National Pizza Day 2023: ಸುಲಭವಾಗಿ ಓವನ್​​ ಇಲ್ಲದೆ ಪಿಜ್ಜಾ ತಯಾರಿಸಿ, ರೆಸಿಪಿ ಇಲ್ಲಿದೆ

|

Updated on: Feb 09, 2023 | 2:24 PM

ಆರೋಗ್ಯ ದೃಷ್ಟಿಯಿಂದ ನೀವು ಮನೆಯಲ್ಲಿಯೇ ಪಿಜ್ಜಾ ತಯಾರಿಸಿ ತಿನ್ನುವುದು ಉತ್ತಮ. ನಿಮ್ಮ ಮನೆಯಲ್ಲಿ ಓವನ್​​ ಇಲ್ಲ ಎಂದು ಚಿಂತಿಸದಿರಿ, ಬದಲಾಗಿ ನೀವು ಸುಲಭವಾಗಿ ಓವನ್​​ ಇಲ್ಲದೇ ಪಿಜ್ಜಾ ತಯಾರಿಸಬಹುದಾಗಿದೆ.

National Pizza Day 2023: ಸುಲಭವಾಗಿ ಓವನ್​​ ಇಲ್ಲದೆ ಪಿಜ್ಜಾ ತಯಾರಿಸಿ, ರೆಸಿಪಿ ಇಲ್ಲಿದೆ
ಓವನ್​​ ಇಲ್ಲದೆ ಪಿಜ್ಜಾ ಮಾಡುವ ವಿಧಾನ
Follow us on

ಫೆಬ್ರವರಿ 9 ರಂದು, ರಾಷ್ಟ್ರೀಯ ಪಿಜ್ಜಾ ದಿನ(National Pizza Day) ವನ್ನು ಆಚರಿಸಲಾಗುತ್ತದೆ. ಈ ದಿನ ನಿಮ್ಮ ನೆಚ್ಚಿನ ಪಿಜ್ಜಾ ಸವಿಯುವುದರ ಮೂಲಕ ವಿಶೇಷವಾಗಿ ಆಚರಿಸಬಹುದಾಗಿದೆ. ಆದರೆ ಆರೋಗ್ಯ ದೃಷ್ಟಿಯಿಂದ ನೀವು ಮನೆಯಲ್ಲಿಯೇ ಪಿಜ್ಜಾ ತಯಾರಿಸಿ ತಿನ್ನುವುದು ಉತ್ತಮ. ನಿಮ್ಮ ಮನೆಯಲ್ಲಿ ಓವನ್​​ ಇಲ್ಲ ಎಂದು ಚಿಂತಿಸದಿರಿ, ಬದಲಾಗಿ ನೀವು ಸುಲಭವಾಗಿ ಓವನ್​​ ಇಲ್ಲದೇ ಪಿಜ್ಜಾ ತಯಾರಿಸಬಹುದಾಗಿದೆ. ಸೌಮ್ಯ ಛಾಯ ಕಿಚನ್​​​ ಯೂಟ್ಯೂಬ್​​ ಚಾನೆಲ್​​​ನಲ್ಲಿ ಓವನ್​​ ಇಲ್ಲದೆ ಪಿಜ್ಜಾ ತಯಾರಿಸುವುದು ಹೇಗೆ ಎಂದು ತಿಳಿಸಲಾಗಿದೆ. ನೀವು ಕೂಡ ನಿಮ್ಮ ಮನೆಯಲ್ಲಿ ಈ ಪಾಕವಿಧಾನ ಪ್ರಯತ್ನಿಸಿ.

ಓವನ್​​ ಇಲ್ಲದೆ ಪಿಜ್ಜಾ ಮಾಡುವ ವಿಧಾನ:

ಮೊದಲಿಗೆ ಪಿಜ್ಜಾ ಸಾಸ್ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ನೀವು ಅಂಗಡಿಗಳಿಂದ ಪಿಜ್ಜಾ ಸಾಸ್ ಖರೀದಿಸುವ ಬದಲಾಗಿ ಮನೆಯಲ್ಲಿಯೇ ತಯಾರಿಸಬಹುದಾಗಿದೆ.

ಪಿಜ್ಜಾ ಸಾಸ್ ​​ ಮಾಡುವ ವಿಧಾನ:

  • ಒಂದು ಪ್ಯಾನ್​ಗೆ ಒಂದು ಚಮಚ ಎಣ್ಣೆ, ಒಂದು ಕೊಚ್ಚಿದ ಇರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಉರಿ ಮಧ್ಯಮ ಉರಿಯಲ್ಲಿರಲಿ. ಈಗ ಇದಕ್ಕೆ ಅರ್ಧ ಟೀ ಚಮಚ ಜೀರಿಗೆ ಜೊತೆಗೆ ಚಿಟಿಕೆ ಉಪ್ಪು ಸೇರಿಸಿ. ಇರುಳ್ಳಿ ಬಣ್ಣ ಸ್ವಲ್ಪ ಬದಲಾದ ನಂತರ 4 ಎಸಳು ಬೆಳ್ಳುಳ್ಳಿ ಹಾಗೂ ಒಂದು ಚಿಕ್ಕ ತುಂಡು ಶುಂಠಿ ಹಾಕಿ. ಇರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಚಿಕ್ಕದಾಗಿ ಕೊಚ್ಚಿದ 2 ಟೊಮಾಟೊ ಹಾಕಿ. ಇದು ಫ್ರೈ ಆಗುತ್ತಿದ್ದಂತೆ 4 ಗೋಡಂಬಿ ಹಾಕಿ, ಸ್ವಲ್ಪ ನೀರು ಹಾಕಿ 2 ನಿಮಿಷಗಳ ವರೆಗೆ ಬೇಯಿಸಿ. ನಂತರ ಇದನ್ನು ಒಲೆಯಿಂದ ಕೆಳಗಿಳಿಸಿ 3ನಿಮಿಷ ತಣ್ಣಗಾಗಲು ಬಿಟ್ಟು, ಮಿಕ್ಸಿ ಜಾರ್​​​ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ.
  • ಈಗ ಒಂದು ಪ್ಯಾನ್​​​ ಸ್ವಲ್ಪ ಎಣ್ಣೆ, ಮೆಣಸಿನ ಪುಡಿ ಹಾಕಿ. ಇದಕ್ಕೆ ಈಗಾಗಲೇ ರುಬ್ಬಿಕೊಂಡ ಮಸಾಲೆ, ಸ್ವಲ್ಪ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಮಚ ಸಕ್ಕರೆ ಹಾಕಿ ತಳ ಹಿಡಿಯದಂತೆ ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ. ಕೊನೆಯದಾಗಿ ಕಸೂರಿ ಮೀಥಿ ಹಾಕಿ. ಈಗ ಗ್ರೇವಿ ಸಿದ್ಧವಾಗಿದೆ. ನೀವು ಪಿಜ್ಜಾ ಸ್ವಾಸ್​ ಮಾರ್ಕೆಟ್​​​ನಿಂದ ಖರೀದಿಸುವ ಬದಲಾಗಿ ಮನೆಯಲ್ಲಿಯೇ ಇ ರೀತಿಯಾಗಿ ತಯಾರಿಸಿ.

ಇದನ್ನೂ ಓದಿ: ಕೇವಲ 10 ನಿಮಿಷಗಳಲ್ಲಿ ಚಾಕೊಲೇಟ್ ತಯಾರಿಸಿ, ರೆಸಿಪಿಗಳು ಇಲ್ಲಿವೆ

ಪಿಜ್ಜಾ ಬೇಸ್ ಮಾಡುವ ವಿಧಾನ:

  • 1 ಕಪ್​​ ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಮತ್ತು 1/4 ಚಮಚ ಬೇಕಿಂಗ್​ ಪೌಡರ್ ಹಾಕಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಹಿಟ್ಟು ತಯಾರಿಸಿ. ಚಪಾತಿ ಹಿಟ್ಟಿನ ರೀತಿಯಲ್ಲಿರಲಿ. ಸ್ವಲ್ಪ ಎಣ್ಣೆ ಹಾಕಿ, ಈಗ ಈ ಹಿಟ್ಟನ್ನು 15 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಹಿಟ್ಟನ್ನು ಸ್ವಲ್ಪ ಗೋಧಿ ಹಿಟ್ಟು ಚಪಾತಿ ಲಟ್ಟಣಿಗೆಯಲ್ಲಿ ಲಟ್ಟಿಸಿ.
  • ನಂತರ ಒಂದು ಪ್ಯಾನ್​​ಗೆ ಸ್ವಲ್ಪ ಎಣ್ಣೆ ಹಾಕಿ, ತವ ಬಿಸಿಯಾಗುತ್ತಿದ್ದಂತೆ ಲಟ್ಟಿಸಿಟ್ಟ ಪಿಜ್ಜಾ ಬೇಸ್ ಹಾಕಿ(ತುಂಬಾ ದಪ್ಪಗಾಗುವುದು ಬೇಡ). ಕಡಿಮೆ ಉರಿಯಲ್ಲಿ ಪಿಜ್ಜಾ ಬೇಸ್ ಬೇಯಲು ಬಿಡಿ. ಎರಡು ಬದಿ ಎಣ್ಣೆ ಹಾಕಿ ಬೇಯಿಸಿ. ಈಗ ಪಿಜ್ಜಾ ಬೇಸ್ ಸಿದ್ಧವಾಗಿದೆ.

ಈಗ ಪ್ಯಾನ್​​ ಮೇಲೆ ಪಿಜ್ಜಾ ಬೇಸ್ ಇಟ್ಟು, ಅದರ ಮೇಲೆ ಪಿಜ್ಜಾ ಸ್ವಾಸ್ ಚೆನ್ನಾಗಿ ಹರಡಿ, ಜೊತೆಗೆ ಟೊಮಾಟೋ ಸ್ವಾಸ್​​ ಕೂಡ ಹಾಕಿ. ನಂತರ ಇದರ ಮೇಲೆ ತುರಿದ ಚೀಸ್​​ ಹಾಕಿ. ನಂತರ ಇದರ ಮೇಲೆ ಸಣ್ಣದಾಗಿ ಕೊಚ್ಚಿದ ಇರುಳ್ಳಿಯನ್ನು ಹಾಕಿ. ನಂತರ ಇದರ ಮೇಲೆ ಉದ್ದವಾಗಿ ಕತ್ತರಿಸಿದ ಟೊಮಾಟೋ, ಕ್ಯಾಪ್ಸಿಕಂ, ಸಿಹಿ ಜೋಳ, ನಂತರ ಇದರ ಮೇಲೆ ಕಸೂರಿ ಮೀಥಿನ ಹರಡಿ. ನಂತರ ರೆಡ್​​ ಚಿಲ್ಲಿ ಫೇಕ್ಸ್​​ ಹರಡಿ. ನಂತರ ಒಂದು ತವಾ ಬಿಸಿ ಮಾಡಿ ಹಾಗೂ ಅದರ ಮೇಲೆ ಪಿಜ್ಜಾದ ಪ್ಯಾನ್​​ನ ಇಡಿ. ನಂತರ ಪ್ಯಾನ್​​​ನ ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಬೇಯಲು ಬಿಡಿ. ಈಗ ಪಿಜ್ಜಾ ಸಿದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 2:24 pm, Thu, 9 February 23