ತಾಯಿಗೆ ಉಡುಗೊರೆ ನೀಡಲು, ತಾಯಿ(Mother) ಯನ್ನು ಪ್ರೀತಿಸಲು ನಿಗದಿತ ದಿನವೇ ಬೇಕೆಂದಿಲ್ಲ, ಆದರೂ ಅದನ್ನು ಸಂಭ್ರಮಿಸಲು ಒಂದು ದಿನವೇ ಮೀಸಲಿರುವಾಗಿ ಅದನ್ನು ಮಿಸ್ ಮಾಡಲೇಬೇಡಿ. ನಿಮ್ಮ ಬಳಿ ಹಣ ಕಡಿಮೆ ಇರಬಹುದು ಆದರೆ ಪ್ರೀತಿ ಹೆಚ್ಚಿದೆಯಲ್ಲಾ ಅದೆಲ್ಲವನ್ನು ಬೆರೆಸಿ, ಅಮ್ಮಂದಿರ ದಿನವನ್ನು ಚೆನ್ನಾಗಿ ಆಚರಿಸಿ. ಪ್ರತಿ ಪಕ್ಷ, ಪ್ರತಿ ನಿಮಿಷ ಪ್ರತಿ ದಿನವೂ ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವಿಲ್ಲ. ತಾಯಿಯ ಪ್ರೀತಿ, ತ್ಯಾಗಕ್ಕೆ ನಾವು ಏನೇ ಮಾಡಿದರೂ ಅದು ಕಡಿಮೆ ಆಗುತ್ತದೆ.ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೆ ತಾಯಂದಿರ ದಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ನೀಡುತ್ತದೆ.
ಹೆಚ್ಚು ಖರ್ಚಿಲ್ಲದೆ ಅಮ್ಮಂದಿರ ದಿನ(Mother’s Day)ವನ್ನು ವಿಶೇಷವಾಗಿಸಲು ಇಲ್ಲಿದೆ ಟಿಪ್ಸ್
-ಅಮ್ಮನಿಗಾಗಿ ನೀವೇ ಅಡುಗೆ ತಯಾರಿಸಿ
ತಾಯಂದಿರ ದಿನವನ್ನು ವಿಶೇಷವಾಗಿಸಲು, ಅಮ್ಮನಿಗೆ ಉಡುಗೊರೆ ತರಲು ಸಾಧ್ಯವಾಗದಿದ್ದರೆ ಮನೆಯಲ್ಲಿರುವ ಪದಾರ್ಥಗಳಲ್ಲೇ ಬಳಸಿಕೊಂಡು ಅಡುಗೆ ಮಾಡಿ ಪ್ರೀತಿಯಿಂದ ಬಡಿಸಿ.
-ಅಮ್ಮನೊಂದಿಗೆ ಪಾರ್ಕ್ನಲ್ಲಿ ವಿಹಾರ ಮಾಡಿ
ಅಮ್ಮನ ಪ್ರೀತಿಯೇ ಹಾಗೆಯೇ ಎಂದೂ ಮಕ್ಕಳಿಂದ ಏನನ್ನೂ ಬಯಸುವುದಿಲ್ಲ, ಅವಳ ಜತೆ ಸಮಯ ಕಳೆದರೆ ಅವಳಷ್ಟು ಸಂತಸ ಪಡುವವರು ಮತ್ಯಾರೂ ಇಲ್ಲ, ಹಾಗಾಗಿ ಅಮ್ಮನೊಂದಿಗೆ ಪಾರ್ಕ್ನಲ್ಲಿ ವಿಹಾರ ಮಾಡಿ, ಹರಟೆ ಹೊಡೆದು ಇಡೀ ದಿನವು ಅಮ್ಮ ಖುಷಿಯಾಗಿರುವಂತೆ ನೋಡಿಕೊಳ್ಳಿ.
-ನೀವೇ ಅಮ್ಮನಿಗೊಂದು ಉಡುಗೊರೆ ಸಿದ್ಧಗೊಳಿಸಿ
ನಿಮ್ಮ ಮನೆಯಲ್ಲಿ ಕಂಪ್ಯೂಟರ್ ಇದ್ದರೆ, ಅಮ್ಮನ ಹೆಸರಿನಲ್ಲಿ ಒಂದು ವೆಬ್ಸೈಟ್ ಸಿದ್ಧಗೊಳಿಸಿ ಅದರಲ್ಲಿ ಅಮ್ಮ ಹಾಗೂ ಕುಟುಂಬದ ಫೋಟೊವನ್ನು ಅಪ್ಲೋಡ್ ಮಾಡಿ, ಅಮ್ಮನಿಗೆ ತೋರಿಸಿ ಇದು ಸಿಂಪಲ್ ಎನಿಸಬಹುದು ಆದರೆ ಅಮ್ಮನಿಗೆ ತುಂಬಾ ಇಷ್ಟವಾಗುತ್ತದೆ.
ತಾಯಂದಿರ ದಿನ ಶುರುವಾಗಿದ್ದು ಹೇಗೆ?
ತಾಯಂದಿರ ದಿನ 1908ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Fri, 6 May 22