Milk Adulteration: ನೀವು ಕುಡಿಯುವ ಹಾಲು ಶುದ್ಧವಾಗಿದೆಯೇ? ಮನೆಯಲ್ಲೇ ಹೀಗೆ ಪತ್ತೆ ಹಚ್ಚಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 31, 2024 | 6:04 PM

ಸಾಮಾನ್ಯವಾಗಿ ಚಹಾ, ಕಾಫಿ ಹೀಗೆ ನಾನಾ ರೀತಿಯಲ್ಲಿ ಹಾಲನ್ನು ಸೇವಿಸುತ್ತಾರೆ. ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆ. ಆದರೆ ಇತ್ತೀಚೆಗಿನ ದಿನಗಳು ಹಾಲು ಕೂಡ ಕಲಬೆರಕೆಯುಕ್ತವಾಗಿದೆ. ಶುದ್ಧವಲ್ಲದ ಹಾಲನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನೀವು ಸೇವಿಸುವ ಹಾಲಿನ ಶುದ್ಧತೆಯನ್ನು ಮನೆಯಲ್ಲೇ ಸುಲಭವಾಗಿ ಪರೀಕ್ಷಿಸಬಹುದು. ಹಾಗಾದ್ರೆ ಹಾಲು ಕಲಬೆರಕೆಯುಕ್ತವಾಗಿದೆಯೇ, ಇಲ್ಲವೋ ಎಂದು ತಿಳಿಯಲು ಈ ಸಿಂಪಲ್ ಟಿಪ್ಸ್.

Milk Adulteration: ನೀವು ಕುಡಿಯುವ ಹಾಲು ಶುದ್ಧವಾಗಿದೆಯೇ? ಮನೆಯಲ್ಲೇ ಹೀಗೆ ಪತ್ತೆ ಹಚ್ಚಿ
ಸಾಂದರ್ಭಿಕ ಚಿತ್ರ
Follow us on

ಚಹಾ, ಕಾಫಿ ಅಥವಾ ಹಾಲಿಲ್ಲದೇ ಹೆಚ್ಚಿನವರ ದಿನವು ಆರಂಭವಾಗುವುದೇ ಇಲ್ಲ. ಹೌದು, ಈ ಚಹಾ ಕಾಫಿ ತಯಾರಿಸಲು ಹಾಲು ಬೇಕೇ ಬೇಕು. ಆದರೆ ಇತ್ತೀಚೆಗಿನ ದಿನಗಳಲ್ಲಿ ಹಾಲು ಕಲಬೆರಕೆಯುಕ್ತ ಹಾಲು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಈ ಕಲಬೆರಕೆಯುಕ್ತ ಹಾಲು ಸೇವನೆಯು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಹಾಗಾದ್ರೆ ನೀವು ಮಾರುಕಟ್ಟೆಯಿಂದ ಖರೀದಿಸಿ ತಂದ ಹಾಲು ಕಲಬೆರಕೆಯಾಗಿದೆಯೇ? ಮನೆಯಲ್ಲೇ ಪತ್ತೆ ಹಚ್ಚಲು ಈ ಕೆಲವು ವಿಧಾನವನ್ನು ಅನುಸರಿಸಿ.

  • ಶುದ್ಧ ಹಾಲಿನ ಬಣ್ಣ ಬಿಳಿಯಾಗಿರುತ್ತದೆ. ಶುದ್ಧ ಹಾಲನ್ನು ಬಿಸಿ ಮಾಡಿದಾಗ ಅಥವಾ ತಂಪಾದ ಸ್ಥಳದಲ್ಲಿಟ್ಟರೆ ಅದರ ಬಣ್ಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಒಂದು ವೇಳೆ ಹಾಲಿನ ಬಣ್ಣವು ಹಳದಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
  • ಐದರಿಂದ ಹತ್ತು ಮಿಲಿಲೀಟರ್ ಹಾಲನ್ನು ತೆಗೆದುಕೊಂಡು, ಅದಕ್ಕೆ ಅಷ್ಟೇ ಪ್ರಮಾಣದಲ್ಲಿ ನೀರನ್ನು ಬೆರೆಸಿಕೊಳ್ಳಿ. ಈ ವೇಳೆಯಲ್ಲಿ ಹಾಲಿನಲ್ಲಿ ನೊರೆ ಕಂಡುಬಂದರೆ, ಹಾಲಿಗೆ ವಾಷಿಂಗ್ ಪೌಡರ್ ಮತ್ತು ಡಿಟರ್ಜೆಂಟ್ ಪೌಡರ್ ಸೇರಿಸಿ ಕಲಬೆರಕೆ ಮಾಡಲಾಗಿದೆ ಎನ್ನುವುದು ಖಚಿತವಾಗುತ್ತದೆ.
  • ಶುದ್ಧ ಹಾಲು ರುಚಿಯಲ್ಲಿ ಸಿಹಿಯಾಗಿರುತ್ತದೆ. ಮನೆಗೆ ತಂದ ಹಾಲು ಬಿಸಿ ಮಾಡಿ ಕುಡಿದು ನೋಡಿ ರುಚಿಯಲ್ಲಿ ಸಿಹಿಯಾಗಿದ್ದರೆ ಕಲಬೆರಕೆಯಾಗಿಲ್ಲ ಎಂದರ್ಥ. ಕಲಬೆರಕೆಯಾದ ಹಾಲು ರುಚಿಯಲ್ಲಿ ಕಹಿಯಾಗಿರುತ್ತದೆ.
  • ಹಾಲಿಗೆ ನೀರನ್ನು ಬೆರೆಸಲಾಗಿದೆಯೇ ಎಂದು ಪರೀಕ್ಷಿಸಲು ನೆಲದ ಮೇಲೆ ಒಂದು ಹನಿ ಹಾಲನ್ನು ಹಾಕಿ, ಶುದ್ಧ ಹಾಲಾಗಿದ್ದರೆ, ಬೇಗನೆ ಭೂಮಿಯಲ್ಲಿ ಇಂಗುವುದಿಲ್ಲ. ಹಾಲಿನೊಂದಿಗೆ ನೀರು ಬೆರೆಸಿದರೆ ಅದು ತಕ್ಷಣವೇ ಇಂಗಿ ಹೋಗುತ್ತದೆ.
  • ಹಾಲಿಗೆ ಹಿಟ್ಟನ್ನು ಸೇರಿಸುವ ಮೂಲಕ ಹಾಲು ಕಲಬೆರಕೆಯಾಗಿದೆ ಎಂದು ಪತ್ತೆ ಹಚ್ಚಬಹುದು. ಐದು ಮಿಲಿ ಹಾಲನ್ನು ತೆಗೆದುಕೊಂಡು ಒಂದೆರಡು ಚಮಚ ಚಮಚ ಅಯೋಡೈಸ್ ಉಪ್ಪನ್ನು ಸೇರಿಸಿ. ಹಾಲು ನೀಲಿ ಬಣ್ಣಕ್ಕೆ ಹಾಲು ಶುದ್ಧವಾಗಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ