ಮ್ಯಾಂಗೋ ಲಸ್ಸಿ ಸವಿಯಲು ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್,  ಲಸ್ಸಿ ರೆಸಿಪಿ ಇಲ್ಲಿದೆ

ಜರ್ಮನಿಯಲ್ಲಿ ನ್ಯೂಸ್9 ಜಾಗತಿಕ ಶೃಂಗಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಗ್ಲೋಬಲ್ ಶೃಂಗಸಭೆಯಲ್ಲಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ವೇಳೆ ಮ್ಯಾಂಗೋ ಲಸ್ಸಿ ಸವಿಯಲು ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಎಲ್ಲರ ಫೇವರಿಟ್ ರಸಭರಿತವಾದ ಮ್ಯಾಂಗೋ ಲಸ್ಸಿಯನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಆರೋಗ್ಯಕರ ಮ್ಯಾಂಗೋ ಲಸ್ಸಿ ಈ ರೆಸಿಪಿ ಇಲ್ಲಿದೆ.

 ಮ್ಯಾಂಗೋ ಲಸ್ಸಿ ಸವಿಯಲು ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್,  ಲಸ್ಸಿ ರೆಸಿಪಿ ಇಲ್ಲಿದೆ
ಅಶ್ವಿನಿ ವೈಷ್ಣವ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Nov 22, 2024 | 1:59 PM

ಮಾವಿನ ಹಣ್ಣನ್ನು ಹಾಗೆಯೇ ತಿಂದರೂ ರುಚಿಯೇ, ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಈ ಮಾವಿನ ಹಣ್ಣಿನಿಂದ ತಯಾರಿಸುವ ಮ್ಯಾಂಗೊ ಲಸ್ಸಿಯ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ. ವಿಶ್ವದ ಟಾಪ್‌ 16 ಡೇರಿ ಪಾನೀಯಗಳ ಪಟ್ಟಿಯಲ್ಲಿ ಮ್ಯಾಂಗೊ ಲಸ್ಸಿ ಮೊದಲ ಸ್ಥಾನ ಪಡೆದುಕೊಂಡಿದೆ. ಪೌಷ್ಟಿಕಾಂಶಯುಕ್ತ ಈ ಪಾನೀಯವು ಆರೋಗ್ಯಕ್ಕೆ ಬಹಳ ಒಳ್ಳೆಯದು. ರಸಭರಿತವಾದ ಮಾಗಿದ ಮಾವಿನ ಹಣ್ಣಿನಿಂದ ಲಸ್ಸಿಯನ್ನು ಮಾಡಿ ಸವಿಯಬಹುದು. ಹಾಗಾದ್ರೆ ಸುಲಭವಾಗಿ ಮಾಡಬಹುದಾದ ಈ ಮ್ಯಾಂಗೋ ಲಸ್ಸಿ ರೆಸಿಪಿ ಇಲ್ಲಿದೆ.

ಮಾವಿನಹಣ್ಣಿನ ಲಸ್ಸಿ ಮಾಡಲು ಬೇಕಾಗುವ ಸಾಮಗ್ರಿಗಳು

* ಮಾಗಿದ ಮಾವಿನಹಣ್ಣು – 1

* ಮೊಸರು – 1 ಕಪ್

* ಚಿಯಾ ಬೀಜ – 2 ದೊಡ್ಡ ಚಮಚ

* ಜೇನುತುಪ್ಪ – 1ಚಮಚ

* ನೀರು – 1/2 ಕಪ್

* ಏಲಕ್ಕಿ ಪುಡಿ

* ಐಸ್ ತುಂಡುಗಳು

ಇದನ್ನೂ ಓದಿ: ಯೋಗಿ ಟೀ, ಬಟರ್ ಚಿಕನ್… ಭಾರತ-ಜರ್ಮನಿ ಗೆಳೆತನಕ್ಕೆ ಉದಾಹರಣೆ ಕೊಟ್ಟ ರಾಯಭಾರಿ ಗುಪ್ತೆ

ಮಾವಿನಹಣ್ಣಿನ ಲಸ್ಸಿ ಮಾಡುವ ವಿಧಾನ

* ಮಾಗಿದ ಮಾವಿನಹಣ್ಣಿನ ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡು ತುಂಡುಗಳಾಗಿ ಕತ್ತರಿಸಿಕೊಳ್ಳಿ.

* ಕತ್ತರಿಸಿಟ್ಟ ಮಾವಿನ ಹಣ್ಣಿನ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ ಮೊಸರು, ಜೇನುತುಪ್ಪ ಹಾಗೂ ನೀರನ್ನು ಸೇರಿಸಿ ಗ್ರೈಂಡ್‌ ಮಾಡಿಕೊಳ್ಳಿ.

* ಈ ರುಬ್ಬಿದ ಮಿಶ್ರಣಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಬೆರೆಸಿಕೊಳ್ಳಿ. ಪಾನೀಯ ತಂಪಾಗಿಸಲು ಐಸ್ ತುಂಡುಗಳನ್ನು ಸೇರಿಸಿಕೊಳ್ಳಿ.

* ಆ ಬಳಿಕ ಈ ಮಿಶ್ರಣವನ್ನು ಲೋಟಕ್ಕೆ ಹಾಕಿ, ನೆನೆಸಿಟ್ಟ ಚಿಯಾ ಬೀಜಗಳಿಂದ ಅಲಂಕರಿಸಿದರೆ ರುಚಿಕರವಾದ ಮ್ಯಾಂಗೋ ಲಸ್ಸಿ ಸವಿಯಲು ಸಿದ್ಧ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Fri, 22 November 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ