ಚಹಾ ಮಾಡಲು ಈ ವಿಧಾನ ಅನುಸರಿಸಿದ್ರೆ ಟೀ ಸಖತ್ ಟೇಸ್ಟಿಯಾಗಿರುತ್ತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 06, 2025 | 12:45 PM

ಚಹಾಯೆಂದರೆ ಎಲ್ಲರಿಗೂ ಇಷ್ಟನೇ. ಆದರೆ ಕೆಲವರೂ ಮಾಡಿದ ಚಹಾ ಕುಡಿದರೆ ಮತ್ತೆ ಮತ್ತೆ ಕುಡಿಯಬೇಕೆನಿಸುತ್ತದೆ. ಅಷ್ಟು ಕೆನೆಭರಿತವಾಗಿ ರುಚಿಕರವಾಗಿ ಚಹಾ ಮಾಡುತ್ತಾರೆ. ಪ್ರತಿಯೊಬ್ಬರು ಟೀ ಮಾಡುವ ವಿಧಾನ ವಿಭಿನ್ನವಾಗಿರುತ್ತದೆ. ಆದರೆ ಬಹುತೇಕರಿಗೂ ಚಹಾ ಮಾಡುವ ಸರಿಯಾದ ವಿಧಾನದ ಬಗ್ಗೆ ತಿಳಿದಿಲ್ಲ. ಹಾಗಾದ್ರೆ ಚಹಾ ಮಾಡುವುದಕ್ಕೂ ಸರಿಯಾದ ಮಾರ್ಗವಿದ್ದು ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಹಾ ಮಾಡಲು ಈ ವಿಧಾನ ಅನುಸರಿಸಿದ್ರೆ ಟೀ ಸಖತ್ ಟೇಸ್ಟಿಯಾಗಿರುತ್ತೆ
ಸಾಂದರ್ಭಿಕ ಚಿತ್ರ
Follow us on

ಚಹಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಒಂದು ಕಪ್ ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಆರಂಭಿಸುವವರೇ ಹೆಚ್ಚು. ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್ ಕಾಫಿ ಕುಡಿದರೇನೇ ಮನಸ್ಸಿಗೇನೋ ನೆಮ್ಮದಿ. ಮಿಲ್ಕ್ ಟೀ, ಜಿಂಜರ್ ಟೀ, ಲೆಮನ್ ಟೀ, ರೋಸ್ ಟೀ, ಮ್ಯಾಂಗೋ ಟೀ, ಕೇಸರ್ ಟೀ ಹೀಗೆ ಚಹಾದಲ್ಲಿ ಹತ್ತು ಹಲವು ವೆರೈಟಿಗಳಿವೆ. ಆದರೆ ಕೆಲವರು ಪರ್ಫೆಕ್ಟ್ ಆಗಿ ಚಹಾ ಮಾಡುವುದನ್ನು ನೋಡಿರಬಹುದು. ಇನ್ನು ಕೆಲವರಿಗೆ ಚಹಾ ಮಾಡುವ ಸರಿಯಾದ ವಿಧಾನ ಯಾವುದು ಎನ್ನುವುದೇ ಗೊತ್ತಿರಲ್ಲ. ಹಾಗಾದ್ರೆ ಈ ವಿಧಾನದ ಮೂಲಕ ಚಹಾ ಮಾಡಿದ್ರೆ ಸಖತ್ ಟೇಸ್ಟಿಯಾಗಿರುತ್ತದೆ.

ಚಹಾ ಮಾಡುವ ವಿಧಾನ 1 :

* ಮೊದಲು ನೀರಿನಲ್ಲಿ ಚಹಾ ಪುಡಿಯನ್ನು ಕುದಿಸಿ ಸಾಂಪ್ರದಾಯಿಕ ವಿಧಾನದಲ್ಲಿ ಚಹಾ ಮಾಡುತ್ತಾರೆ.

* ಒಂದು ಪಾತ್ರೆಯಲ್ಲಿ ಅಗತ್ಯವಿರುವಷ್ಟು ನೀರನ್ನು ತೆಗೆದುಕೊಂಡು ಗ್ಯಾಸ್ ಸ್ಟವ್ ಮೇಲೆ ಇಡಿ. ಅದಕ್ಕೆ ಚಹಾ ಪುಡಿ ಸೇರಿಸಿಕೊಂಡು ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ.

* ಆ ಬಳಿಕ ಅಗತ್ಯವಿರುವಷ್ಟು ಹಾಲು ಮತ್ತು ಸಕ್ಕರೆ ಸೇರಿಸಿದರೆ ಚೆನ್ನಾಗಿ ಕುದಿಸಿಕೊಳ್ಳಿ.

* ಈ ಚಹಾವನ್ನು ಸೋಸಿದರೆ ಸುವಾಸನೆ ಭರಿತವಾದ ಖಡಕ್ ಸಾಂಪ್ರದಾಯಿಕ ಶೈಲಿಯ ಚಹಾ ಸಿದ್ಧವಾಗುತ್ತದೆ.

ಚಹಾ ಮಾಡುವ ವಿಧಾನ 2:

* ಕೆಲವರು ಹಾಲು ಮತ್ತು ನೀರನ್ನು ಕುದಿಸುವ ಚಹಾ ಮಾಡುತ್ತಾರೆ. ಇದು ಕ್ರೀಮಿಯರ್ ಚಹಾ ಆನಂದಿಸುವವರಲ್ಲಿ ಈ ವಿಧಾನವು ಜನಪ್ರಿಯವಾಗಿದೆ.

* ಹಾಲು ಮತ್ತು ನೀರನ್ನು 2:1 ಅನುಪಾತದಲ್ಲಿ ತೆಗೆದುಕೊಂಡು ಚೆನ್ನಾಗಿ ಕುದಿಸಿಕೊಳ್ಳಿ.

* ತದನಂತರದಲ್ಲಿ ಇದಕ್ಕೆ ಚಹಾ ಪುಡಿ ಹಾಗೂ ಸಕ್ಕರೆ ಸೇರಿಸಿ. ಇದನ್ನು ಹಾಲು ನೀರಿನ ಮಿಶ್ರಣದಲ್ಲಿ ಚೆನ್ನಾಗಿ ಕುದಿಯಲು ಬಿಡಿ.

* ಚಹಾವು ಕುದಿಯುತ್ತಿದ್ದಂತೆ ಮೃದುವಾದ ಪರಿಮಳಯುಕ್ತ ಸುವಾಸನೆಯು ಹೊರಹೊಮ್ಮುತ್ತದೆ.

* ಈ ಮಿಶ್ರಣವನ್ನು ಸೋಸಿದರೆ ರುಚಿಕರವಾದ ಚಹಾ ಕುಡಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: ಬ್ಲಾಕ್ ಟೀಗಿಂತ ಬ್ಲಾಕ್ ಕಾಫಿ ಆರೋಗ್ಯಕ್ಕೆ ಉತ್ತಮ ಏಕೆ? ಇದೆ ಕಾರಣಗಳಂತೆ

ಯಾವ ವಿಧಾನ ಉತ್ತಮ?

* ಚಹಾ ಮಾಡುವ ಅತ್ಯುತ್ತಮ ವಿಧಾನ ಯಾವುದೆಂಬುದು ರುಚಿ ಹಾಗೂ ಆದ್ಯತೆಗಳನ್ನು ಅವಲಂಬಿಸಿರುತ್ತದೆ.

* ಗಟ್ಟಿಯಾದ ಖಡಕ್ ಚಹಾ ಇಷ್ಟ ಪಡುವವರು ಮೊದಲು ನೀರಿನಲ್ಲಿ ಚಹಾ ಪುಡಿಯನ್ನು ಕುದಿಸುವ ಸಾಂಪ್ರದಾಯಿಕ ವಿಧಾನ ಆರಿಸಿಕೊಳ್ಳಬಹುದು.

* ಕೆನೆ ಭರಿತ ಸುವಾಸನೆಯುಕ್ತ ಚಹಾ ಕುಡಿಯಲು ಇಷ್ಟ ಪಡುವವರು ಹಾಲು ಮತ್ತು ನೀರಿನ ಮಿಶ್ರಣದೊಂದಿಗೆ ಚಹಾ ತಯಾರಿಸುವ ಈ ವಿಧಾನ ಆಯ್ಕೆ ಮಾಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ