Merry Christmas 2022 Greetings: ಸಂಭ್ರಮದ ಹಬ್ಬ ಕ್ರಿಸ್ಮಸ್ಗೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ
ಕ್ರೈಸ್ತ ಧರ್ಮದ ಪ್ರಕಾರ ಡಿಸೆಂಬರ್ 25 ಯೇಸು ಕ್ರಿಸ್ತನ ಜನನ ದಿನವಾಗಿದೆ. ಕ್ರೈಸ್ತ ಸಮುದಾಯದ ಜನ ಕ್ರಿಸ್ಮಸ್ ಆಚರಿಸುವ ಮೂಲಕ ಯೇಸುವಿನ ಜನ್ಮದಿನವನ್ನು ಸಂತೋಷದಿಂದ ಆಚರಿಸುತ್ತಾರೆ.
ಮೇರಿ ಕ್ರಿಸ್ಮಸ್ 2022
Follow us on
ಪ್ರತಿ ವರ್ಷ ಡಿಸೆಂಬರ್ 25 ಬಂತೆಂದರೆ ಕ್ರೈಸ್ತರಿಗೆ ಕ್ರಿಸ್ಮಸ್ ಹಬ್ಬದ (Merry Christmas 2022) ಸಡಗರ, ಸಂಭ್ರಮ ಆರಂಭವಾಗುತ್ತದೆ. ಇಂದು ವಿಶ್ವದಾದ್ಯಂತ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಕ್ರೈಸ್ತ ಧರ್ಮದ ಪ್ರಕಾರ ಈ ದಿನ ಯೇಸು ಕ್ರಿಸ್ತನ ಜನನ ದಿನವಾಗಿದೆ. ಕ್ರೈಸ್ತ ಸಮುದಾಯದ ಜನ ಕ್ರಿಸ್ಮಸ್ ಆಚರಿಸುವ ಮೂಲಕ ಯೇಸುವಿನ ಜನ್ಮದಿನವನ್ನು ಸಂತೋಷದಿಂದ ಆಚರಿಸುತ್ತಾರೆ. ಹಬ್ಬ ಆಚರಿಸುವವರು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡುವ, ಹಬ್ಬಕ್ಕೆ ರುಚಿ ರುಚಿಯಾದ ತಿಂಡಿಗಳನ್ನು ಮಾಡುವ, ಅತಿಥಿಗಳನ್ನು ಆಹ್ವಾನಿಸುವ, ಕ್ರಿಸ್ ಮಸ್ ಮರ (Christmas Tree) ಅಲಂಕರಿಸಿ ಹಬ್ಬವನ್ನು ಆಚರಿಸುತ್ತಿದ್ದಾರೆ.
ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ನನ್ನ ದೊಡ್ಡ ಕ್ರಿಸ್‌ಮಸ್ ಉಡುಗೊರೆಯೆಂಸದರೆ ನನ್ನ ಪಕ್ಕದಲ್ಲಿ ನಿನ್ನನ್ನು ಹೊಂದಿರುವುದು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಕ್ರಿಸ್ಮಸ್ ಶುಭಾಶಯಗಳು.
ನನ್ನ ಬದುಕಿಗೆ ಹೊಸ ಅರ್ಥ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಕಾರಣದಿಂದಾಗಿ, ನನ್ನ ಎಲ್ಲಾ ಕ್ರಿಸ್ಮಸ್ ರಜಾದಿನಗಳು ಆನಂದದಾಯಕವಾಗಿವೆ. ನಿಮಗೆ ಕ್ರಿಸ್ಮಸ್ ಶುಭಾಶಯಗಳು
ನಿಮ್ಮ ಪ್ರೀತಿಯೇ ನನ್ನನ್ನು ಜೀವಂತವಾಗಿಡುವ ಮತ್ತು ನನಗೆ ಸಂಪೂರ್ಣ ಭಾವನೆ ಮೂಡಿಸುವ ಎಲ್ಲವೂ ಆಗಿದೆ. ಮೆರಿ ಕ್ರಿಸ್ಮಸ್
ನಿಮ್ಮ ಜೀವನ ಸಂತೋಷದಿಂದ ಕೂಡಿರಲೆಂದು ಶುಭ ಹಾರೈಸುತ್ತೇನೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಷಯಗಳು!
ಕ್ರಿಸ್ಮಸ್ ಹಬ್ಬದ ಶುಭಾಶಯಗಳು; ಈ ಹಬ್ಬವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
ಈ ಅದ್ಭುತ ಸಂದರ್ಭದಲ್ಲಿ ನಿಮಗೆ ಸಂತೋಷ, ಪ್ರೀತಿ ಮತ್ತು ಶಾಂತಿ ಸಿಗಲೆಂದು ಹಾರೈಸುತ್ತೇನೆ. ಮೆರಿ ಕ್ರಿಸ್ಮಸ್! (ಮೂಲ: mahithi.com)
ಈ ರಜಾದಿನಗಳಲ್ಲಿ ನಿಮ್ಮ ಜೀವನದುದ್ದಕ್ಕೂ ಸುಂದರವಾದ, ಅರ್ಥಪೂರ್ಣವಾದ ಮತ್ತು ನಿಮಗೆ ಸಂತೋಷವನ್ನು ತರುವಂತಹ ಎಲ್ಲವೂ ನಿಮ್ಮದಾಗಲು; ಮೇರಿ ಕ್ರಿಸ್ಮಸ್
ನಿಮ್ಮ ರಜಾದಿನಗಳು ಸಂತೋಷ ಮತ್ತು ನಗೆಯಿಂದ ತುಂಬಿರಲಿ; ಕ್ರಿಸ್ಮಸ್ ಹಬ್ಬದ ಶುಭಾಶಯಗಳು