ಹಾಟ್ ಆಯಿಲ್ ಮೆನಿಕ್ಯೂರ್ ಮಾಡಿಸಿಕೊಳ್ಳುವುದರಿಂದ ಏನು ಉಪಯೋಗ?

|

Updated on: Oct 19, 2023 | 7:32 PM

Hot Oil Manicure Benefits: ಬಿಸಿ ಎಣ್ಣೆಯ ಮೆನಿಕ್ಯೂರ್ ಅನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಉಗುರುಗಳಿಗೆ ತುಂಬಾ ವೇಗವಾಗಿ ವಯಸ್ಸಾಗುವುದನ್ನು ತಡೆಯಬಹುದು. ಇದು ದೀರ್ಘಾವಧಿಯಲ್ಲಿ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಬಿಸಿ ಎಣ್ಣೆಯ ಮೆನಿಕ್ಯೂರ್ ನಿಮ್ಮ ಉಗುರುಗಳನ್ನು ಸ್ವಚ್ಛಗೊಳಿಸುತ್ತದೆ.

ಹಾಟ್ ಆಯಿಲ್ ಮೆನಿಕ್ಯೂರ್ ಮಾಡಿಸಿಕೊಳ್ಳುವುದರಿಂದ ಏನು ಉಪಯೋಗ?
ಹಾಟ್ ಆಯಿಲ್ ಮೆನಿಕ್ಯೂರ್
Follow us on

ಹಾಟ್ ಆಯಿಲ್ ಮೆನಿಕ್ಯೂರ್ ದೊಡ್ಡ ದೊಡ್ಡ ಸ್ಪಾಗಳಲ್ಲಿ ಮಾಡಲಾಗುವ ದುಬಾರಿ ಮತ್ತು ಐಷಾರಾಮಿ ಉಗುರಿನ ಚಿಕಿತ್ಸೆಗಳಲ್ಲಿ ಒಂದು. ನಿಮ್ಮ ಉಗುರುಗಳು ಮತ್ತು ಕೈಗಳನ್ನು ಆರೋಗ್ಯದಿಂದ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ಈ ಚಿಕಿತ್ಸೆ ಮಾಡಲಾಗುತ್ತದೆ. ಇದು ನಿಮ್ಮ ಉಗುರುಗಳು ಮತ್ತು ಉಗುರಿನ ಹೊರಪೊರೆಗೆ ಪೋಷಣೆ ನೀಡುತ್ತದೆ. ಬಿಸಿ ಎಣ್ಣೆಯ ಮೆನಿಕ್ಯೂರ್‌ಗಳು ಅತ್ಯಂತ ಕಷ್ಟಕರವಾದ ಚಿಕಿತ್ಸೆಗಳಲ್ಲಿ ಒಂದಾಗಿದೆ. ಇದನ್ನು ದುಬಾರಿ ಸ್ಪಾಗಳಲ್ಲಿ ಮಾತ್ರ ಮಾಡುತ್ತಾರೆ. ಆದರೆ, ನಿಮ್ಮ ಮನೆಯಲ್ಲಿ ಲಭ್ಯವಿರುವ ಎಣ್ಣೆಗಳನ್ನು ಬಳಸಿ ಮನೆಯಲ್ಲೇ ಈ ಮೆನಿಕ್ಯೂರ್ ಮಾಡಿಕೊಳ್ಳಬಹುದಾಗಿದೆ.

ಹಾಟ್ ಆಯಿಲ್ ಮೆನಿಕ್ಯೂರ್​ನ ಪ್ರಯೋಜನಗಳೇನು?:

– ಬಿಸಿ ಎಣ್ಣೆಯ ಮೆನಿಕ್ಯೂರ್ ಅನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಉಗುರುಗಳಿಗೆ ತುಂಬಾ ವೇಗವಾಗಿ ವಯಸ್ಸಾಗುವುದನ್ನು ತಡೆಯಬಹುದು.

– ನೀವು ಚರ್ಮವನ್ನು ಮಸಾಜ್ ಮಾಡುವಾಗ, ರಕ್ತ ಸಂಚಲನವನ್ನು ಸುಧಾರಿಸಲು ಮತ್ತು ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಲು ಇದು ಸಹಕಾರಿ.

ಇದನ್ನೂ ಓದಿ: ಉಗುರುಗಳ ಆರೋಗ್ಯಕ್ಕೆ ಮನೆಯಲ್ಲೇ ಈ ದುಬಾರಿ ಮೆನಿಕ್ಯೂರ್ ಮಾಡಿ ನೋಡಿ

– ಇದು ದೀರ್ಘಾವಧಿಯಲ್ಲಿ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

– ಬಿಸಿ ಎಣ್ಣೆಯ ಮೆನಿಕ್ಯೂರ್ ನಿಮ್ಮ ಉಗುರುಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಎಫ್ಫೋಲಿಯೇಟ್ ಮಾಡುತ್ತದೆ. ದೀರ್ಘಾವಧಿಯಲ್ಲಿ ನಿಮ್ಮ ಉಗುರಿನ ಹೊರಪೊರೆಗಳ ವಿನ್ಯಾಸವನ್ನು ಸುಧಾರಿಸುತ್ತದೆ.

– ನಿಮ್ಮ ಉಗುರುಗಳು ಸ್ವಚ್ಛವಾಗಿರುತ್ತವೆ, ಅವು ವೇಗವಾಗಿ ಮತ್ತು ಬಲವಾಗಿ ಬೆಳೆಯುತ್ತವೆ.

– ನಿಮ್ಮ ಮಣಿಕಟ್ಟುಗಳು ಮತ್ತು ಕೈಗಳ ಸೌಂದರ್ಯ ಚೆನ್ನಾಗಿರುತ್ತದೆ.

ಇದನ್ನೂ ಓದಿ: ಎರಡೂ ಕೈಗಳ ಉಗುರುಗಳನ್ನು ಉಜ್ಜುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತಾ? ವೈದ್ಯರು ಹೇಳುವುದೇನು?

ಸೂರ್ಯಕಾಂತಿ ಎಣ್ಣೆ ಮತ್ತು ಹರಳೆಣ್ಣೆ, ಸ್ವಲ್ಪ ಬಾದಾಮಿ ಎಣ್ಣೆ, ವಿಟಮಿನ್ ಇ ಎಣ್ಣೆ ಮತ್ತು ಆಲಿವ್ ಎಣ್ಣೆ, ಟೀ ಟ್ರೀ ಎಣ್ಣೆ, ವಿಟಮಿನ್ ಇ ಕ್ಯಾಪ್ಸೂಲ್​ಗಳನ್ನು ಮಿಕ್ಸ್​ ಮಾಡಿಕೊಳ್ಳಿ. ಆ ಮಿಶ್ರಣವನ್ನು ಸುಮಾರು 30 ಸೆಕೆಂಡುಗಳ ಕಾಲ ಮೈಕ್ರೊವೇವ್​ನಲ್ಲಿ ಬಿಸಿ ಮಾಡಲು ಇಡಿ. ನೀವು ವಿಟಮಿನ್ ಇ ಕ್ಯಾಪ್ಸುಲ್​ಗಳನ್ನು ಓಪನ್ ಮಾಡಿ ಈ ಮಿಶ್ರಣಕ್ಕೆ ಸೇರಿಸಬಹುದು. ಎಣ್ಣೆಯನ್ನು ಕೊಂಚ ತಣ್ಣಗಾಗಲು ಬಿಡಿ. ನಂತರ ಎಣ್ಣೆಗಳ ಮಿಶ್ರಣ ಸಂಪೂರ್ಣವಾಗಿ ತಣ್ಣಗಾಗುವವರೆಗೆ ನಿಮ್ಮ ಉಗುರುಗಳನ್ನು ಅದರಲ್ಲಿ ಅದ್ದಿರಿ. ಬೇಕಾದರೆ, ಮತ್ತೆ ಎಣ್ಣೆಯನ್ನು 10 ಸೆಕೆಂಡ್ ಬಿಸಿ ಮಾಡಿ ಮತ್ತೊಮ್ಮೆ ನಿಮ್ಮ ಕೈಗಳನ್ನು ಅದರಲ್ಲಿ ಅದ್ದಬಹುದು.

ನಂತರ, ನಿಮ್ಮ ಕೈಗಳಿಗೆ ಮತ್ತು ಮಣಿಕಟ್ಟಿಗೆ ಆ ಮಿಶ್ರಣದಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ನೀವು ಇದನ್ನು ಮಾಡಿದ ನಂತರ ಸ್ವಚ್ಛವಾದ ನೀರಿನಿಂದ ನಿಮ್ಮ ಕೈಗಳನ್ನು ತೊಳೆಯಿರಿ. ಬಳಿಕ, ಸ್ವಚ್ಛವಾದ ಟವೆಲ್​ನಿಂದ ಒರೆಸಿಕೊಳ್ಳಿ. ಹೀಗೆ ಮಾಡಿದರೆ ಹಾಟ್ ಆಯಿಲ್ ಮೆನಿಕ್ಯೂರ್ ಪೂರ್ಣಗೊಳ್ಳುತ್ತದೆ. ರಾತ್ರಿ ಮಲಗುವ ಮುನ್ನ ನೀವು ಇದನ್ನು ವಾರಕ್ಕೆ 2 ಬಾರಿ ಮಾಡಬಹುದು. ಇದಾದ ನಂತರ ನಿಮ್ಮ ಕೈಗಳನ್ನು ಮಾಯಿಶ್ಚರೈಸಿಂಗ್ ಲೋಷನ್‌ನಿಂದ ಮಸಾಜ್ ಮಾಡಲು ಮರೆಯದಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Thu, 19 October 23