷ್ಟೇ ಅಲ್ಲದೆ, ಬರುಣ್ ದಾಸ್ ಅವರು ರಾಜ್ಯ ಕಾರ್ಯದರ್ಶಿ ಫ್ಲೋರಿಯನ್ ಹ್ಯಾಸ್ಲರ್ ಅವರಿಗೂ ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: ಯೋಗಿ ಟೀ, ಬಟರ್ ಚಿಕನ್… ಭಾರತ-ಜರ್ಮನಿ ಗೆಳೆತನಕ್ಕೆ ಉದಾಹರಣೆ ಕೊಟ್ಟ ರಾಯಭಾರಿ ಗುಪ್ತೆ

ಭಾರತ-ಜರ್ಮನ್ ಸಹಭಾಗಿತ್ವ ಯಾಕೆ ಮುಖ್ಯ?

ಅಭಿವೃದ್ಧಿ ಹೊಂದಿದ ದೇಶವಾಗುವತ್ತ ಭಾರತ ಹೇಗೆ ಮುಂದುವರಿಯುತ್ತಿದೆ ಎಂಬುದರತ್ತ ಈ ಸಮಿಟ್​ನಲ್ಲಿ ವಿವರವಾಗಿ ಚರ್ಚಿಸಲಾಗುವುದು. ಭಾರತದ ಸುಸ್ಥಿರ ಅಭಿವೃದ್ಧಿಯಲ್ಲಿ ಜರ್ಮನಿಯ ಸಹಭಾಗಿತ್ವ ಎಷ್ಟು ಮುಖ್ಯ ಎಂಬುದನ್ನೂ ಚರ್ಚಿಸಲಾಗುವುದು ಎಂದು ಟಿವಿ9 ನೆಟ್ವರ್ಕ್​ನ ಎಂಡಿ ಮತ್ತು ಸಿಇಒ ಆಗಿರುವ ಬರುಣ್ ದಾಸ್ ಹೇಳಿದರು.

ಇದೇ ವೇಳೆ, ಬರುನ್ ದಾಸ್ ಅವರು ಹವಾಮಾನ ಬದಲಾವಣೆ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಇಂದು ಹವಾಮಾನ ಬದಲಾವಣೆ ಸಮಸ್ಯೆಯಿಂದ ಇಡೀ ಜಗತ್ತು ಬಾಧಿತವಾಗಿದೆ. ಈ ಸಮಸ್ಯೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಚೆನ್ನೈ ಪ್ರವಾಹದಿಂದ ಹಿಡಿದು, ಸ್ಪೇನ್‌ನ ವೆಲೆನ್ಸಿಯಾವರೆಗಿನ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದು ಅವರು ವಿವರಿಸಿದರು.

COP29 ಮುಗಿದಿದೆ ಆದರೆ ಹವಾಮಾನ ಬದಲಾವಣೆಗೆ ಯಾರು ಹೊಣೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. COP29 ನಲ್ಲಿ ಉಪಸ್ಥಿತರಿದ್ದ ವಿಭಾ ಧವನ್ ಮತ್ತು ಅಜಯ್ ಮಾಥುರ್ ಅವರು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಅವರ ಮಾತುಗಳನ್ನು ಕೇಳುವ ಅವಕಾಶ ನಮಗೂ ಸಿಗುತ್ತದೆ. ಇಂದು ಹವಾಮಾನ ಬದಲಾವಣೆಯ ದುರಂತವು ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರನ್ನೂ ಬಾಧಿಸುತ್ತಿದೆ ಎಂದರು.

ಇದನ್ನೂ ಓದಿ:  ಮ್ಯಾಂಗೋ ಲಸ್ಸಿ ಸವಿಯಲು ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್,  ಲಸ್ಸಿ ರೆಸಿಪಿ ಇಲ್ಲಿದೆ

ಕೃತಕ ಬುದ್ದಿಮತ್ತೆ ವಿಚಾರ ಪ್ರಸ್ತಾಪಿಸಿದ ದಾಸ್

ಹವಾಮಾನ ಬದಲಾವಣೆ ಅಲ್ಲದೆ, ಬರುನ್ ದಾಸ್ ಕೃತಕ ಬುದ್ಧಿಮತ್ತೆಯ ವ್ಯಾಪ್ತಿ ಮತ್ತು ಬಳಕೆಯ ಬಗ್ಗೆಯೂ ಚರ್ಚಿಸಿದರು. ಕೃತಕ ಬುದ್ಧಿಮತ್ತೆ ಇಂದು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇಂದಿನ ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ನಾಯಕತ್ವವನ್ನು ಸಾಬೀತುಪಡಿಸಲು ಬಯಸುತ್ತದೆ. ದೇಶವು ಆರ್ಥಿಕ ಮತ್ತು ತಾಂತ್ರಿಕ ಮಹಾಶಕ್ತಿಯಾಗುವ ಹಾದಿಯಲ್ಲಿದೆ. ಜಾಗತಿಕ ಕಂಪನಿಗಳು ಭಾರತದತ್ತ ನೋಡುತ್ತಿವೆ. ಭಾರತವು ಅವರಿಗೆ ಪ್ರಬಲ ಆಯ್ಕೆಯಾಗಿದೆ ಎಂದು ಟಿವಿ9 ನೆಟ್ವರ್ಕ್​ನ ಸಿಇಒ ಅಭಿಪ್ರಾಯಪಟ್ಟರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:58 pm, Fri, 22 November 24

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ