Daily Horoscope 24 July: ಈ ರಾಶಿಯವರ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಲಿದೆ, ಹಣಕಾಸಿನ ವಿಚಾರದಲ್ಲಿ ಬೇಜವಾಬ್ದಾರಿ ಬೇಡ
ಇಂದಿನ (2023 ಜುಲೈ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಶಿವ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:51 ರಿಂದ 09:27 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ.
ಮೇಷ: ಉಪಾಯದಿಂದ ನಿಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವಿರಿ. ಕೃಷಿಯಲ್ಲಿ ಆಸಕ್ತಿಯು ನಿಮಗೆ ಹೆಚ್ಚಾಗಲಿದೆ. ಇನ್ನೊಬ್ಬರ ಬಗ್ಗೆ ಸದ್ಭಾವನೆ ಇರಲಿ. ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯಲ್ಲಿ ನೀವು ಇರುವಿರಿ. ನಿಮ್ಮ ಸಾಮರ್ಥ್ಯದ ಪರೀಕ್ಷೆಯು ಇಂದು ಆಗಬಹುದು. ಇಷ್ಟವಾದುದನ್ನು ಬಿಟ್ಟುಕೊಡಬೇಕಾದೀತು. ಎಲ್ಲದಕ್ಕೂ ಇನ್ನೊಬ್ಬರನ್ನು ದೂರುವಿರಿ. ಖರ್ಚಿನ ಮೇಲೆ ಹಿಡಿತವಿರಲಿ. ವ್ಯಕ್ತಿತ್ವವನ್ನು ನೀವು ಸುಧಾರಿಸಿಕೊಳ್ಳುವತ್ತ ಗಮನ ಇರಲಿ. ನಿಮ್ಮ ಬಗ್ಗೆ ಆಡಿಕೊಳ್ಳುವವರಿಗೆ ಉತ್ತರಿಸಲು ಹೋಗುವುದು ಬೇಡ. ಸರ್ಕಾರಿ ಕೆಲಸದ ವೇಗವನ್ನು ನೀವು ಹೆಚ್ಚಿಸಿ ಆಗಬೇಕಾದುದನ್ನು ಮಾಡಿಸಿಕೊಳ್ಳುವಿರಿ.
ವೃಷಭ: ಕರ್ತವ್ಯದಲ್ಲಿ ನಿರಾಸಕ್ತಿ ಬರಬಹುದು. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರಲು ಬಯಸುವಿರಿ. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ಹೆಚ್ಚಾಗಲಿದೆ. ಪ್ರವಾಸವನ್ನು ಹೆಚ್ಚು ಮಾಡುವ ಆಸಕ್ತಿಯನ್ನು ಹೊಂದಿರುವಿರಿ. ನಿಮ್ಮ ವರ್ತನೆಯು ಅಹಂಕಾರದಂತೆ ತೋರಲಿದೆ. ಹಣವನ್ನು ಬಹಳ ಜೋಪಾನವಾಗಿ ಇಟ್ಟುಕೊಳ್ಳಿ. ಇಷ್ಟ ಮಿತ್ರರ ಸಹವಾಸವು ಸಿಗಬಹುದು. ಕಳೆದ ಸಂದರ್ಭಗಳನ್ನು ಬಹಳ ಇಷ್ಟಪಡುವಿರಿ. ಭವಿಷ್ಯದ ಬಗ್ಗೆ ಚಿಂತೆ ಆರಂಭವಾಗಲಿದೆ. ಹಿರಿಯರಿಂದ ಸಮಾಧಾನವೂ ಸಿಗಬಹುದು.
ಮಿಥುನ: ಹಣಕಾಸಿನ ವಿಚಾರಕ್ಕೆ ದಾಂಪತ್ಯದಲ್ಲಿ ಕಲಹವುಂಟಾಗಿ ಕೊನೆಗೆ ಮೌನದಲ್ಲಿ ಮುಕ್ತಾಯವಾಗಬಹುದು. ಕುಟುಂದ ಜೊತೆ ಸಮಯವನ್ನು ಕೊಡುವುದು ಇಂದು ಕಷ್ಟವಾದೀತು. ನಿಮ್ಮ ಸಿಟ್ಟನ್ನು ಎಲ್ಲ ಕಡೆಗಳಲ್ಲಿ ತೋರಿಸುವುದು ಬೇಡ. ಸುಮ್ಮನೇ ವ್ಯರ್ಥವಾದೀತು. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳುವುದು ಉತ್ತಮ. ನಿಮ್ಮವರ ಪ್ರೀತಿಯನ್ನು ನೀವು ಗಳಿಸುವಿರಿ. ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ನಿಮಗೆ ಇಷ್ಟವಾಗದು. ಆಸ್ತಿ ಖರೀದಿಯ ಬಗ್ಗೆ ನಿಮಗೆ ಸ್ಪಷ್ಟತೆ ಸಾಕಾಗದು. ಮಾಧ್ಯಮದಲ್ಲಿ ಇರುವವರು ಹೆಚ್ಚು ಪ್ರಚಾರವನ್ನು ಪಡೆಯುವರು. ಕಲಾವಿದರಿಗೆ ಕೆಲವು ಒಳ್ಳೆಯವ ಅವಕಾಶಗಳು ಸಿಗಲಿವೆ.
ಕಟಕ: ಮೋಸ ಹೋಗುವ ಸಾಧ್ಯತೆ ಇದೆ. ಮನೋಬಲವನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ತಿಳಿಯುವುದು ಒಳ್ಳೆಯದು. ಸುಮ್ಮನೇ ಮಾತನಾಡುವುದು ವ್ಯರ್ಥ ಎಂದು ನಿಮಗೆ ಅನ್ನಿಸಬಹುದು. ಯಾರ ಮೇಲೋ ನಿಮ್ಮ ಅನುಮಾನ ಬರಬಹುದು. ನಿಮ್ಮ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ಸಂಗಾತಿಯಿಂದ ಮಾನಸಿಕ ಕಿರಿಕಿರಿಯಾಗಲಿದೆ. ಪ್ರತಿಭೆಗೆ ಅವಕಾಶಗಳು ಕಡಿಮೆ ಸಿಗಬಹುದು. ವೃತ್ತಿಯಲ್ಲಿ ನೀವು ಸ್ವಸ್ಥಾನವನ್ನು ಭದ್ರವಾಗಿರಿಸಿಕೊಳ್ಳಲು ಪ್ರಯತ್ನಿಸಿ. ಇನ್ನೊಬ್ಬರನ್ನು ನೋಡಿ ಖುಷಿಯಿಂದ ಇರುವುದನ್ನು ಕಲಿಯುವ ಅವಶ್ಯಕತೆ ಇದೆ.
ಸಿಂಹ: ನಿಮಗೆ ಮನೆಯ ಹೊರೆ ಬರುವ ಸಾಧ್ಯತೆ ಇದೆ. ಮನೆಯ ಕೆಲಸವನ್ನು ಶಿಸ್ತಿನಿಂದ ಮಾಡುವಿರಿ. ಕಛೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಖುಷಿ ಪಡಲಿದ್ದಾರೆ. ವಾಹನದ ವಿಚಾರದಲ್ಲಿ ನಿಮಗೆ ಎಚ್ಚರ ವಹಿಸುವುದು ಉತ್ತಮ. ಕನಸಿನಿಂದ ನೀವು ಬಹಳ ಬಳಲುವಿರಿ. ಎಲ್ಲ ವಿಚಾರವನ್ನೂ ನೀವು ತಿಳಿಯಬೇಕು ಎನ್ನುವ ಆಸಕ್ತಿ ಇರಲಿದೆ. ವಿದ್ಯಾಭ್ಯಾಸಕ್ಕೆ ನಿಮಗೆ ಸಮಯದ ಅಭಾವವು ಕಾಣಲಿದ್ದು ಭವಿಷ್ಯವನ್ನು ಕಂಡು ನಿಮಗೆ ಚಿಂತೆಯಾಗುವುದು. ತಾಯಿಯ ಸೇವೆಯನ್ನು ನೀವು ಮಾಡುವಿರಿ. ಸ್ವಲ್ಪ ಅನಾರೋಗ್ಯವು ನಿಮ್ಮನ್ನು ಬಾಧಿಸೀತು. ದುರಭ್ಯಾಸದತ್ತ ಮನವು ಒಲಿಯಬಹುದು. ಎಚ್ಚರವಿರಲಿ.
ಕನ್ಯಾ: ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡುವಿರಿ. ಮನೆಯಲ್ಲಿ ನಿಮ್ಮ ಕೆಲಸಗಳಿಗೆ ವಿರೋಧ ಬರಬಹುದು. ಮನೆಯವರ ಆರೋಗ್ಯವನ್ನೂ ನೋಡುಕೊಳ್ಳುವ ಜವಾಬ್ದಾರಿ ಇರಲಿದೆ. ಅಪಮಾನವನ್ನು ಧೈರ್ಯದಿಂದ ಎದುರಿಸಲು ಮುಂದಾಗಿ. ತಿಳಿವಳಿಕೆಯ ವಿಚಾರದಲ್ಲಿ ನಿಮಗೆ ಮುಜುಗರ ಆಗಬಹುದು. ನಿಮ್ಮ ವೃತ್ತಿಯನ್ನು ಪ್ರೀತಿಸಿ. ಅದು ನಿಮಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಡುವುದು. ಸಿಕ್ಕ ಅವಕಾಶಗಳನ್ನು ಬಿಟ್ಟುಕೊಡುವ ಮೊದಲು ಯೋಚಿಸಿ. ಸಾಧ್ಯವಾದಷ್ಟು ಇಂದು ನಿಮ್ಮ ಸಮಯವು ವ್ಯರ್ಥವಾಗದಂತೆ ನೋಡಿಕೊಳ್ಳಿ.
ತುಲಾ: ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಏಕಾಂತವು ನಿಮಗೆ ಇಂದು ಬಹಳ ಪ್ರಿಯವಾಗುವುದು. ಆರ್ಥಿಕ ಅಭಿವೃದ್ಧಿಯಿಂದ ನಿಮಗೆ ಸಂತೋಷವಾಗುವುದು. ದಾಂಪತ್ಯ ಜೀವನವನ್ನು ಆನಂದಿಸುವಿರಿ. ಸ್ನೇಹಿತ ಜೊತೆ ಆಪ್ತವಾಗಿ ಕಾಲವನ್ನು ಕಳೆಯಲಿದಗದೀರಿ. ಗೌರವಕ್ಕೆ ಚ್ಯುತಿ ಬರುವ ಕೆಲಸಗಳತ್ತ ನಿಮ್ಮ ಗಮನ ಕಡಿಮೆ ಇರಲಿ. ಖರ್ಚುಗಳಿಗೆ ನಿರ್ದಿಷ್ಟತೆ ಇರಲಿ. ಚಂಚಲವಾದ ಮನಸ್ಸಿನಿಂದ ಏನನ್ನೂ ಮಾಡಲು ಹೋಗುವುದು ಬೇಡ. ನಿಮ್ಮ ಬಗ್ಗೆ ನೀವೇ ಕೇಳಿಕೊಳ್ಳುವುದು ಅಗತ್ಯವಾಗಬಹುದು. ಇನ್ನೊಬ್ಬರ ಟೀಕೆಯನ್ನು ಸಮಾನಮನಃಸ್ಥಿತಿಯಿಂದ ಪಡೆಯುವಿರಿ.
ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿಯು ಸಿಗುವ ನಿರೀಕ್ಷೆಯಲ್ಲಿ ಇರುವಿರಿ. ಹೆಚ್ಚಿನ ಸ್ಥಾನವನ್ನು ನೀವು ಬಯಸಲಿದ್ದೀರಿ. ಕೊರತೆಯನ್ನು ಸರಿಮಾಡಿಕೊಳ್ಳುವಿರಿ. ಭಾಷೆಯಲ್ಲಿ ನಿಮಗೆ ತೊಂದರೆ ಕಾಣಿಸುವುದು. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ಕಾರ್ಯಸಾಧನೆಗೆ ಹೆಚ್ಚು ಓಡಾಟವನ್ನು ಮಾಡುವಿರಿ. ಆಗದ ಕೆಲಸಕ್ಕೆ ನೀವು ಹೆಚ್ಚು ಪ್ರಯಾಸಪಡುವಿರಿ. ಇನ್ನೊಬ್ಬರನ್ನು ಟೀಕಿಸುವುದು ನಿಮಗೆ ಶೋಭೆ ತರದು. ಹಿರಿಯರ ಕಿವಿಮಾತಿನ ಮೇಲೆ ಲಕ್ಷ್ಯವಿರಲಿ. ನಿಮ್ಮ ವಸ್ತುಗಳ ಮೇಲೆ ಅಧಿಕ ಮೋಹವು ಉಂಟಾಗಬಹುದು. ಸಮಯಕ್ಕೆ ಆಗಬೇಕಾದುದು ಆಗುವುದು.
ಧನುಸ್ಸು: ಅನಾರೋಗ್ಯದ ಕಾರಣ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳುವಿರಿ. ಬಂಧುಗಳು ನಿಮ್ಮ ಬಗ್ಗೆ ಆಡಿಕೊಂಡಾರು. ನಿಮ್ಮ ಶ್ರಮವು ಯುಕ್ತಿಯಿಂದ ಇರಲಿ. ಧನಾತ್ಮಕ ಚಿಂತನೆಯನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳುವಿರಿ. ನಿದ್ರೆಯನ್ನು ಮಾಡಲಾಗದೇ ಕಷ್ಟಪಡುವಿರಿ. ಮನೆತನದ ಗೌರವವನ್ನು ಹೆಚ್ಚಿಸುವಿರಿ. ಕಳೆದುಕೊಂಡದ್ದು ನಿಮಗೆ ಬಹಳ ಬೇಸರವನ್ನು ತರಿಸಬಹುದು. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಸಂಗಾತಿಯ ನಡೆಯನ್ನು ಅನುಮಾನಿಸುವಿರಿ. ಗೊಂದಲವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಮಕರ: ದುಂದುವೆಚ್ಚವನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮವರ ಪ್ರೀತಿಯು ನಿಮ್ಮ ಮೇಲೆ ಕಡಿಮೆ ಆದಂತೆ ಅನ್ನಿಸಬಹುದು. ಕೃಷಿಯಲ್ಲಿ ಲಾಭಗಳಿಸುವ ಯೋಜನೆಯನ್ನು ಕಂಡುಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ದೂರಾಗಬಹುದು. ಹಣವನ್ನು ಗಳಿಸುವ ಹಂಬಲವು ಅದಕ್ಕಾಗಿ ಮಾರ್ಗವನ್ನೂ ಗಮನಿಸಿಕೊಳ್ಳಿ. ಸಹೋದರರ ನಡುವಿನ ಬಾಂಧವ್ಯವು ಸಡಿಲಾಗಬಹುದು. ಆಗಾಗ ಮಾತನಾಡುತ್ತ ಸಂಬಂಧವನ್ನು ಗಟ್ಟಿಮಾಡಿಕೊಳ್ಳಿ. ಕೆಲಸವನ್ನು ಸಮಯದ ಮಿತಿಯಲ್ಲಿ ಮಾಡುವುದು ಕಷ್ಟವಾದೀತು. ಮನಸ್ಸಿನ ಹತ್ತಾರು ಭಾವನೆಗಳು ನಿಮ್ಮನ್ನು ಕಾಡಿಸಬಹುದು.
ಕುಂಭ: ಅನಾರೋಗ್ಯದ ಕಾರಣದಿಂದ ನೀವು ಪ್ರಯಾಣವನ್ನು ಬದಲಾಯಿಸುವಿರಿ. ಚೋರಭೀತಿಯು ಇಂದು ಇರಲಿದೆ. ಸಜ್ಜನರಿಗೆ ಕೆಲವು ಅಪವಾದಗಳು ಬರಬಹುದು. ನಿಮ್ಮ ತಾಳ್ಮೆಯ ವರ್ತನೆಯಿಂದ ಸಂಕಟವನ್ನು ದೂರ ಮಾಡಿಕೊಳ್ಳುವಿರಿ. ಕಲಿಕೆಯಲ್ಲಿ ಹೊಸತನವನ್ನು ತಂದುಕೊಳ್ಳುವಿರಿ. ಪುತ್ರೋತ್ಸವದಲ್ಲಿ ನೀವು ಭಾಗಿಯಾಗುವಿರಿ. ವಿದೇಶಪ್ರಯಾಣವನ್ನು ಮಾಡುವ ಮನಸ್ಸುಳ್ಳವರಿದ್ದೀರಿ. ಪ್ರಾಮಾಣಿಕ ಪ್ರಯತ್ನವನ್ನು ನೀವು ಮಾಡಲಿದ್ದೀರಿ. ಪುಣ್ಯಸ್ಥಳಗಳಿಗೆ ಹೋಗುವಿರಿ. ನಿಮಗೆ ಸಿಗಾಬೇಕಾದುದ್ದು ಸಿಕ್ಕಿಯೇ ಸಿಗುತ್ತದೆ ಎಂಬ ನಂಬಿಕೆ ಇರಲಿದೆ.
ಮೀನ: ಕಾನೂನಿಗೆ ವಿರುದ್ಧವಾದ ವ್ಯವಹಾರವು ನಿಮಗೆ ತೊಡಕನ್ನು ಉಂಟುಮಾಡುವುದು. ಆಪ್ತರು ನಿಮ್ಮಿಂದ ದೂರವಾಗಲಿದ್ದು ಆ ವೇದನೆಯನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳು ಅಡ್ಡದಾರಿಯಲ್ಲಿ ಹೋಗುವ ಸಾಧ್ಯತೆ ಇದೆ. ಮಾರ್ಗದರ್ಶನದ ಅವಶ್ಯಕತೆ ಹೆಚ್ಚು ಇರಲಿದೆ. ಸ್ವಾವಂಬಿಯಾಗಲು ನೀವು ಬಹುವಾಗಿ ಇಚ್ಛಿಸುವಿರಿ. ಸಿಟ್ಟನ್ನು ಕಡಿಮೆ ಮಾಡಿಕೊಂಡು ಎಲ್ಲವನ್ನೂ ಸ್ವೀಕರಿಸಿದರೆ ನಿಮಗೆ ಯಶಸ್ಸು ಸಿಗಲಿದೆ. ಸ್ಥಾನಮಾನಗಳೂ ನಿಮ್ಮನ್ನು ಹುಡುಕಿಕೊಂಡು ಬಂದಾವು. ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವರು.