Eye Flu: ಮಳೆಗಾಲದಲ್ಲಿ ಕಣ್ಣಿನ ಸೋಂಕಿನ ಅಪಾಯ ಹೆಚ್ಚುತ್ತಿದೆ, ಅದರ ಲಕ್ಷಣ, ತಡೆಗಟ್ಟುವ ಕ್ರಮಗಳು

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನೀರಿನ ಮಟ್ಟ ಏರಿಕೆಯಾಗಿದ್ದು, ಒಂದೆಡೆ ಜಲಾವೃತದಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಮತ್ತೊಂದೆಡೆ ಮಳೆಯಿಂದಾಗಿ ಕಣ್ಣಿನ ಸೋಂಕಿನ ಭೀತಿಯೂ ಹೆಚ್ಚುತ್ತಿದೆ. ಕೆಲವು ದಿನಗಳಿಂದ ಕಣ್ಣಿನ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರ ಲಕ್ಷಣಗಳು, ಕಾರಣಗಳು ಮತ್ತು ಅದನ್ನು ತಡೆಗಟ್ಟುವ ಕ್ರಮದ ಬಗ್ಗೆ ತಿಳಿಯಿರಿ.

Eye Flu: ಮಳೆಗಾಲದಲ್ಲಿ ಕಣ್ಣಿನ ಸೋಂಕಿನ ಅಪಾಯ ಹೆಚ್ಚುತ್ತಿದೆ, ಅದರ ಲಕ್ಷಣ, ತಡೆಗಟ್ಟುವ ಕ್ರಮಗಳು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 24, 2023 | 5:05 PM

ಮಳೆಗಾಲವು ಅನೇಕ ರೋಗಗಳನ್ನು ಸಹ ಹೊತ್ತು ತರುತ್ತದೆ. ಏಕೆಂದರೆ ಈ ಋತುವಿನಲ್ಲಿ ಗರಿಷ್ಠ ಬ್ಯಾಕ್ಟೀರಿಯಾಗಳು ಪ್ರವರ್ಧಮಾನಕ್ಕೆ ಬರುತ್ತವೆ. ಒಂದೆಡೆ ಅತಿವೃಷ್ಟಿ ಮಳೆಯಿಂದಾಗಿ ಜನ ಕಂಗಾಲಾಗಿದ್ದಾರೆ ಮತ್ತೊಂದೆಡೆ ರೋಗ ರುಜಿನಗಳೂ ಮುತ್ತಿಗೆ ಹಾಕುತ್ತಿವೆ. ಇವುಗಳಲ್ಲಿ ಕಣ್ಣಿನ ಸೋಂಕು ಕೂಡ ಒಂದು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಕಾಂಜಂಕ್ಟಿವಿಟಿಸ್ ಎಂದೂ ಕರೆಯುತ್ತಾರೆ. ಈ ಕಣ್ಣಿನ ಕಾಯಿಲೆಯಿಂದಾಗಿ, ಉರಿ, ನೋವು ಮತ್ತು ಕಣ್ಣು ಕೆಂಪಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಸರಿಯಾದ ರೀತಿಯಲ್ಲಿ ಕಾಳಜಿ ವಹಿಸುವ ಮೂಲಕ ವೈರಲ್ ಸೋಂಕುಗಳ ಕಾಯಿಲೆಗಳು ಹರಡುವುದನ್ನು ತಪ್ಪಿಸಬಹುದು.

ಕಣ್ಣಿನ ಸೋಂಕು ಎಂದರೇನು?

ಕಣ್ಣಿನ ಸೋಂಕನ್ನು ಪಿಂಕ್ ಐ ಅಥವಾ ವೈದ್ಯಕೀಯ ಭಾಷೆಯಲ್ಲಿ ಕಾಂಜಂಕ್ಟಿವಿಟಿಸ್ ಎಂದು ಕರೆಯುತ್ತಾರೆ. ಇದು ಮಳೆಗಾಲದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ಪ್ರಕರಣಗಳಲ್ಲಿ ಕಣ್ಣಿನ ಬಿಳಿ ಭಾಗದಲ್ಲಿ ಸೋಂಕು ಸಂಭವಿಸುತ್ತದೆ. ಕಣ್ಣಿನ ಸೋಂಕಿನ ಹೆಚ್ಚಿನ ಪ್ರಕರಣಗಳು ಶೀತ ಕೆಮ್ಮಿನಂತಹ ವೈರಸ್ ನಿಂದ ಉಂಟಾಗುತ್ತದೆ. ಮಳೆಗಾಲದಲ್ಲಿ ಶಿಲೀಂಧ್ರಗಳ ಸೋಂಕಿನೊಂದಿಗೆ ವಾಯು ಮಾಲಿನ್ಯ, ಪರಿಸರದಲ್ಲಿನ ತೇವಾಂಶಯುಕ್ತ ವಾತಾರಣದಿಂದ ಕೂಡಾ ಈ ಸೋಂಕು ಹರಡುತ್ತದೆ. ಇದರಿಂದಾಗಿ ಹೆಚ್ಚಿನ ಜನರು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ.

ಕಣ್ಣಿನ ಸೋಂಕು ಹೇಗೆ ಹರಡುತ್ತದೆ?

ಬೇಸಿಗೆಯ ನಂತರ, ಮಳೆಯಿಂದಾಗಿ ಹವಾಮಾನದಲ್ಲಿ ತ್ವರಿತ ಬದಲಾವಣೆ ಕಂಡುಬರುತ್ತದೆ. ಈ ಋತುವಿನಲ್ಲಿ ವಾಯು ಮಾಲಿನ್ಯ ಮತ್ತು ತೇವಾಂಶದಿಂದ ಶಿಲೀಂದ್ರಗಳ ಸೋಂಕಿನ ಸಮಸ್ಯೆಗಳು ಉದ್ಭವಿಸುತ್ತದೆ. ಇದರಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಕಾಡುತ್ತದೆ. ಈ ಋತುವಿನಲ್ಲಿ ಶಿಲೀಂದ್ರಗಳ ಸೋಂಕು ಹೆಚ್ಚಾಗುವುದರಿಂದ, ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ವಿಶೇಷವಾಗಿ ತಮ್ಮ ಕಣ್ಣುಗಳಿಗೆ ಕಾಂಟೆಕ್ಟ್ ಲೆನ್ಸ್ ಧರಿಸುವ ಜನರು.

ಕಣ್ಣಿನ ಜ್ವರದ ಲಕ್ಷಣಗಳು:

• ಕಣ್ಣು ಕೆಂಪಾಗುವುದು

• ಕಣ್ಣಿನಲ್ಲಿ ಬಿಳಿ ಲೋಳೆ ಕಾಣಿಸಿಕೊಳ್ಳುವುದು

• ಕಣ್ಣು ಊತಕೊಳ್ಳುವುದು

• ಕಣ್ಣು ನೋವು

• ಕಣ್ಣಿನ ತುರಿಕೆ ಕಾಣಿಸಿಕೊಳ್ಳುವುದು

ಕಣ್ಣಿನ ಸೋಂಕನ್ನು ತಪ್ಪಿಸುವುದು ಹೇಗೆ?

• ಕಣ್ಣಿನ ಸೋಂಕು ಭಾದಿತ ವ್ಯಕ್ತಿಯು ಕಪ್ಪು ಕನ್ನಡಕವನ್ನು ಧರಿಸಬೇಕು

• ಟಿವಿ ಅಥವಾ ಮೊಬೈಲ್ ನೋಡುವುದನ್ನು ತಪ್ಪಿಸಿ

• ಪದೇ ಪದೇ ಕಣ್ಣುಗಳನ್ನು ಕೈಯಿಂದ ಮುಟ್ಟಬೇಡಿ

• ಕಣ್ಣಿನ ಸೋಂಕನ್ನು ತಪ್ಪಿಸಲು, ಮಳೆಯಲ್ಲಿ ಒದ್ದೆಯಾಗುವುದನ್ನು ತಪ್ಪಿಸಿ

ಇದನ್ನೂ ಓದಿ:ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ ಪ್ರಕರಣಗಳು ಹೆಚ್ಚಳ, ಲಕ್ಷಣಗಳು, ತಡೆಗಟ್ಟುವ ಮಾರ್ಗ, ಚಿಕಿತ್ಸೆ ಬಗ್ಗೆ ಮಾಹಿತಿ ಇಲ್ಲಿದೆ

ನಿಮಗೆ ಕಣ್ಣಿನ ಜ್ವರ ಬಂದಾಗ ಏನು ಮಾಡಬೇಕು:

ಉಗುರು ಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಿ. ಕಣ್ಣುಗಳನ್ನು ಸ್ವಚ್ಛಗೊಳಿಸಲು ಶುದ್ಧ ಮತ್ತು ಹತ್ತಿ ಬಟ್ಟೆಯನ್ನು ಬಳಸಿ. ಕಣ್ಣಿನ ಜ್ವರದ ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಬೇಕಾದ ಆಹಾರಗಳು:

ಋತುಗಳ ಬದಲಾವಣೆಯಾದಾಗಲೆಲ್ಲಾ, ನಿಮ್ಮ ಆಹಾರದ ಬಗ್ಗೆ ನೀವು ಸರಿಯಾದ ಗಮನವನ್ನು ನೀಡಬೇಕು. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಈ ಕೆಲವೊಂದು ಆಹಾವನ್ನು ಸೇವಿಸಿ: ಕ್ಯಾರೆಟ್, ನೆಲ್ಲಿಕಾಯಿ, ಬಾದಾಮಿ, ಹಸಿರು ಎಲೆ ತರಕಾರಿಗಳು, ಮೀನು, ಮೊಟ್ಟೆ, ಟೊಮೆಟೊ, ಡ್ರೈ ನಟ್ಸ್ ಮತ್ತು ಬೀಜಗಳು

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ