National Epilepsy Day 2021: ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ; ರೋಗ ಲಕ್ಷಣಗಳು ಮತ್ತು ಸಮಸ್ಯೆಯನ್ನು ಎದುರಿಸುವುದು ಹೇಗೆ?

| Updated By: shruti hegde

Updated on: Nov 17, 2021 | 12:19 PM

ರಾಷ್ಟ್ರೀಯ ಅಪಸ್ಮಾರ ದಿನ 2021: ಅಪಸ್ಮಾರವು ಮೆದುಳಿನ ಅಸ್ವಸ್ಥತೆಯಾಗಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಚಟುವಟಿಗಳನ್ನು ನಿಯಂತ್ರಿಸುವ ಮೆದುಳಿನ ದುರ್ಬಲತೆಯಿಂದ ಮೂರ್ಛೆರೋಗ ಅಥವಾ ಅಪಸ್ಮಾರ ಸಮಸ್ಯೆ ಕಾಡುತ್ತದೆ.

National Epilepsy Day 2021: ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ; ರೋಗ ಲಕ್ಷಣಗಳು ಮತ್ತು ಸಮಸ್ಯೆಯನ್ನು ಎದುರಿಸುವುದು ಹೇಗೆ?
ರಾಷ್ಟ್ರೀಯ ಅಪಸ್ಮಾರ ದಿನ 2021
Follow us on

ಅಪಸ್ಮಾರ ಎಂಬುದು ನರವೈಜ್ಞಾನಿಕ ರೋಗಗಳಲ್ಲಿ ಒಂದು. ದೇಶದಲ್ಲಿ ಇದು ಅಪರೂಪದ ಕಾಯಿಲೆಯೇನಲ್ಲ. ಅಪಸ್ಮಾರ (Epilepsy) ಎಂದರೆ ಮೂರ್ಛೆರೋಗ. ಅಪಸ್ಮಾರ ರೋಗ ಶಾಪದಿಂದ ಬರುತ್ತದೆ ಎಂದೂ ಕೆಲವರು ನಂಬಿದ್ದಾರೆ. ವೈಜ್ಞಾನಿಕ ಕ್ಷೇತ್ರ ಎಷ್ಟೇ ಮುಂದುವರೆದಿದ್ದರೂ ಇದೊಂದು ಕಳಂಕ ಎಂದು ಕೆಲವು ಮೂಢನಂಬಿಕೆಗಳನ್ನು ಜನರು ಇಂದಿಗೂ ನಂಬುತ್ತಿದ್ದಾರೆ. ಜನರು ಯಾವುದೇ ಮೂಢ ನಂಬಿಕೆಗಳಿಗೆ ಅಂಟಿಕೊಳ್ಳದೇ ಅಗತ್ಯವಾದ ಚಿಕಿತ್ಸೆಯನ್ನು (Treatment) ನೀಡಲು ತಡಮಾಡದಿರುವುದು ಒಳ್ಳೆಯದು. ಅಪಸ್ಮಾರ ರೋಗದ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಮತ್ತು ಮುನ್ನೆಚ್ಚೆರಿಕೆಯ ಕ್ರಮದ ನಗ್ಗೆ ಅರಿವು ಮೂಡಿಸಲು ಪ್ರತೀ ವರ್ಷ ನವೆಂಬರ್ 17ರಂದು ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನವನ್ನು (National Epilepsy Day) ಆಚರಿಸಲಾಗುತ್ತದೆ.

ಅಪಸ್ಮಾರವು ಮೆದುಳಿನ ಅಸ್ವಸ್ಥತೆಯಾಗಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಚಟುವಟಿಗಳನ್ನು ನಿಯಂತ್ರಿಸುವ ಮೆದುಳಿನ ದುರ್ಬಲತೆಯಿಂದ ಮೂರ್ಛೆರೋಗ ಅಥವಾ ಅಪಸ್ಮಾರ ಸಮಸ್ಯೆ ಕಾಡುತ್ತದೆ. ಇದ್ದಕ್ಕಿದ್ದಂತೆಯೇ ಕಾಣಿಸಿಕೊಳ್ಳುವ ಅಪಸ್ಮಾರ ರೋಗವು ಮನುಷ್ಯನ ಜೀವಕ್ಕೇ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿರುತ್ತವೆ.

ರೋಗ ಲಕ್ಷಣಗಳು
*ಸೆಳೆತ
*ನೆನಪಿನ ಶಕ್ತಿ ಕುಂಠಿತಗೊಳ್ಳುವುದು
*ಪ್ರಜ್ಞೆ ಕಳೆದುಕೊಳ್ಳುವುದು
*ಕಾಲುಗಳು, ಕೈಗಳು ಜುಮ್ ಎನ್ನುವುದು (ಸೆಳೆತ)
*ಸ್ನಾಯುಗಳಲ್ಲಿ ಬಿಗಿತ
*ತಲೆತಿರುಗುವುದು
*ಕಣ್ಣು ಮಂಜಾಗುವುದು
*ಅತಿಯಾಗಿ ಬೆವರುವುದು
*ತಲೆನೋವು

ಕಾರಣಗಳು:
*ಮೆದುಳಿಗೆ ಹಾನಿಯಾಗುವುದರಿಂದ ಉಂಟಾಗುತ್ತದೆ
*ಸ್ಟ್ರೋಕ್ ಮತ್ತು ಮೆದುಳಿನಲ್ಲಿ ಗಡ್ಡೆ
*ತಲೆಗೆ ಗಾಯ ಅಥವಾ ತೀವ್ರ ಅಪಘಾತ
*ಬಾಲ್ಯದಲ್ಲಿ ದೀರ್ಘಕಾಲದ ಜ್ವರ ಇರುವುದಿಂದ
*ಆನುವಂಶಿಕವಾಗಿ ರೋಗ ಬರಬಹುದು
*ಪಾರ್ಶ್ವವಾಯು ಸಮಸ್ಯೆಯಿಂದ

ಅಪಸ್ಮಾರದಲ್ಲಿ ಒಂದಕ್ಕಿಂತ ಹೆಚ್ಚು ರೋಗಗ್ರಸ್ತವಾಗುವಿಕೆಗಳಿವೆ. ಕೆಲವು ನಿರುಪದ್ರವವಾಗಿದ್ದರೆ ಇನ್ನು ಕೆಲವು ಜೀವಕ್ಕೇ ಅಪಾಯವನ್ನುಂಟು ಮಾಡಬಹುದು. ಮೆದುಳಿನ ದುರ್ಬಲತೆಯಿಂದ ದೇಹದ ಇತರ ಭಾಗಗಳಿಗೂ ಪರಿಣಾಮ ಬೀರಬಹುದು. ಕೆಲವೊಮ್ಮೆ ರೋಗದ ಲಕ್ಷಣದಿಂದ ತುಂಬಾ ಸುಸ್ತಾಗುತ್ತದೆ. ಕೆಲವರು ನಾಲಿಗೆ ಕಚ್ಚಿಕೊಂಡು ಗಾಯ ಮಾಡಿಕೊಳ್ಳುತ್ತಾರೆ. ರೋಗ ಲಕ್ಷಣಗಳಿಗೆ ಕಾರಣವಾಗುವ ಈ ಕೆಲವು ಅಂಶಗಳು ನೆನಪಿನಲ್ಲಿರಲಿ;

*ನಿದ್ರೆಯ ಕೊರತೆ
*ದೈಹಿಕ ಆಯಾಸ ಅಥವಾ ಅತಿಯಾದ ಶ್ರಮ
*ಆಲ್ಕೋಹಾಲ್ ಸೇವನೆ ಅಥವಾ ಇತರ ಮಾದಕ ವಸ್ತುಗಳ ಬಳಕೆ

ಈ ಸಮಸ್ಯೆಯನ್ನು ಎದುರಿಸುವುದು ಹೇಗೆ?
*ಗಾಬರಿಯಾಗಬೇಡಿ
*ಬಿಗಿಯಾದ ವಸ್ತ್ರ ಮತ್ತು ಕುತ್ತಿಗೆಗೆ ಅಂಟಿಕೊಂಡಿರುವ ಬಟ್ಟೆಯನ್ನು ಆದಷ್ಟು ತಪ್ಪಿಸಿ
*ರೋಗಿಗೆ ವಿಶ್ರಾಂತಿ ಮತ್ತು ಮಲಗಲು ಅವಕಅಶ ಮಾಡಿಕೊಡಿ
*ಅವರ ತಲೆಯ ಕೆಳಗೆ ಮೃದುವಾದ ದಿಂಬನ್ನು ಇರಿಸಿ
*ವ್ಯಕ್ತಿ ಹತ್ತಿರದಲ್ಲಿ ಚೂಪಾದ ಅಥವಾ ಹಾನಿಕಾರಕ ವಸ್ತುಗಳಿದ್ದರೆ ಅದನ್ನು ಬದಿಗಿಡಿ

ರೋಗಿಗಳಿಗೆ ಸಲಹೆಗಳು
*ವೈದ್ಯರು ಸೂಚಿಸಿರುವ ಔಷಧವನ್ನೂ ಚಾಚೂ ತಪ್ಪದೇ ಪಾಲಿಸಿ
*ವೈದ್ಯರು ಹೇಳಿರುವ ಚಿಕಿತ್ಸೆಯನ್ನು ಎಂದಿಗೂ ನಿಲ್ಲಿಸಬೇಡಿ
*ಬೇರೆ ಯಾವುದಾದರೂ ಔಷಧಗಳನ್ನು ತೆಗೆದುಕೊಳ್ಳುವಾಗ ವೈದ್ಯರ ಸಲಹೆ ಪಡೆಯಿರಿ
*ಆಲ್ಕೋಹಾಲ್ ಸೆವನೆಯನ್ನು ತಪ್ಪಿಸಿ

ಇದನ್ನೂ ಓದಿ:

Health Care: ನಿಮ್ಮ ಆರೋಗ್ಯ ಸುಧಾರಣೆಗೆ ಈ ಆಹಾರ ಪದಾರ್ಥಗಳನ್ನು ಸೇವಿಸಿ

Women Health: ಮುಟ್ಟಿನ ಸಮಯದಲ್ಲಿ ಮಹಿಳೆಯರು ರನ್ನಿಂಗ್​ ಮಾಡಬಹುದೇ? ಆರೋಗ್ಯದಲ್ಲಿನ ಬದಲಾವಣೆ ಬಗ್ಗೆ ತಿಳಿಯಿರಿ

Published On - 12:16 pm, Wed, 17 November 21