National Carrot Cake Day: ಮನೆಯಲ್ಲಿಯೇ ರುಚಿಕರ ಹಾಗೂ ಆರೋಗ್ಯಕರ ಕ್ಯಾರೆಟ್ ಕೇಕ್ ತಯಾರಿಸಿ, ಪಾಕ ವಿಧಾನ ಇಲ್ಲಿದೆ

|

Updated on: Feb 03, 2023 | 10:29 AM

ಪ್ರತಿ ವರ್ಷ ಫೆಬ್ರವರಿ 3 ರಂದು ರಾಷ್ಟ್ರೀಯ ಕ್ಯಾರೆಟ್ ಕೇಕ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಅಮೇರಿಕಾದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ಮನೆಯಲ್ಲಿಯೇ ಆರೋಗ್ಯಕರ ಕ್ಯಾರೆಟ್​​ ಕೇಕ್​ ಮಾಡಿ ಸವಿಯಿರಿ.

National Carrot Cake Day: ಮನೆಯಲ್ಲಿಯೇ ರುಚಿಕರ ಹಾಗೂ ಆರೋಗ್ಯಕರ ಕ್ಯಾರೆಟ್ ಕೇಕ್ ತಯಾರಿಸಿ, ಪಾಕ ವಿಧಾನ ಇಲ್ಲಿದೆ
ರಾಷ್ಟ್ರೀಯ ಕ್ಯಾರೆಟ್ ಕೇಕ್ ದಿನ
Follow us on

ಪ್ರತಿ ವರ್ಷ ಫೆಬ್ರವರಿ 3 ರಂದು ರಾಷ್ಟ್ರೀಯ ಕ್ಯಾರೆಟ್ ಕೇಕ್ ದಿನ(National Carrot Cake Day) ವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಅಮೇರಿಕಾದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಕ್ಯಾರೆಟ್ನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆದ್ದರಿಂದ ಈ ವಿಶೇಷ ದಿನದಂದು ಮನೆಯಲ್ಲಿಯೇ ಆರೋಗ್ಯಕರ ಕ್ಯಾರೆಟ್​​ ಕೇಕ್​ ಮಾಡಿ ಸವಿಯಿರಿ. ಕ್ಯಾರೆಟ್​​ನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಇದರಲ್ಲಿರುವ ಬೀಟಾ ಕೆರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಕಣ್ಣಿನ ದೃಷ್ಟಿ ದೋಷ ಸಮಸ್ಯೆಯಿಂದ ನಿಮ್ಮನ್ನು ದೂರವಿರಿಸುತ್ತದೆ.

ಕ್ಯಾರೆಟ್ ಕೇಕ್ ರೆಸಿಪಿ:

ಕ್ಯಾರೆಟ್ ಕೇಕ್​​ಗೆ ಬೇಕಾಗಿರುವ ಸಾಮಾಗ್ರಿಗಳು:

1 ಕಪ್​ ತುರಿದ ಕ್ಯಾರೆಟ್​
2 ಚಮಚ ಕೋಕೋ ಪೌಡರ್
1/2 ಕಪ್​ ಖರ್ಜೂರ
1 ಕಪ್ ಮೈದಾ ಹಿಟ್ಟು
1 ಕಪ್​​ ಪುಡಿ ಸಕ್ಕರೆ
1 ಚಮಚ​ ಬೇಕಿಂಗ್​ ಪೌಡರ್
1 ಕಪ್​ ಚೋಕೋ ಚಿಪ್ಸ್
2 ಚಮಚ ಡ್ರೈಫೂಟ್ಸ್​​​

ಇದನ್ನೂ ಓದಿ: ಗಂಜಿ ಊಟಕ್ಕೆ ಸೂಪರ್ ಕಾಂಬಿನೇಷನ್ ಕೇರಳ ಶೈಲಿಯ ನರಂಗ ಉಪ್ಪಿನಕಾಯಿ

ಕ್ಯಾರೆಟ್ ಕೇಕ್ ಮಾಡುವ ವಿಧಾನ:

ಹಂತ 1:

ಮೊದಲಿಗೆ ಒಂದು ಪ್ಯಾನ್​​ನಲ್ಲಿ ಮೈದಾ ಹಿಟ್ಟು, ನೀರು, ಬೆಣ್ಣೆ, ಬೇಕಿಂಗ್ ಪೌಡರ್​, ಕೋಕೋ ಪೌಡರ್​ ಹಾಗೂ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇನ್ನೊಂದು ಪಾತ್ರೆಯಲ್ಲಿ ಡ್ರೈಫೂಟ್ಸ್ ತುರಿದ ಕ್ಯಾರೆಟ್​, ಸಕ್ಕರೆ ಪುಡಿ ಬೆಣ್ಣೆ, ಖರ್ಜೂರ, ಚಾಕೋ ಚಿಪ್ಸ್​ ಹಾಗೂ ಚಾಕೋಲೇಟ್ ಚಿಪ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 2: 

ಈಗ ಒಂದು ಕೇಕ್​ ಟಿನ್​ ಅಥವಾ ಅಗಲವಾದ ಪಾತ್ರೆಯಲ್ಲಿ ಈ ಮೇಲಿನ ಎಲ್ಲ ಮಿಶ್ರಣವನ್ನು ಸುರಿಯಿರಿ. ​ಕೇಕ್​​ ಟಿನ್​​ಗೆ ಮಿಶ್ರಣವನ್ನು ಹಾಕುವ ಮುನ್ನ ಸ್ವಲ್ಪ ಎಣ್ಣೆಯನ್ನು ಸವರಿಕೊಳ್ಳಿ. ನಂತರ ಒವೆನ್​ನಲ್ಲಿ 20 ನಿಮಿಷ ಬೇಕ್​ ಮಾಡಿ. ಈಗ ರುಚಿಯಾದ ಕ್ಯಾರೆಟ್​​ ಕೇಕ್​​​ ಸಿದ್ಧವಾಗಿದೆ. ಹೆಚ್ಚಿನ ರುಚಿಗಾಗಿ ನೀವು ಇದರ ಮೇಲೆ ಚಾಕೋ ಚಿಪ್​ ಹಾಗೂ ಡ್ರೈ ಫೂಟ್ಸ್​​​​ಗಳಿಂದ ಅಲಂಕರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:29 am, Fri, 3 February 23