ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಕೂಡ ಸಿಹಿ ತಿಂಡಿಯನ್ನು ಇಷ್ಟ ಪಡುತ್ತಾರೆ. ಈ ಹಬ್ಬಗಳು ಬಂತೆಂದರೆ ಸಾಕು, ಮನೆಯಲ್ಲಿ ವಿವಿಧ ಬಗೆಯ ರುಚಿಕರವಾದ ತಿಂಡಿ ತಿನಿಸುಗಳು ಸವಿಯಲು ಸಿದ್ಧವಾಗುತ್ತದೆ. ಈ ಬಾರಿಯ ನವರಾತ್ರಿಗೆ ದೇವಿಗೆ ನೈವೇದ್ಯವಿಡಲು ವಿಶೇಷವಾದ ತಿನಿಸು ಮಾಡಲು ಹೊರಟಿದ್ದರೆ ಹೆಸರು ಬೇಳೆ ಹಲ್ವಾವನ್ನು ಟ್ರೈ ಮಾಡಬಹುದು. ರಾಜಸ್ಥಾನದ ವಿಶೇಷವಾದ ಸಿಹಿತಿಂಡಿಯಾದ ಇದನ್ನು ತುಪ್ಪ, ಬೆಲ್ಲದಿಂದ ಮಾಡಲಾಗುತ್ತದೆ. ಪ್ರೊಟೀನ್ಯುಕ್ತವಾಗಿರುವ ಈ ಸಿಹಿ ತಿನಿಸು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
* ಒಂದು ಕಪ್ ಹೆಸರು ಬೇಳೆ
* ತುಪ್ಪ
* ರವೆ
* ಬೆಲ್ಲ
* ಏಲಕ್ಕಿ ಪುಡಿ
* ಬಾದಾಮಿ
* ನೀರು
* ಉಪ್ಪು
* ತೆಂಗಿನ ತುರಿ
* ಒಂದು ಪಾತ್ರೆಯಲ್ಲಿ ಹೆಸರು ಬೇಳೆಯನ್ನು ಹಾಕಿ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.
* ನೆನೆದ ಬೇಳೆಯನ್ನು ನೀರಿನಿಂದ ಬೇರ್ಪಡಿಸಿ, ಕುಕ್ಕರ್ ಬೇಳೆ ಹಾಗೂ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
* ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಒಂದೆರಡು ಚಮಚ ರವೆ ಹಾಕಿ ಹುರಿದುಕೊಳ್ಳಿ. ಆ ಬಳಿಕ ರುಬ್ಬಿಟ್ಟ ತೆಂಗಿನ ತುರಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ಆ ಬಳಿಕ ಈಗಾಗಲೇ ಚೆನ್ನಾಗಿ ಬೆಂದಿರುವ ಹೆಸರು ಬೇಳೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
* ತದನಂತರದಲ್ಲಿ ಸಿದ್ಧಪಡಿಸಿಕೊಂಡ ಬೆಲ್ಲದ ಪಾಕವನ್ನು ಸೇರಿಸಿ ಸಾಧಾರಣ ಉರಿಯಲ್ಲಿ ಇದನ್ನು ಬೇಯಿಸಕೊಳ್ಳಿ.
* ಈ ಮಿಶ್ರಣ ಗಂಟು-ಗಂಟಾಗದಂತೆ ನಿರಂತರವಾಗಿ ಕೈ ಆಡಿಸುತ್ತಲೇ ಇರಬೇಕು.
* ಬಣ್ಣ ಬದಲಾಗಿ ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಏಲಕ್ಕಿ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಹೆಸರು ಬೇಳೆ ಹಲ್ವಾ ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ