ನೀವು ಸೆಲ್ಫ್ ಪ್ಯಾಂಪರಿಂಗ್ ಸೆನ್‌ನಲ್ಲಿ ತೊಡಗುವುದರಿಂದ ಹಿಡಿದು ದೂರದಲ್ಲಿರುವ ನಿಮ್ಮ ಪ್ರೀತಿ ಪಾತ್ರರೊಂದಿಗೆ ವರ್ಚುವಲ್ ದಿನಾಂಕವನ್ನು ಪಾರ್ಟಿ ಅಥವಾ ಡೇಟ್‌ನ್ನು ಯೋಜಿಸುವವರೆಗೆ, ನೀವು ಹೊಸ ವರ್ಷದ ಮುನ್ನಾದಿನವನ್ನು ವಿಶೇಷವಾಗಿಸಲು ಸಾಕಷ್ಟು ಮಾರ್ಗಗಳಿವೆ. ಹೊಸ ವರ್ಷದ ಮುನ್ನಾದಿನ ಬಂದು ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭಗೊಳ್ಳಲಿದೆ. ಕೆಲವರು ಈ ತಯಾರಿಯಲ್ಲಿ ನಿರತರಾಗಿದ್ದಾರೆ, ಇನ್ನೂ ಕೆಲವರು ಯಾವುದೇ ಪ್ಲಾನ್ಸ್ ಮಾಡಿರುವುದಿಲ್ಲ. ನೀವು ಈ ಎರಡನೆಯ ಗುಂಪಿಗೆ ಸೇರಿದವರಾಗಿದ್ದರೆ, ನಿಮಗೆ ಹೊಸ ವರ್ಷದ ಮುನ್ನಾದಿನವನ್ನು ಮನೆಯಲ್ಲಿಯೇ ಆಚರಿಸಲು ಕೆಲವೊಂದು ಆಸಕ್ತಿದಾಯಕ ಐಡಿಯಾಗಳು ಇಲ್ಲಿವೆ.
ಸೆಲ್ಫ್ ಪ್ಯಾಂಪರಿಂಗ್ ಸೆಷನ್‌ನಲ್ಲಿ ತೊಡಗಿಕೊಳ್ಳುವುದರಿಂದ ಹಿಡಿದು ನಿಮ್ಮ ಪ್ರೀತಿ ಪಾತ್ರರೊಂದಿಗೆ ವರ್ಚುವಲ್ ಪಾರ್ಟಿಯನ್ನು ಯೋಜಿಸುವವರೆಗೆ, ನೀವು ಹೊಸ ವರ್ಷದ ಮುನ್ನಾದಿನವನ್ನು ವಿಶೇಷವಾಗಿಸಲು ಸಾಕಷ್ಟು ಮಾರ್ಗಗಳಿವೆ. ನೀವು ವಿಶೇಷವಾಗಿ ಆಗಿ 2023ರ ವರ್ಷವನ್ನು ಬರ ಮಾಡಿಕೊಳ್ಳಬೇಕು ಎಂದು ಬಯಸಿದರೆ ಈ 7 ಅಂಶಗಳನ್ನು ಮಾಡಿ.
ಅವ್ಯವಸ್ತಗೊಂಡ ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸುವ ಮೂಲಕ ಹೊಸವರ್ಷವನ್ನು ಸ್ವಾಗತಿಸಿ. ಅನಗತ್ಯವಾಗಿ ಜಾಗ ಆಕ್ರಮಿಸಿಕೊಳ್ಳುವ ವಸ್ತುಗಳು ಹಾಗೂ ನಿಮ್ಮ ವಾಡ್ರೋಬ್‌ನಲ್ಲಿ ಇರುವ ಅನಗತ್ಯ ವಸ್ತುಗಳನ್ನು ಹೊರ ಹಾಕುವ ಮೂಲಕ ಕೋಣೆಯನ್ನು ಡೀಪ್ ಕ್ಲೀನಿಂಗ್ ಮಾಡಿ. ಸುಂದರವಾದ ಒಳಾಂಗಣ ಸಸ್ಯ, ಡೆಕೋರ್ ಪೀಸ್‌ಗಳು, ಸುಂದರವಾದ ರಗ್, ಕನ್ನಡಿ, ಲ್ಯಾಂಪ್ ಶೇಡ್ ಅಥವಾ ಕೋಣೆಯನ್ನು ಸುಂದರವಾಗಿ ಕಾಣುವಂತೆ ಮಾಡುವ ಕೆಲವೊಂದು ವಸ್ತುಗಳನ್ನು ಜೋಡಿಸುವ ಮೂಲಕ ಕೋಣೆಯನ್ನು ಯೂನಿಕ್ ಆಗಿ ಸೆಟ್‌ಅಪ್ ಮಾಡಿಕೊಳ್ಳಬಹುದು. ಮತ್ತು ರೂಮ್ ಕ್ಲೀನ್ ಮಾಡುವುದು ಒಂದು ರೀತಿಯ ಥೆರಫಿ ಆಗಿದೆ.
ಒಂದು ಕಪ್ ಹಾಟ್ ಚಾಕೊಲೇಟ್ ಸವಿಯುತ್ತಲೋ ಅಥವಾ ನಿಮ್ಮ ನೆಚ್ಚಿನ ತಿನಿಸನ್ನು ತಿನ್ನುತ್ತಾ ಬೆಚ್ಚಗಿನ ಕಂಬಳಿಯನ್ನು ಮೈಗೆ ಹಾಸುತ್ತಾ ನಿಮ್ಮ ನೆಚ್ಚಿನ ಪುಸ್ತಕವನ್ನು ಓದುತ್ತಾ ಮಧ್ಯರಾತ್ರಿ ಹೊಸ ವರ್ಷವನ್ನು ಸ್ವಾಗತಿಸಬಹುದು. ಹೆಚ್ಚಿನ ಪುಸ್ತಕಗಳನ್ನು ಓದುವುದು ನಿಮ್ಮ ಹೊಸ ವರ್ಷದ ಸಂಕಲ್ಪಗಳಲ್ಲಿ ಒಂದಾಗಿದ್ದರೆ, 2023ನ್ನು ಸ್ವಾಗತಿಸಲು ಪುಸ್ತಕವನ್ನು ಓದುವುದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ.
ನಿಮ್ಮನ್ನು ಕಾರ್ಯನಿರತವಾಗಿಟ್ಟುಕೊಳ್ಳಲು ಮತ್ತು ಹೊಸ ವರ್ಷವನ್ನು ಆಚರಿಸಲು ಮತ್ತೊಂದು ಮಾರ್ಗವೆಂದರೆ ಆರೋಗ್ಯಕರ ಊಟವನ್ನು ಮನೆಯಲ್ಲಿಯೆ ತಯಾರಿಸಿಕೊಂಡು ತಿನ್ನುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳುವುದು.
ಇದನ್ನು ಓದಿ:ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರನ್ನು ಇಂಪ್ರೆಸ್ ಮಾಡಲು ಬಾದಾಮ್ ಹಲ್ವಾ ಮಾಡಿಕೊಡಿ – New Year 2022
ನಿಮ್ಮ ಬ್ಯುಸಿ ಲೈಫ್‌ಸ್ಟೆಲ್‌ನಲ್ಲಿ ನಿಮ್ಮ ನೆಚ್ಚಿನ ಯಾರಿಗಾದರೂ ಕರೆ ಮಾಡಿ ಮಾತನಾಡಲು ಕಷ್ಟ ಸಾಧ್ಯವಾಗಿರುತ್ತದೆ. ಈ ಸಂದಂರ್ಭದಲ್ಲಿ ನಿಮ್ಮ ಸ್ನೇಹಿತರಿಗೋ ಅಥವಾ ನಿಮ್ಮ ನೆಚ್ಚಿನ ವ್ಯಕ್ತಿಗಳಿಗೆ ಕರೆ ಮಾಡಿ ಮಾತನಾಡುವ ಮೂಲಕ ಸಮಯ ಕಳೆಯಬಹುದು.
ಚಲನಚಿತ್ರ ಅಥವಾ ಸಿಟ್ಕಾಮ್‌ಗಳನ್ನು ವೀಕ್ಷಿಸುವ ಮೂಲಕ ಹೊಸ ವರ್ಷದ ಮುನ್ನಾದಿನವನ್ನು ಆಚರಿಸಬಹುದು.
ನಿಮಗೆ ಪಾರ್ಟಿ, ಡಿಜೆ ಇಷ್ಟವಿಲ್ಲದಿದ್ದರೆ, ಶಾಂತತೆಯನ್ನು ಬಯಸುವವರಾಗಿದ್ದರೆ, ನೀವು ಒಬ್ಬರೆ ಮೆಲೋಡಿ ಹಾಡುಗಳನ್ನು ಕೇಳುತ್ತಾ ಕಾರ್‌ನಲ್ಲಿ ಲಾಂಗ್ ಡ್ರೆವ್ ಹೋಗಬಹುದು. ಇದು ನಿಮ್ಮ ಮನಸ್ಸನ್ನು ಕೂಡಾ ರಿಲ್ಯಾಕ್ಸ್ ಮಾಡುತ್ತದೆ.
ಈ ಹೊಸ ವರ್ಷದ ಮುನ್ನಾದಿನದಂದು ನೀವು ನಿಮ್ಮ ಪ್ರೀತಿ ಪಾತ್ರರಿಂದ ದೂರವಿದ್ದರೆ, ಇಂಟರ್‌ನೆಟ್ ಮೂಲಕ ವರ್ಚುವಲ್ ಪಾರ್ಟಿಯನ್ನು ಪ್ಲಾನ್ ಮಾಡಿ. ಚೆನ್ನಾಗಿರುವ ಬಟ್ಟೆಯನ್ನು ಹಾಕಿ, ಫುಡ್ ಮತ್ತು ಕಾಕ್ಟೆಲ್‌ನ್ನು ಸವಿಯುತ್ತಾ ವರ್ಚುವಲ್ ಆಗಿ ನಿಮ್ಮ ಸ್ನೇಹಿತರೊಂದಿಗೆ ದೂರದಿಂದಲೇ ಸಮಯವನ್ನು ಕಳೆಯಬಹುದು.
ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:40 pm, Sat, 31 December 22