AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

News9 global summit: ಜಾಗತಿಕ ಸಮಸ್ಯೆ ಎದುರಿಸುವ ಕ್ರಮಗಳನ್ನು ಚರ್ಚಿಸಿದ ಜರ್ಮನ್ ಸಚಿವ ಸೆಮ್ ಆಜೆಮಿರ್

German minister Cem Ozdemir speaks at News9 global summit 2024: ಇವತ್ತು ಹವಾಮಾನ ಸಮಸ್ಯೆಯಿಂದ ಬಾಧಿತರಾಗದೇ ಉಳಿದಿರುವ ಯಾವ ದೇಶವೂ ಈ ಪ್ರಪಂಚದಲ್ಲಿ ಇಲ್ಲ ಎಂದು ಜರ್ಮನಿಯ ಆಹಾರ ಮತ್ತು ಕೃಷಿ ಸಚಿವ ಸೆಮ್ ಆಜೆಮಿರ್ ಹೇಳಿದ್ದಾರೆ. ಗ್ರೀನ್ ಹೌಸ್ ಗ್ಯಾಸ್​ಗಳು 1990ರಲ್ಲಿ ಇದ್ದುದಕ್ಕಿಂತ ಈಗ ಶೇ. 50ರಷ್ಟು ಹೆಚ್ಚಾಗಿವೆ. ಇದರಿಂದ ಜಾಗತಿಕವಾಗಿ ಸಾಕಷ್ಟು ಆರ್ಥಿಕ ನಷ್ಟವಾಗುತ್ತಿದೆ ಎಂದಿದ್ದಾರೆ.

News9 global summit: ಜಾಗತಿಕ ಸಮಸ್ಯೆ ಎದುರಿಸುವ ಕ್ರಮಗಳನ್ನು ಚರ್ಚಿಸಿದ ಜರ್ಮನ್ ಸಚಿವ ಸೆಮ್ ಆಜೆಮಿರ್
ಸೆಮ್ ಆಜೆಮಿರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 22, 2024 | 4:15 PM

Share

ನವದೆಹಲಿ, ನವೆಂಬರ್ 22: ಜಾಗತಿಕವಾಗಿ ಇಂದು ಎದುರಾಗುತ್ತಿರುವ ವಿವಿಧ ಸಮಸ್ಯೆಗಳ ವಿರುದ್ಧ ಹೋರಾಡಲು ಜಾಗತಿಕ ಸಹಕಾರ ಬಹಳ ಮುಖ್ಯ. ಹಾಗೆಯೇ, ಸುಸ್ಥಿರವೆನಿಸುವ ಅಭಿವೃದ್ಧಿಯೂ ಬಹಳ ಮುಖ್ಯ ಎಂದು ಜರ್ಮನಿಯ ಆಹಾರ ಮತ್ತು ಕೃಷಿ ಸಚಿವ ಸೆಮ್ ಆಜೆಮಿರ್ (Cem Ozdemir) ಅಭಿಪ್ರಾಯಪಟ್ಟಿದ್ದಾರೆ. ಜರ್ಮನಿಯ ಸ್ಟುಟ್​ಗಾರ್ಟ್​​ನಲ್ಲಿ ನಡೆಯುತ್ತಿರುವ ನ್ಯೂಸ್9 ಜಾಗತಿಕ ಶೃಂಗಸಭೆಯ ಎರಡನೇ ದಿನದಂದು ಮಾತನಾಡಿದ ಅವರು ವಿಶ್ವಾದ್ಯಂತ ನೈಸರ್ಗಿಕ ವಿಕೋಪಗಳಿಗೆ ಕಾರಣವಾದ ಹವಾಮಾನ ಬದಲಾವಣೆಯ ಸಮಸ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಹವಾಮಾನ ಬದಲಾವಣೆ ಮಾತ್ರವಲ್ಲ, ಈ ವಿಶ್ವವನ್ನು ಬಾಧಿಸುತ್ತಿರುವ ರಾಜಕೀಯ ಮತ್ತಿತರ ಬಿಕ್ಕಟ್ಟುಗಳನ್ನೂ ಅವರು ಪ್ರಸ್ತಾಪಿಸಿದರು.

‘ನಮ್ಮ ಪ್ರಪಂಚ ಬಿಕ್ಕಟ್ಟಿನಲ್ಲಿರುವಂತೆ ಭಾಸವಾಗುತ್ತಿದೆ. ದುರದೃಷ್ಟಕ್ಕೆ ಸಶಸ್ತ್ರ ಸಂಘರ್ಷಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗೆಯೇ, ಜಾಗತಿಕ ಉಷ್ಣಾಂಶವೂ ಹೆಚ್ಚುತ್ತಿದೆ. ಹವಾಮಾನ ಸಮಸ್ಯೆಯಿಂದ ಬಾಧಿತರಾಗದೇ ಉಳಿದ ಯಾವ ದೇಶವೂ ಈಗ ಇಲ್ಲ ಅನಿಸುತ್ತದೆ,’ ಎಂದು ಭೂ ಗ್ರಹದ ಜೀವಿಗಳಿಗೆ ತಂದಿರುವ ಗಂಭೀರ ಅಪಾಯದ ಬಗ್ಗೆ ಸೆಮ್ ಆಜ್​ಡೆಮಿರ್ ಅವರು ಎಚ್ಚರಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ: ಹವಾಮಾನ ಬದಲಾವಣೆ, ಎಐ ಈ ಜಗತ್ತನ್ನು ವೇಗವಾಗಿ ಆವರಿಸುತ್ತಿರುವ ವಿಷಯ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್

‘ಹಸಿರುಮನೆ ಅನಿಲಗಳು (ಕಾರ್ಬನ್ ಡೈ ಆಕ್ಸೈಡ್ ಇತ್ಯಾದಿ ಗ್ರೀನ್​ಹೌಸ್ ಗ್ಯಾಸ್) 1990ರಲ್ಲಿ ಇದ್ದುದಕ್ಕಿಂತ ಶೇ. 50ರಷ್ಟು ಹೆಚ್ಚಾಗಿವೆ. ಹವಾಮಾನ ಸಂಬಂಧಿತ ಅವಘಡಗಳಿಂದ ಜಾಗತಿಕವಾಗಿ ಆಗುತ್ತಿರುವ ಸರಾಸರಿ ವಾರ್ಷಿಕ ಆರ್ಥಿಕ ನಷ್ಟ ನೂರಾರು ಬಿಲಿಯನ್ ಡಾಲರ್​ಗಳಷ್ಟಾಗುತ್ತದೆ’ ಎಂದು ಸಮಸ್ಯೆಯ ಗಂಭೀರತೆ ಮೇಲೆ ಜರ್ಮನಿಯ ಸಚಿವರು ಬೆಳಕು ಚೆಲ್ಲಿದರು.

ಭಾರತ ಮತ್ತು ಜರ್ಮನಿ ಸಂಬಂಧ ಗಟ್ಟಿಗಳಿಸುವುದು ಮುಖ್ಯ…

ಜಾಗತಿಕವಾಗಿ ಇರುವ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಜರ್ಮನಿ ಸಹಭಾಗಿತ್ವ ಮುಖ್ಯ ಎಂದು ಆ ದೇಶದ ಆಹಾರ ಮತ್ತು ಕೃಷಿ ಸಚಿವರಾದ ಅವರು ಅಭಿಪ್ರಾಯಪಟ್ಟರು. ‘ನಮ್ಮ ಆರ್ಥಿಕತೆಗಳು ಎಷ್ಟು ಪ್ರಬಲ ಎಂಬುದನ್ನು ಹೊರತುಪಡಿಸಿ, ನಮ್ಮ ಸಹಭಾಗಿತ್ವ ಗಟ್ಟಿಯಾಗಿರಬೇಕು. ಜರ್ಮನಿ ಮತ್ತು ಭಾರತದ ಮಧ್ಯೆ ಸಹಕಾರ ಹೆಚ್ಚಿಸುವುದು ಅಜೆಂಡಾ ಆಗಬೇಕು’ ಎಂದು ಹೇಳಿದ ಆಜ್​ಡೆಮಿರ್, ಭಾರತ ಮತ್ತು ಯೂರೋಪಿಯನ್ ಯೂನಿಯನ್ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮತ್ತೆ ಸಂಧಾನಗಳು ಆರಂಭಗೊಂಡಿರುವುದನ್ನು ಸ್ವಾಗತಿಸಿದರು.

ಇದನ್ನೂ ಓದಿ: ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಟ; ಯಾರದ್ದು ಯಾವ ಹೊಣೆ? ಗ್ಲೋಬಲ್ ಸಮಿಟ್​ನಲ್ಲಿ ತಜ್ಞರಿಂದ ಗಂಭೀರ ಚರ್ಚೆ

ಕೃಷಿ, ಮರುಬಳಕೆ ಇಂಧ, ಸಂಶೋಧನೆ, ಶಿಕ್ಷಣ ಮೊದಲಾದ ಪ್ರಮುಖ ಕ್ಷೇತ್ರಗಳಲ್ಲಿ ಭಾರತ ಮತ್ತು ಜರ್ಮನಿ ಸಹಭಾಗಿತ್ವ ಆಗಬೇಕು. ಆಹಾರ ಭದ್ರತೆ, ಹವಾಮಾನ ಬದಲಾವಣೆ, ಸಾಮಾಜಿಕ ಭದ್ರತೆಯಂತಹ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಕೃಷಿ ಕ್ಷೇತ್ರದ ಮೇಲೆ ಗಮನ ಹರಿಸುವುದು ಮುಖ್ಯ ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Fri, 22 November 24

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!