AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Global Family Day 2025: ಹೊಸ ವರ್ಷದ ಮೊದಲ ದಿನವೇ ಜಾಗತಿಕ ಕುಟುಂಬ ದಿನ ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

ಪ್ರತಿಯೊಬ್ಬರ ಜೀವನದ ಏಳು ಬೀಳಿನಲ್ಲಿ ಕುಟುಂಬ ಹಾಗೂ ಕುಟುಂಬದ ಸದಸ್ಯರು ಪ್ರಮುಖ ಪಾತ್ರವಹಿಸುತ್ತಾರೆ. ಕುಟುಂಬ ಎನ್ನುವ ಪರಿಕಲ್ಪನೆಗೆ ಒಂದು ವಿಶೇಷ ದಿನವನ್ನು ಮೀಸಲಿಡಲಾಗಿದ್ದು, ಅದುವೇ ಜನವರಿ 1. ಪ್ರತಿ ವರ್ಷ ಹೊಸ ವರ್ಷದ ಮೊದಲ ದಿನದಂದು ಆಚರಿಸಲಾಗುವ ಜಾಗತಿಕ ಕುಟುಂಬ ದಿನವು ಜಗತ್ತಿಗೆ ಏಕತೆಯ ಸಕಾರಾತ್ಮಕ ಸಂದೇಶವನ್ನು ಸಾರುತ್ತದೆ. ಹಾಗಾದ್ರೆ ಜಾಗತಿಕ ಕುಟುಂಬ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತ್ತರ ಸಂಪೂರ್ಣ ಮಾಹಿತಿ ಇಲ್ಲಿದೆ.

Global Family Day 2025: ಹೊಸ ವರ್ಷದ ಮೊದಲ ದಿನವೇ ಜಾಗತಿಕ ಕುಟುಂಬ ದಿನ ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Dec 31, 2024 | 6:37 PM

Share

ಕುಟುಂಬವೆಂಬ ಪರಿಕಲ್ಪನೆ ಇಲ್ಲದಿರುವ ಈ ಜಗತ್ತನ್ನು ಊಹಿಸುವುದೇ ಅಸಾಧ್ಯ. ಹೌದು, ಅಜ್ಜ ಅಜ್ಜಿ, ಅಪ್ಪ ಅಮ್ಮ, ಚಿಕ್ಕಪ್ಪ ಚಿಕ್ಕಮ್ಮ, ದೊಡ್ಡಪ್ಪ ದೊಡ್ಡಮ್ಮ, ಅತ್ತೆ ಮಾವ, ಅಕ್ಕ ತಂಗಿ, ಅಣ್ಣ ತಮ್ಮ ಹೀಗೆ ವಿವಿಧ ಬಂಧಗಳು ಒಂದೇ ಸೂರಿನಡಿಯಲ್ಲಿ ಒಗ್ಗಟ್ಟಾಗಿ ಬಾಳುವುದನ್ನೇ ಕುಟುಂಬ ಎನ್ನಬಹುದು. ಆದರೆ ಪ್ರತಿ ವರ್ಷ ಜನವರಿ 1 ರಂದು ಜಾಗತಿಕ ಕುಟುಂಬ ದಿನವನ್ನು ಆಚರಿಸಲಾಗುತ್ತದೆ. ಈ ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಬೇಕೆಂದರೆ ಕುಟುಂಬದ ಅಡಿಪಾಯ ಮಹತ್ವದ್ದಾಗಿದೆ. ಈ ಆಚರಣೆಗೂ ಮುನ್ನವೇ ಭಾರತವು ವಸುದೈವ ಕುಟುಂಬಕಂ ಎನ್ನುವ ವಿಷಯವನ್ನು ಜಗತ್ತಿಗೆ ತಿಳಿಸಿಕೊಟ್ಟಿದೆ. ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ ಜಾಗತಿಕ ಕುಟುಂಬ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಜಾಗತಿಕ ಕುಟುಂಬ ದಿನದ ಇತಿಹಾಸ

ಜಾಗತಿಕ ಕುಟುಂಬ ದಿನದ ಇತಿಹಾಸದತ್ತ ಗಮನ ಹರಿಸಿದರೆ ಇದು ಎರಡು ಪುಸ್ತಕಗಳನ್ನು ಒಳಗೊಂಡಿದೆ. ಒನ್ ಡೇ ಇನ್ ಪೀಸ್ , ಜನವರಿ 1, 2000 ಹೆಸರಿನ ಮೊದಲ ಮಕ್ಕಳ ಪುಸ್ತಕವು 1996ರಲ್ಲಿ ಪ್ರಕಟವಾಗಿತ್ತು. ಈ ಪುಸ್ತಕವನ್ನು ಅಮೆರಿಕದ ಲೇಖಕರಾದ ಸ್ಟೀವ್‌ ಡೈಮಾಂಡ್‌ ಮತ್ತು ರಾಬರ್ಟ್‌ ಅಲನ್‌ ಸಿಲ್ವರ್‌ಸ್ಟ್ರೈನ್‌ ಬರೆದಿದ್ದರು. 1998ರಲ್ಲಿ ಲಿಂಡಾ ಗ್ರೋವರ್‌ ಬರೆದ ಟ್ರೀ ಇಸ್‌ಲ್ಯಾಂಡ್‌: ಏ ನಾವೆಲ್‌ ಫಾರ್‌ ದಿ ನ್ಯೂ ಮಿಲೇನಿಯಂ ಹೆಸರಿನ ಪುಸ್ತಕವು ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ಜನವರಿ 1 ರಂದು ವಿಶ್ವ ಕುಟುಂಬ ದಿನವಾಗಿ ಆಚರಿಸಬೇಕೆಂದು ಎನ್ನುವ ಬಯಕೆಯು ಲೇಖಕಿ ಗ್ರೋವರ್‌ ಅವರಿಗೆ ಇತ್ತು. ಒನ್‌ ಡೇ ಪೀಸ್‌ ಪುಸ್ತಕದಲ್ಲಿ ಈ ದಿನದ ಮಹತ್ವವನ್ನು ಉಲ್ಲೇಖಿಸಿದ್ದರು. ಆದರೆ ದಶಕದ ಹಿಂದೆ ಈ ದಿನವನ್ನು ವಿಶ್ವಸಂಸ್ಥೆಯು ಡೇ ಆಫ್‌ ಪೀಸ್‌ ಎಂದು ಆಚರಿಸುತ್ತಿತ್ತು. ತದನಂತರದಲ್ಲಿ ಜನವರಿ 1 ರಂದು ಜಾಗತಿಕ ಕುಟುಂಬ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಜನವರಿ 1ರಂದೇ ಹೊಸವರ್ಷ ಆಚರಣೆ ಯಾಕೆ? ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಜಾಗತಿಕ ಕುಟುಂಬ ದಿನದ ಮಹತ್ವ ಹಾಗೂ ಆಚರಣೆ

ಪ್ರತಿಯೊಬ್ಬರು ತಮ್ಮ ಕುಟುಂಬವನ್ನು ಪ್ರೀತಿಸಬೇಕು, ಈ ಮೂಲಕವೇ ಇಡೀ ವಿಶ್ವವನ್ನೇ ಪ್ರೀತಿಸಬೇಕು ಎನ್ನುವ ಆಶಯದೊಂದಿಗೆ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನವು ಪ್ರಪಂಚದಾದ್ಯಂತ ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸಿ, ಭಾಷೆ, ಧರ್ಮ, ದೇಶ, ಜನಾಂಗ, ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಒಂದಾಗಿ ಬದುಕಲು ಪ್ರೇರಪಿಸುವ ದಿನವಾಗಿದೆ. ಈ ಹಿನ್ನಲೆಯಲ್ಲಿ ಜಾಗತಿಕವಾಗಿ ಈ ದಿನದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ