AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti : ನೀವು ಜೀವನದಲ್ಲಿ ಅಪ್ಪಿ ತಪ್ಪಿಯೂ ಇಂತಹ ಜನರ ಸಹವಾಸ ಮಾಡ್ಬೇಡಿ

ಜೀವನದಲ್ಲಿ ನಾವು ಎಲ್ಲರನ್ನು ಬೇಗನೇ ನಂಬಿ ಬಿಡುತ್ತೇವೆ. ಆದರೆ ನಮ್ಮ ಸುತ್ತಲಿನ ಜನರಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಅರಿತುಕೊಳ್ಳುವಷ್ಟರಲ್ಲಿ ಸಮಯ ಕಳೆದು ಹೋಗಿರುತ್ತದೆ. ಆ ಜನರಿಂದ ಎಷ್ಟೋ ಸಲ ಮೋಸ ಹೋಗಿ ಬಿಡುತ್ತೇವೆ. ಹೀಗಾಗಿ ಆಚಾರ್ಯ ಚಾಣಕ್ಯರು ಈ ಕೆಲವು ಜನರಿಂದ ದೂರವಿರಲು ಸಲಹೆ ನೀಡಿದ್ದಾರೆ. ಇಂತಹ ಜನರು ಶತ್ರುವಿಗಿಂತಲು ಅಪಾಯಕಾರಿ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾದ್ರೆ ಇಂತಹ ಜನರಲ್ಲಿ ಯಾವೆಲ್ಲಾ ಗುಣಗಳಿರುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

Chanakya Niti : ನೀವು ಜೀವನದಲ್ಲಿ ಅಪ್ಪಿ ತಪ್ಪಿಯೂ ಇಂತಹ ಜನರ ಸಹವಾಸ ಮಾಡ್ಬೇಡಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Oct 03, 2024 | 2:09 PM

Share

ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ಸ್ನೇಹವನ್ನು ಬೆಳೆಸಿಕೊಳ್ಳುವಾಗ, ಒಬ್ಬ ವ್ಯಕ್ತಿಯಲ್ಲಿ ಸಹಾಯವನ್ನು ಕೇಳುವಾಗ ಆ ವ್ಯಕ್ತಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯ. ಅದಲ್ಲದೇ, ನಮ್ಮ ಸುತ್ತ ಸದಾ ಶತ್ರುವಿಗಿಂತಲೂ ಅಪಾಯಕಾರಿಯಾದ ವ್ಯಕ್ತಿಗಳು ಇರುತ್ತಾರೆ. ಅಪ್ಪಿತಪ್ಪಿಯೂ ಅಂತಹವರಿಂದ ಸಹಾಯ ಕೇಳಬೇಡಿ. ಸಾಧ್ಯವಾದರೆ ಈ ಗುಣಗಳಿಗಿರುವ ಜನರಿಂದ ಸಂಪೂರ್ಣವಾಗಿ ದೂರವಿದ್ದರೆ ಒಳಿತು ಎನ್ನುತ್ತಾರೆ ಚಾಣಕ್ಯ.

* ನೀಚ ಜನರಿಂದ ದೂರವಿರಿ : ಚಾಣಕ್ಯನು ಹೇಳುವಂತೆ ಜೀವನದಲ್ಲಿ ನೀಚ ಅಥವಾ ಕೆಟ್ಟ ಬುದ್ಧಿಯನ್ನು ಹೊಂದಿದ ವ್ಯಕ್ತಿಯನ್ನು ಎಂದಿಗೂ ನಂಬಬಾರದಂತೆ. ಈ ವ್ಯಕ್ತಿಗಳು ಒಳ್ಳೆಯದನ್ನು ಮಾಡುವ ಬದಲು ನಿಮ್ಮನ್ನು ತೊಂದರೆಗೆ ಸಿಲುಕಿಸುವುದೇ ಹೆಚ್ಚು. ಇಂತಹ ವ್ಯಕ್ತಿಗಳು ತಮ್ಮ ಸ್ವಂತ ಲಾಭಕ್ಕಾಗಿ ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಶತ್ರುಗಳು ಎದುರಿನಿಂದ ಮೋಸ ಮಾಡಿದರೆ ಈ ಜನರು ನಿಮಗೆ ಗೊತ್ತಿಲ್ಲದೇನೇ ಒಳ್ಳೆಯವರಂತೆ ನಟಿಸಿ ಸ್ವಾರ್ಥಕ್ಕಾಗಿ ಬೆನ್ನ ಹಿಂದಿನಿಂದಲೂ ಚೂರಿ ಹಾಕುವ ಗುಣವನ್ನು ಹೊಂದಿರುತ್ತಾರೆ.

* ಕೋಪಿಸಿಕೊಳ್ಳುವ ಜನರಿಂದ ಅಂತರ ಕಾಯ್ದುಕೊಳ್ಳಿ : ಕೋಪ ಗೊಳ್ಳುವವರಿಂದ ಯಾವಾಗಲೂ ದೂರವಿರುವುದು ಉತ್ತಮ. ಸಿಟ್ಟನ್ನು ಹೊರಹಾಕುವ ವ್ಯಕ್ತಿಯು ಯಾವುದೇ ಸಮಯದಲ್ಲಿ ತನಗೆ ಅಥವಾ ಇತರರಿಗೆ ಹಾನಿ ಮಾಡಬಹುದು. ಕೋಪಗೊಂಡ ವ್ಯಕ್ತಿಯು ಸರಿ ಮತ್ತು ತಪ್ಪುಗಳ ಬಗ್ಗೆ ಯೋಚನೆ ಮಾಡುವುದನ್ನು ಮರೆತು ಬಿಡುತ್ತಾನೆ. ಕೋಪದ ಕೈಗೆ ಬುದ್ಧಿಕೊಟ್ಟು ಹಾನಿ ಮಾಡುತ್ತಾರೆ. ಇಂತಹವರ ಸಹವಾಸ ಮಾಡುವುದರಿಂದ ನಿಮಗೂ ಕೂಡ ತೊಂದರೆಯಾಗುವುದು ಖಚಿತ ಎನ್ನುತ್ತಾನೆ ಚಾಣಕ್ಯ.

* ದುರಾಸೆ ಮತ್ತು ಅಸೂಯೆ ಪಡುವ ವ್ಯಕ್ತಿಗಳ ಸಹವಾಸ ಬೇಡ : ಕೆಲವರಿಗೆ ಅತಿಯಾದ ದುರಾಸೆ ಮತ್ತು ಅಸೂಯೆಯಿರುತ್ತದೆ. ಈ ವ್ಯಕ್ತಿಗಳಿಂದ ಯಾವಾಗಲೂ ಅಂತರವನ್ನು ಕಾಯ್ದುಕೊಳ್ಳಬೇಕು. ಅಪ್ಪಿತಪ್ಪಿಯೂ ಅಂಥವರಿಂದ ಸಹಾಯ ಪಡೆಯಬಾರದು. ಹೊಟ್ಟೆಕಿಚ್ಚಿನಿಂದ ಈ ವ್ಯಕ್ತಿಗಳು ಕೆಟ್ಟದನ್ನು ಮಾಡುವುದೇ ಹೆಚ್ಚು. ಈ ಗುಣಸ್ವಭಾವ ಹೊಂದಿರುವ ವ್ಯಕ್ತಿಯೂ ಸರಿ ಮತ್ತು ತಪ್ಪುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ತನ್ನ ಸುತ್ತಮುತ್ತಲಿನವರ ಪ್ರಗತಿಯಲ್ಲಿ ಸಂತೋಷವನ್ನು ಕಾಣುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ