Vidura Niti : ಅದೃಷ್ಟವಂತ ಮಹಿಳೆಗೆ ಮಾತ್ರ ಈ ಗುಣವುಳ್ಳ ಗಂಡ ಸಿಗುತ್ತಾನೆ

ಹೆಣ್ಣು ತಾನು ಮದುವೆಯಾಗುವ ಹುಡುಗನ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾಳೆ. ತನ್ನ ಪತಿಯಾಗುವವನಲ್ಲಿ ಕೆಲವು ಗುಣಗಳಿರಬೇಕು ಎಂದು ಬಯಸುತ್ತಾಳೆ ಕೂಡ. ಆದರೆ ವಿದುರನು ತನ್ನ ನೀತಿಯಲ್ಲಿ ಒಬ್ಬ ಮಹಿಳೆಯೂ ಈ ಗುಣಗಳಿರುವ ಪುರುಷನನ್ನು ಮದುವೆಯಾದರೆ ಆಕೆಯಷ್ಟು ಅದೃಷ್ಟವಂತೆ ಬೇರೆ ಯಾರು ಇಲ್ಲ. ಆ ವ್ಯಕ್ತಿಯೊಂದಿಗೆ ಬದುಕುವ ಹೆಣ್ಣಿನ ಜೀವನವು ಸಂತೋಷದಿಂದಲೇ ಕೂಡಿರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾನೆ.

Vidura Niti : ಅದೃಷ್ಟವಂತ ಮಹಿಳೆಗೆ ಮಾತ್ರ ಈ ಗುಣವುಳ್ಳ ಗಂಡ ಸಿಗುತ್ತಾನೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 22, 2024 | 5:32 PM

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಎರಡು ವಿಭಿನ್ನ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಎಲ್ಲಾ ಸನ್ನಿವೇಶಗಳಲ್ಲಿ ಹೊಂದಿ ಒಬ್ಬರನ್ನೊಬ್ಬರು ಒಪ್ಪಿಕೊಂಡರೂ ನಡೆದರೆ ಬದುಕಿ ಸ್ವರ್ಗವೇ. ವೈವಾಹಿಕ ಜೀವನದಲ್ಲಿ ಪ್ರೀತಿಯ ಜೊತೆ ಜೊತೆಗೆ ಸಣ್ಣ ಪುಟ್ಟ ಜಗಳಗಳು, ಕೋಪ, ಮುನಿಸು ಇದ್ದರೇನೇ ಚಂದ. ಈ ಕೆಲವು ಗುಣವಿರುವ ಪತಿ ಸಿಕ್ಕಿಬಿಟ್ಟರೆ ಆಕೆಯಷ್ಟು ಅದೃಷ್ಟವಂತಳು ಬೇರೆ ಯಾರು ಇಲ್ಲವಂತೆ. ಹಾಗಾದ್ರೆ ವಿದುರ ತನ್ನ ನೀತಿಯಲ್ಲಿ ಹೇಳುವಂತೆ ಯಾವೆಲ್ಲಾ ಗುಣಗಳನ್ನು ಹೊಂದಿರುವ ಪುರುಷನನ್ನು ಮದುವೆಯಾದರೆ ಹೆಣ್ಣಿನ ಬದುಕು ಸ್ವರ್ಗವಾಗುತ್ತದೆ ಎನ್ನುವ ಕುತೂಹಲಕಾರಿ ಸಂಗತಿ ಇಲ್ಲಿದೆ.

  • ಉಪಕಾರ ಮನೋಭಾವ : ವಿದುರ ನೀತಿಯ ಪ್ರಕಾರ ಪರೋಪಕಾರಿಯನ್ನು ಭೂಮಿಯಿಂದ ಸ್ವರ್ಗದವರೆಗೆ ಗೌರವಿಸಲಾಗುತ್ತದೆ. ಯಾರಿಗಾದರೂ ಕಷ್ಟ ಎಂದಾಗ ಸಹಾಯ ಮಾಡುವ ಗುಣವಿರುವ ವ್ಯಕ್ತಿಯೂ ಸದಾ ಗೌರವಕ್ಕೆ ಪಾತ್ರನಾಗುತ್ತಾನೆ. ಆ ವ್ಯಕ್ತಿಯ ಒಳ್ಳೆಯ ಕಾರ್ಯಗಳೇ ಆತನಿಗೆ ಬಹಳಷ್ಟು ಖ್ಯಾತಿಯನ್ನು ತಂದು ಕೊಡುತ್ತದೆ. ಇಂತಹ ಗಂಡನನ್ನು ಪಡೆದ ಹೆಂಡತಿ ತುಂಬಾ ಅದೃಷ್ಟಶಾಲಿಯಾಗಿರುತ್ತಾಳೆ. ಈಕೆಯನ್ನು ಸಮಾಜವು ಪತಿಯ ಗುಣಗಳಿಂದಲೇ ಗುರುತಿಸುತ್ತದೆ ಎಂದಿದ್ದಾನೆ ವಿದುರ.
  • ಪ್ರಾಮಾಣಿಕತೆ : ಪ್ರಾಮಾಣಿಕವಾಗಿರುವುದು ವ್ಯಕ್ತಿಯ ಉತ್ತಮವಾದ ಗುಣಗಳಲ್ಲಿ ಒಂದು. ಈ ಗುಣವಿರುವ ವ್ಯಕ್ತಿಯೂ ತನಗೆ ಮಾತ್ರವಲ್ಲ, ಕುಟುಂಬಕ್ಕೂ ಒಂದೊಳ್ಳೆ ಗೌರವವನ್ನು ತಂದುಕೊಡುತ್ತಾನೆ. ಮನೆಯ ಸದಸ್ಯರೆಲ್ಲರೂ ಈ ವ್ಯಕ್ತಿಯನ್ನು ಅನುಸರಿಸುತ್ತಾರೆ. ಯಾವ ವ್ಯಕ್ತಿಯೂ ಪ್ರಾಮಾಣಿಕನಾಗಿರುತ್ತಾನೆಯೋ ಆ ವ್ಯಕ್ತಿಯನ್ನು ಕೈ ಹಿಡಿದ ಮಹಿಳೆಯೂ ಸದಾ ಸಂತೋಷದಿಂದ ಜೀವನ ನಡೆಸಲು ಸಾಧ್ಯ ಎಂದಿದ್ದಾನೆ ವಿದುರ.
  • ಧಾರ್ಮಿಕ ಮತ್ತು ದಾನ ಮಾಡುವ ಗುಣ : ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸುವುದರ ಜೊತೆ ದಾನ ಮತ್ತು ಧರ್ಮ ಮಾಡುತ್ತಾ ಬದುಕುವ ವ್ಯಕ್ತಿಗೆ ಪುಣ್ಯವು ಲಭಿಸುತ್ತದೆ. ಈ ಪುಣ್ಯದ ಫಲವು ತಲೆಮಾರುಗಳವರೆಗೆ ಇರುತ್ತದೆ. ಇದರಿಂದ ಕುಟುಂಬಕ್ಕೆ ದೇವರ ಆಶೀರ್ವಾದವಿದ್ದು, ಮನೆಯಲ್ಲಿ ಸಂತೋಷಯೇ ತುಂಬಿರುತ್ತದೆ. ಇಂತಹ ಪುರುಷನನ್ನು ಪತಿಯಾಗಿ ಪಡೆಯುವುದರಿಂದ ಹೆಣ್ಣಿನ ಬದುಕು ಬದಲಾಗುತ್ತದೆ. ಈಕೆಯು ಅದೃಷ್ಟವಂತಳಾಗಿದ್ದು, ಸ್ವರ್ಗ ಸುಖವನ್ನು ಕಾಣುತ್ತಾಳೆ ಎಂದು ವಿದುರ ತನ್ನ ನೀತಿಯಲ್ಲಿ ತಿಳಿಸಿದ್ದಾನೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Fri, 22 November 24

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್