Guru Gobind Singh Jayanti 2025: ಜೀವನಕ್ಕೆ ಸ್ಫೂರ್ತಿ ನೀಡುವ ಗುರು ಗೋಬಿಂದ್ ಸಿಂಗ್ ಉಲ್ಲೇಖಗಳಿವು
ಸಿಖ್ ಸಮುದಾಯದ ಹತ್ತನೇ ಗುರುವಾದ ಗುರು ಗೋಬಿಂದ್ ಸಿಂಗ್ ಅವರ 358 ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲು ಗುರು ಗೋಬಿಂದ್ ಸಿಂಗ್ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜನವರಿ 6 ರಂದು ಗುರು ಗೋಬಿಂದ್ ಸಿಂಗ್ ಜಯಂತಿ ಆಚರಿಸಲಾಗುತ್ತಿದ್ದು, ಈ ದಿನದ ಆಚರಣೆಯ ಹಿಂದಿನ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತ್ತರ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಗುರು ಗೋಬಿಂದ್ ಸಿಂಗ್ ಜಿ ಅವರು 1666 ರಲ್ಲಿ ಪೋಹ್ (ಪೌಶ್) ತಿಂಗಳಲ್ಲಿ ಸಪ್ತಮಿ ತಿಥಿ, ಶುಕ್ಲ ಪಕ್ಷದಲ್ಲಿ ಜನಿಸಿದರು. ಗುರು ಗೋಬಿಂದ್ ಸಿಂಗ್ ಜಿ ಅವರು ಗುರು ತೇಜ್ ಬಹದ್ದೂರ್ ಮತ್ತು ಮಾತಾ ಗುಜ್ರಿ ಅವರ ಏಕೈಕ ಪುತ್ರ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈ ದಿನಾಂಕವು ಪ್ರತಿವರ್ಷ ಬದಲಾಗುವ ಕಾರಣ ಈ ವರ್ಷ ಜನವರಿ 6 ರಂದು ಗುರು ಗೋವಿಂದ ಸಿಂಗ್ ಜಯಂತಿ ಆಚರಿಸಲಾಗುತ್ತಿದೆ. ಹತ್ತನೇ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್ ಮಹಾನ್ ಹೋರಾಟಗಾರಾಗಿ ಗುರುತಿಸಿಕೊಂಡವರು.
ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಅವನ ತಂದೆ ಗುರು ತೇಜ್ ಬಹದ್ದೂರ್ ರ ಶಿರಚ್ಛೇದ ಮಾಡಿದ ಮಾಡಲಾಯಿತು. ಆ ನಂತರದಲ್ಲಿ ಗುರು ಗೋಬಿಂದ್ ರನ್ನು ಒಂಬತ್ತನೆಯ ವಯಸ್ಸಿನಲ್ಲಿ ಹತ್ತನೇ ಸಿಖ್ ಗುರು ಎಂದು ಪಟ್ಟಾಭಿಷೇಕವಾಯಿತು. ಭಾರತದಲ್ಲಿ ಮೊಘಲರ ಆಳ್ವಿಕೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಈ ಸಮಯದಲ್ಲಿ ಆಡಳಿತಗಾರರ ದೌರ್ಜನ್ಯದ ವಿರುದ್ಧ ಹೋರಾಡಿದ್ದರು. ಕಾವ್ಯ, ತತ್ವಶಾಸ್ತ್ರಗಳ ಕಡೆಗೆ ಅಪಾರ ಒಲವು ಹೊಂದಿದ್ದರು. ಜಾತಿ ವ್ಯವಸ್ಥೆ ಹಾಗೂ ಭಾರತವನ್ನು ಹಿಂದಕ್ಕೆ ಹಾಕುವ ಕೆಲವು ವ್ಯವಸ್ಥೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಗುರು ಗೋಬಿಂದ್ ಸಿಂಗ್ ಶಾಂತಿ ಮತ್ತು ಸಮಾನತೆಯನ್ನು ಬೋಧಿಸಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಹೀಗಾಗಿ ಗುರು ಗೋಬಿಂದ್ ಸಿಂಗ್ ಹುಟ್ಟಿದ ದಿನವು ಸಿಖ್ಖರ ಪಾಲಿಗೆ ಅತೀ ಪವಿತ್ರ ದಿನವಾಗಿದೆ.
ಗುರು ಗೋಬಿಂದ್ ಸಿಂಗ್ ಜಯಂತಿ ಮಹತ್ವ ಹಾಗೂ ಆಚರಣೆ
ಆಧ್ಯಾತ್ಮಿಕತೆ ಮತ್ತು ಸಮಾಜದ ಕಡೆಗಿನ ಜವಾಬ್ದಾರಿಯ ನಡುವೆ ಸಮತೋಲಿತ ಜೀವನವನ್ನು ನಡೆಸಲು ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಪ್ರತಿ ವರ್ಷ ಈ ದಿನದಂದು ಗುರುದ್ವಾರಗಳನ್ನು ಅಲಂಕರಿಸಲಾಗುತ್ತದೆ. ಸಿಖ್ರ ಸಾಂಪ್ರದಾಯದಂತೆ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ದಿನದಂದು ಭಜನೆಗಳು, ಕೀರ್ತನೆಗಳನ್ನು ಹಾಡುವ ಮೂಲಕ ಅದ್ದೂರಿಯಾಗಿ ಆಯೋಜಿಸಲಾಗುತ್ತದೆ.
ಇದನ್ನು ಓದಿ: ಚಳಿಗಾಲದಲ್ಲಿ ಲವಂಗವು ನಿಮ್ಮ ಬೆಸ್ಟ್ ಫ್ರೆಂಡ್ ಆಗುವುದು ಗ್ಯಾರಂಟಿ, ಹೇಗೆ? ಇಲ್ಲಿದೆ ನೋಡಿ
ಗುರುಗೋಬಿಂದ್ ಸಿಂಗ್ ಸ್ಫೂರ್ತಿದಾಯಕ ಉಲ್ಲೇಖಗಳು
* ಒಳಗಿನಿಂದ ಸ್ವಾರ್ಥವನ್ನು ನಿರ್ಮೂಲನೆ ಮಾಡಿದಾಗ ಶ್ರೇಷ್ಠ ಸೌಕರ್ಯಗಳು ಮತ್ತು ಶಾಶ್ವತ ಶಾಂತಿ ಸಿಗುತ್ತದೆ.
* ನಿಜವಾದ ಗುರುವಿನ ಸೇವೆ ಮಾಡುವುದರಿಂದ ಶಾಶ್ವತ ಶಾಂತಿ ಸಿಗುತ್ತದೆ ಮತ್ತು ಹುಟ್ಟು ಸಾವು ನೋವುಗಳು ದೂರವಾಗುತ್ತವೆ.
* ಅಜ್ಞಾನಿಯು ಸಂಪೂರ್ಣವಾಗಿ ಕುರುಡನಾಗಿರುತ್ತಾನೆ, ಅವನು ಆಭರಣದ ಮೌಲ್ಯವನ್ನು ಮೆಚ್ಚುವುದಿಲ್ಲ.
* ಭಗವಂತನ ನಾಮವನ್ನು ಧ್ಯಾನಿಸುವವರು ಸಕಲ ಶಾಂತಿ ಮತ್ತು ಸೌಕರ್ಯಗಳನ್ನು ಪಡೆಯುತ್ತಾರೆ.
* ಭಗವಂತನ ಉಪದೇಶವನ್ನು ಹೇಳುವ ಗುರುಗಳಿಗೆ ನಾನು ಬಲಿಯಾಗಿದ್ದೇನೆ.
* ಭಗವಂತನ ಸೇವೆಗೆ ಕಾರಣರಾದ ಆ ಗುರುವಿಗೆ ನಾನು ಎಂದೆಂದಿಗೂ ಋಣಿ.
* ಗುರುವಿನ ವಾಕ್ಯದ ಮೂಲಕ ಭಗವಂತನನ್ನು ಪೂಜಿಸುವ ಹಾಗೂ ಆರಾಧಿಸುವವರು ತಮ್ಮ ನೋವು ಮತ್ತು ಸಂಕಟಗಳನ್ನು ಮರೆತುಬಿಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ