ಶ್ಯಾಂಪೂಗೆ ಈ ವಸ್ತುವನ್ನು ಬೆರೆಸಿ ಹಚ್ಚಿದರೆ ನಯವಾದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ
ಪ್ರತಿಯೊಬ್ಬರೂ ರೇಷ್ಮೆಯಂತೆ ಹೊಳೆಯುವ ನಯವಾದ ಕೂದಲನ್ನು ಹೊಂದಲು ಆಸೆ ಪಡುತ್ತಾರೆ. ಇದಕ್ಕಾಗಿ ಕೆರಾಟಿನ್ ಚಿಕಿತ್ಸೆ, ರಾಸಾಯನಿಕ ಉತ್ಪನ್ನಗಳ ಮೊರೆ ಹೋಗ್ತಾರೆ. ಈ ರಾಸಾಯನಿಕ ಉತ್ಪನ್ನಗಳು ಕೂದಲಿಗೆ ಮಾಕರವಾಗಬಹುದು. ಹಾಗಾಗಿ ಶ್ಯಾಂಪೂಗೆ ಗ್ಲಿಸರಿಸ್ ಸೇರಿಸಿ ಕೂದಲಿಗೆ ಹಚ್ಚಿ, ಇದು ಕೂದಲನ್ನು ಸಾಫ್ಟ್ ಮತ್ತು ಶೈನಿ ಮಾಡುವುದಲ್ಲದೆ, ತಲೆಹೊಟ್ಟು, ಕೂದಲು ಉದುರುವಿಕೆಯ ಸಮಸ್ಯೆಯನ್ನೂ ನಿವಾರಿಸುತ್ತದೆ.

ಹೊಳೆಯುವ ಸೊಂಪಾದ ಕೂದಲು (hair) ನಮ್ಮದಾಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ದುಬಾರಿ ಶ್ಯಾಂಪೂ, ಕಂಡೀಷನರ್‌ಗಳನ್ನು ಹಚ್ಚಿಕೊಳ್ಳುತ್ತಾರೆ. ಹೊಳೆಯುವ ಕೂದಲಿಗಾಗಿ ಕೆರಾಟಿನ್‌ನಂತಹ ಚಿಕಿತ್ಸೆಗಳ ಮೊರೆ ಹೋಗ್ತಾರೆ. ಆದ್ರೆ ಇದರಿಂದ ಯಾವುದೇ ಹೆಚ್ಚಿನ ಫಲಿತಾಂಶಗಳು ದೊರೆಯುವುದಿಲ್ಲ ಬದಲಾಗಿ ಕೂದಲು ಉದುರುವ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಾರೆ. ಹೀಗಿರುವಾಗ ಶ್ಯಾಂಪೂ ಜೊತೆ ಗ್ಲಿಸರಿನ್ ಸೇರಿಸಿ ಕೂದಲಿಗೆ ಹಚ್ಚಿ, ಇದು ಕೂದಲನ್ನು ರೇಷ್ಮೆಯ ಹಾಗೆ ಹೊಳೆಯುವಂತೆ ಮಾಡುವುದಲ್ಲದೆ ಕೂದಲು ಉದುರುವಿಕೆ, ತಲೆಹೊಟ್ಟು ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಹಾಗಿದ್ರೆ ಕೂದಲಿನ ಆರೈಕೆಗೆ ಗ್ಲಿಸರಿನ್ ಅನ್ನು ಹೇಗೆ ಬಳಸುವುದು ನೋಡೋಣ.
ಕೂದಲಿನ ಆರೈಕೆಗೆ ಗ್ಲಿಸರಿನ್:
ಗ್ಲಿಸರಿನ್ ತ್ವಚೆಯ ಆರೈಕೆಗೆ ಮಾತ್ರವಲ್ಲ ಕೂದಲಿನ ಆರೈಕೆಗೂ ಪ್ರಯೋಜನಕಾರಿ. ಹೌದು ಗ್ಲಿಸರಿನ್ ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು, ತಲೆಹೊಟ್ಟು ಕಡಿಮೆ ಮಾಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಗ್ಲಿಸರಿನ್ ಕೂದಲನ್ನು ಬೇರುಗಳಿಂದ ಕಂಡೀಷನ್ ಮಾಡುತ್ತದೆ, ನೆತ್ತಿಯ ಮೇಲೆ ಆರೋಗ್ಯಕರ ಕೂದಲು ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ ಹೀಗೆ ಇದು ನೆತ್ತಿಯ ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.
ಇದನ್ನೂ ಓದಿ: ದಿನಕ್ಕೆ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡಿದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಗೊತ್ತಾ?
ಕೂದಲಿನ ಆರೈಕೆಗೆ ಗ್ಲಿಸರಿನ್ ಬಳಸುವುದು ಹೇಗೆ?
ಸ್ವಲ್ಪ ಶ್ಯಾಂಪೂಗೆ 1 ಟೀ ಸ್ಪೂನ್ ಗ್ಲಿಸರಿನ್ ಸೇರಿಸಿ ಜೊತೆಗೆ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಈ ಗ್ಲಿಸರಿನ್ ಮಿಶ್ರಿತ ಶ್ಯಾಂಪೂವಿನಿಂದ ಕೂದಲನ್ನು ತೊಳೆಯಿರಿ. ಅಲ್ಲದೆ ಶಾಂಪೂ ಮಾಡಿದ ನಂತರ ನೀವು ಗ್ಲಿಸರಿನ್ ಅನ್ನು ಕಂಡಿಷನರ್ ರೀತಿಯಲ್ಲೂ ಬಳಸಬಹುದು. ಇದಕ್ಕಾಗಿ ಶ್ಯಾಂಪೂ ಮಾಡಿದ ನಂತರ ಇತರೆ ಕಂಡೀಷನ್ ಬದಲಿಗೆ ಗ್ಲಿಸರಿನ್ ನೊಂದಿಗೆ ಸ್ವಲ್ಪ ನೀರು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ, ನಂತರ ತೊಳೆಯಿರಿ. ಇದು ಕೂದಲಿಗೆ ಅಗತ್ಯವಾದ ತೇವಾಂಶ ಮತ್ತು ಪೋಷಣೆಯನ್ನು ಒದಗಿಸುತ್ತವೆ ಮತ್ತು ಕೂದಲಿನ ನೈಸರ್ಗಿಕ ಮೃದುತ್ವ ಮತ್ತು ಹೊಳಪನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತವೆ. ತಲೆಹೊಟ್ಟು, ಸೀಳು ತುದಿ ಕೂದಲು, ಒಣ ಕೂದಲು ಸಮಸ್ಯೆಯನ್ನು ನಿವಾರಿಸುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಕೂದಲಿನ ಆರೈಕೆಗೆ ಈ ಮನೆಮದ್ದುಗಳ ಜೊತೆ ಜೊತೆಗೆ ಸಾಕಷ್ಟು ನೀರು ಕುಡಿಯುವುದು, ಸಮತೋಲಿತ ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದು ಸಹ ಅತ್ಯಗತ್ಯವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Tue, 6 January 26




