ನಾಗರ ಪಂಚಮಿ (Nag Panchami 2023) ಹಬ್ಬವನ್ನು 21 ಆಗಸ್ಟ್ 2023 ರಂದು ಆಚರಿಸಲಾಗುತ್ತದೆ. ಇದು ಶ್ರಾವಣ ಸೋಮವಾರ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸರ್ಪ ದೇವರಿಗೆ ಸಮರ್ಪಿಸಲಾಗಿದೆ. ನಾಗಪೂಜೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವಾಗಿದೆ.
ಸರ್ಪ ದೋಷವನ್ನು ತೊಡೆದುಹಾಕಲು ಈ ದಿನ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ನಾಗ ಪಂಚಮಿಯಂದು ಮಾಡಬಾರದಂತಹ ಕೆಲವು ಕೆಲಸಗಳಿವೆ, ಇದನ್ನು ಮಾಡಿದರೆ ಮುಂಬರುವ 7 ತಲೆಮಾರುಗಳಿಗೆ ದೋಷ ತಟ್ಟುತ್ತದೆ ಎನ್ನುತ್ತಾರೆ. ನಾಗ ಪಂಚಮಿಯ ಶುಭ ಮುಹೂರ್ತ, ನಾಗ ಪೂಜೆಯ ಮಹತ್ವ ಮತ್ತು ನಿಯಮಗಳನ್ನು ತಿಳಿಯೋಣ.
ಜ್ಯೋತಿಷ್ಯದ ಪ್ರಕಾರ ಹಾವು ಕಡಿತದಿಂದ ಯಾರಾದರೂ ಸತ್ತರೆ ಅಂತಹ ಆತ್ಮಗಳಿಗೆ ಮೋಕ್ಷ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾಗಪಂಚಮಿಯಂದು ನಾಗದೇವರ ಪೂಜೆ ಮಾಡುವುದರಿಂದ ನಾಗದೋಷದ ಭಯವಿಲ್ಲ, ಅಕಾಲಿಕ ಮರಣ ಹೊಂದಿದವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.
ಬ್ರಹ್ಮಪುರಾಣದ ಪ್ರಕಾರ, ನಾಗ ಪಂಚಮಿಯ ದಿನದಂದು ನಾಗನನ್ನು ಪೂಜಿಸಲು ಬ್ರಹ್ಮ ದೇವರು ಹಾವುಗಳಿಗೆ ವರವನ್ನು ನೀಡಿದ್ದಾನೆ. ಈ ದಿನದಂದು ಅನಂತ, ವಾಸುಕಿ, ತಕ್ಷಕ ಮತ್ತು
ಕಾರ್ಕೋಟಕ ನಾಗಗಳನ್ನು ಪೂಜಿಸುವ ಆಚರಣೆ ಇದೆ. ಇವರನ್ನು ಪೂಜಿಸುವುದರಿಂದ ರಾಹು-ಕೇತುಗಳ ಜನ್ಮ ದೋಷ ಮತ್ತು ಸರ್ಪ ದೋಷಗಳಿಂದ ಮುಕ್ತಿ ಸಿಗುತ್ತದೆ.
ಹಿಂದೂ ಧರ್ಮದಲ್ಲಿ ಹಾವುಗಳನ್ನು ದೇವತೆಗಳೆಂದು ಪರಿಗಣಿಸಲಾಗುತ್ತದೆ. ಹಾವಿಗೆ ಎಂದಿಗೂ ಹಾನಿ ಮಾಡಬಾರದು, ಆದರೆ ವಿಶೇಷವಾಗಿ ನಾಗಪಂಚಮಿಯ ದಿನದಂದು ಹಾವುಗಳನ್ನು ನೋಯಿಸಬೇಡಿ. ಹೀಗೆ ಮಾಡುವುದರಿಂದ ಮುಂಬರುವ ಏಳು ತಲೆಮಾರುಗಳಿಗೆ ದೋಷ ಅಂಟುತ್ತದೆ.
ಇದನ್ನೂ ಓದಿ: ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನದ ಪ್ರಕಾರ ನಾಗರ ಪಂಚಮಿ ಪೂಜಾ ವಿಧಾನ ತಿಳಿಯಿರಿ
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ