ಸ್ನೇಹಿತರನ್ನು ಮಾಡಡಿಕೊಳ್ಳುವುದು ಸುಲಭ ಆದರೆ ವರ್ಷಗಳಿಂದ ಅವರೊಂದಿಗೆ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಕಷ್ಟ. ವಯಸ್ಸಾದಂತೆ ನಮ್ಮ ಆದ್ಯತೆಗಳು ಬದಲಾಗುತ್ತವೆ. ಜವಬ್ದಾರಿಗಳು ಬೆನ್ನೇರಿದಾಗ, ನಾವು ನಮ್ಮ ಕೆಲಸ ಕಾರ್ಯದಲ್ಲಿಯೇ ನಿರತರಾಗಿ ಹೋಗುತ್ತೇವೆ. ನಮ್ಮ ಮನಸ್ಸು ಸ್ನೇಹಿತರನ್ನು ಸಂಪರ್ಕಿಸಲು ಹಂಬಲಿಸಿದರೂ, ಅನೇಕ ಬಾರಿ ಅದು ಸಾಧ್ಯವಾಗುವುದಿಲ್ಲ. ಅದರ ಹೊರತಾಗಿಯೂ ಸ್ನೇಹಿತರಿಲ್ಲದೆ ಜೀವನವು ಕಷ್ಟಕರವಾಗಿರುತ್ತದೆ. ಸ್ನೇಹಿತರು ಬೇಕು ನಿಜ, ಆದರೆ ಸ್ನೇಹಿತರನ್ನು ಆಯ್ಕೆ ಮಾಡುವಾಗ ಎಚ್ಚರದಿಂದಿರಬೇಕು ನಮ್ಮಲ್ಲಿ ಅನೇಕರು ತಮ್ಮ ಜೀವನದಲ್ಲಿ ಸ್ನೇಹ ಮಾಡುವಾಗ ತಪ್ಪು ಆಯ್ಕೆಯನ್ನು ಮಾಡಿರುತ್ತಾರೆ. ನಂತರದಲ್ಲಿ ಇದಕ್ಕಾಗಿ ಅನೇಕರು ಪಶ್ಚಾತಾಪ ಕೂಡಾ ಪಟ್ಟಿರುತ್ತಾರೆ. ಇಂತಹ ಸ್ನೇಹ ನಮಗೆ ಹೆಚ್ಚು ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ಆ ಸ್ನೇಹದಿಂದ ದೂರವಿದ್ದು, ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ನಿಮಗೆ ಬೆನ್ನೆಲುಬಾಗಿ ನಿಲ್ಲುವ ಒಬ್ಬ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು.
ಥೆರಪಿಸ್ಟ್ ನೆದ್ರಾ ಗ್ಲೋವರ್ ತವ್ವಾಬ್ ಅವರು ಈ ಕೆಲವು ಗುಣಗಳಿರುವ ಸ್ನೇಹಿತರ ಸ್ನೇಹ ಉತ್ತಮ ಎಂದು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ನಿರಂತರ ಸಂಪರ್ಕದ ಅಗತ್ಯವಿಲ್ಲದವರು: ನಿರಂತರ ಸಂಪರ್ಕದ ಅಗತ್ಯವಿಲ್ಲದ ಸ್ನೇಹಿತರ ಹತ್ತಿರ ಇರಿ. ಅಂತಹವರು ನಿಮ್ಮ ಭಾವನೆಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳುತ್ತಾರೆ. ಅವರಿಗೆ ಒತ್ತಡದ ಕೆಲಸ ಕಾರ್ಯಗಳ ಬಗ್ಗೆ ಅರಿವಿರುತ್ತದೆ, ಇದರಿಂದ ಅವರು ನಿಕಟವಾಗಿ ಸಂಪರ್ಕದಲ್ಲಿ ಇಲ್ಲ ಎಂದು ನಿಮ್ಮ ಸ್ನೇಹವನ್ನು ಯಾವತ್ತು ದೂರ ಮಾಡುವುದಿಲ್ಲ ಅಥವಾ ನಿಮ್ಮ ಮೇಲೆ ಮುನಿಸಿಕೊಳ್ಳುವುದಿಲ್ಲ.
ನಿಮ್ಮನ್ನು ನೀವು ಬದಲಾಯಿಸಲು ಒತ್ತಾಯಿಸದ ಸ್ನೇಹಿತ: ನೀವು ಯಾರೆಂದು ಒಪ್ಪಿಕೊಳ್ಳುವ ಮತ್ತು ನೀವು ನೀವಾಗಿರಲು ಅನುಮತಿಸುವ ಸ್ನೇಹಿತರೊಂದಿಗೆ ನಿಕಟ ಸಂಪರ್ಕದಲ್ಲಿರಿ. ಏಕೆಂದರೆ ಅವರು ನಿಮ್ಮನ್ನು ಅವರಿಗೆ ಸರಿಹೊಂದುವಂತೆ ಬದಲಾಯಿಸಲು ಎಂದಿಗೂ ಪ್ರಯತ್ನಿಸುವುದಿಲ್ಲ. ನಿಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಿಮ್ಮೊಂದಿಗೆ ಒಟ್ಟಿಗೆ ಇರುವುದು ಉತ್ತಮ ಸ್ನೇಹದ ಸಂಕೇತವಾಗಿದೆ.
ಇದನ್ನೂ ಓದಿ:Trust: ಸ್ನೇಹವಾಗಿರಲಿ ಅಥವಾ ಪ್ರೀತಿಯಾಗಿರಲಿ ಯಾರನ್ನಾದರೂ ನಂಬುವ ಮುನ್ನ ಈ 5 ವಿಷಯಗಳು ನಿಮಗೆ ನೆನಪಿರಲಿ
ನಿಮ್ಮನ್ನು ಬೆಂಬಲಿಸುವ ಸ್ನೇಹಿತರು: ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ನಿಮಗೆ ಬೆಂಬಲವನ್ನು ಸೂಚಿಸುವ ಸ್ನೇಹಿತರ ಜೊತೆ ಇರಿ. ಅವರು ನೀವು ಕಷ್ಟದಲ್ಲಿರುವಾಗ ನಿಮಗೆ ಬೆನ್ನೆಲುಬಾಗಿ ಹಾಗೂ ನಿಮ್ಮ ಪ್ರತಿಯೊಂದು ಕಾರ್ಯಗಳಿಗೂ ಪ್ರೋತ್ಸಾಹವನ್ನು ನೀಡುತ್ತಾರೆ. ಇಂತಹ ಸ್ನೇಹಿತರ ಜೊತೆಗೆ ನೀವು ಸಂತೋಷವಾಗಿರಬಹುದು.
ನಿಮಗೆ ಒಳ್ಳೆಯದನ್ನು ಬಯಸುವವರು: ನಿಮ್ಮ ಯಶಸ್ಸಿನ ಬಗ್ಗೆ ಯಾವುಧೆ ಅಸೂಯೆಯನ್ನು ಪಡದೆ, ನಿಮಗೆ ಯಾವಾಗಲೂ ಒಳ್ಳೆಯದನ್ನೇ ಬಯಸುವ ಸ್ನೇಹಿತರೊಂದಿಗೆ ಸ್ನೇಹ ಮಾಡಿಕೊಳ್ಳಿ. ನಿಮಗೆ ಒಳ್ಳೆಯದನ್ನು ಬಯಸುವ ಜನರೊಂದಿಗೆ ಇರುವುದು ನಿಮ್ಮ ಜೀವನವನ್ನು ಉತ್ತಮವಾಗಿ ಬದಲಾಯಿಸಬಹುದು.
ಆರೋಗ್ಯಕರ ಗಡಿಗಳನ್ನು ಪ್ರೋತ್ಸಾಹಿಸುವ ಸ್ನೇಹಿತರು: ಆರೋಗ್ಯಕರ ಗಡಿಗಳನ್ನು ಹೊಂದಿರುವ ಸ್ನೇಹಿತರ ಹತ್ತಿರ ಇರಿ. ಆರೋಗ್ಯಕರ ಗಡಿಗಳು ಸ್ನೇಹದಲ್ಲಿ ಇರಬೇಕಾಗುತ್ತದೆ. ಇದು ನೀವು ನೀವಾಗಿರಲು ಅವಕಾಶ ಮಾಡಿ ಕೊಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: