ಸುಂದರವಾಗಿ ಕಾಣಲು ಮೇಕಪ್, ಬಟ್ಟೆ ಮಾತ್ರವಲ್ಲ, ಈ ಅಂಶಗಳು ಮುಖ್ಯ

ಒಬ್ಬ ಹುಡುಗ ಅಥವಾ ಹುಡುಗಿ ಒಬ್ಬರಿಗೊಬ್ಬರು ಇಷ್ಟಪಡುವುದು ಕೇವಲ ಅಂದಕ್ಕೆ ಮಾತ್ರವಲ್ಲ, ಅದಕ್ಕಿಂತ ಮುಖ್ಯವಾದ ವಿಚಾರಗಳು ಇದೆ ಎಂದು ಮಾಣಿಕ್ ಕೌರ್ ಹೇಳುತ್ತಾರೆ, ಹಾಗಾದರೆ ಅಂದ, ಸ್ಟೈಲ್​​ ಬಿಟ್ಟರೆ ಯಾವ ವಿಚಾರಗಳನ್ನು ದಿನನಿತ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ. ಈ ಬಗ್ಗೆ ಮಾಣಿಕ್ ಕೌರ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಸುಂದರವಾಗಿ ಕಾಣಲು ಮೇಕಪ್, ಬಟ್ಟೆ ಮಾತ್ರವಲ್ಲ, ಈ ಅಂಶಗಳು ಮುಖ್ಯ
ಸಾಂದರ್ಭಿಕ ಚಿತ್ರ

Updated on: Jun 28, 2025 | 5:54 PM

ಕೆಲವರು ತಾವು ಅಂದವಾಗಿ ಕಾಣಬೇಕೆಂದು ಇಲ್ಲ-ಸಲ್ಲದ ಮೇಕಪ್​​​​, ಇತರ ಅನಗತ್ಯ ಕ್ರೀಮ್​​ಗಳನ್ನು ಹಚ್ಚಿಕೊಳ್ಳುತ್ತಾರೆ. ಆದರೆ ನಿಜವಾಗಿ ಸುಂದರವಾಗಿ (Grooming Tips) ಕಾಣಲು ಏನುಬೇಕು ಎಂಬುದನ್ನೇ ಮರೆತಿರುತ್ತಾರೆ. ಒಬ್ಬ ವ್ಯಕ್ತಿಯು ಎಷ್ಟೇ ದುಬಾರಿ ಬಟ್ಟೆಗಳನ್ನು ಧರಿಸಿದರೂ ಎಷ್ಟೇ ಉತ್ತಮ ಮೇಕಪ್ ಮಾಡಿಕೊಂಡರೂ, ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿದಿದ್ದರೆ ಖಂಡಿತ ಆತನಿಂದ ಎಲ್ಲರೂ ಅಂತರವನ್ನು ಕಾದುಕೊಳ್ಳುತ್ತಾರೆ. ಈ ಕಾರಣಕ್ಕೆ ಅಂದವಾಗಿ ಕಾಣಲು ಮೇಕಪ್​ ಮಾತ್ರವನ್ನು ಈ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಅಂದದ ಜೊತೆ ಜೊತೆಗೆ ಜನರು ಈ ವಿಚಾರಗಳನ್ನು ಕೂಡ ಗಮನಿಸುತ್ತಾರೆ. ಹೌದು  ಅಂದ ಮಾತ್ರವಲ್ಲದೆ ವೈಯಕ್ತಿಕ ನೈರ್ಮಲ್ಯದ ವಿಷಯಗಳು, (Personally Development Tips) ಕೂದಲು ಮತ್ತು ಚರ್ಮದ ಆರೈಕೆಗೆ ಗಮನ, ಬಟ್ಟೆಗಳನ್ನು ಧರಿಸುವ ಶೈಲಿ ಇದು ಎಲ್ಲವೂ ಮುಖ್ಯವಾಗಿರುತ್ತದೆ. ಈ ಬಗ್ಗೆ ಬ್ಯೂಟಿ ಟಿಪ್​​​ ನೀಡುವ ಮಾಣಿಕ್ ಕೌರ್ ಅವರು ತಮ್ಮ ಇನ್‌ಸ್ಟಾಗ್ರಾಮ್​​​ನಲ್ಲಿ ಕೆಲವು ಅಂದಗೊಳಿಸುವ ಸಲಹೆಗಳನ್ನು ನೀಡಿದ್ದಾರೆ. ಈ  ಸಲಹೆಗಳನ್ನು ಪ್ರಯತ್ನಿಸಿದರೆ, ನಿಮ್ಮ ವ್ಯಕ್ತಿತ್ವವು 0 ರಿಂದ 10 ಕ್ಕೆ ಹೋಗಬಹುದು ಎಂದು ಅವರು ಹೇಳುತ್ತಾರೆ.

ವ್ಯಕ್ತಿತ್ವ ವಿಕಸನದ ಜತೆಗೆ ಶೃಂಗಾರ ಸಲಹೆಗಳು:

ಬಾಯಿಯ ಆರೋಗ್ಯ : ಬಾಯಿಯ ದುರ್ವಾಸನೆ ಮತ್ತು ಕೆಟ್ಟ ಹಲ್ಲುಗಳು ನಿಮ್ಮ ವ್ಯಕ್ತಿತ್ವವನ್ನು ಕಡಿಮೆ ಮಾಡುತ್ತದೆ. ನೀವು ಯಾರೊಂದಿಗಾದರೂ ಮಾತನಾಡುವಾಗ ಆ ವ್ಯಕ್ತಿಯ ಗಮನವು ನಿಮ್ಮ ಬಾಯಿಯ ಕಡೆಗೆ ಮಾತ್ರ ಇರುತ್ತದೆ.  ಹಳದಿ ಹಲ್ಲುಗಳು, ಹಲ್ಲುಗಳಲ್ಲಿ ಏನಾದರೂ ಸಿಲುಕಿಕೊಂಡಿರುವುದು ಅಥವಾ ಬಾಯಿಯಿಂದ ಕೆಟ್ಟ ವಾಸನೆ ಬಂದರೆ ಎಲ್ಲರೂ ಕೆಟ್ಟ ಭಾವನೆಯಿಂದ ನೋಡುತ್ತಾರೆ. ಅದಕ್ಕಾಗಿಯೇ ನಿಮ್ಮ ಬಾಯಿಯ ಆರೋಗ್ಯದ ಬಗ್ಗೆ ಗಮನ ಕೊಡಿ, ದಿನಕ್ಕೆ ಎರಡು ಬಾರಿ ಹಲ್ಲುಜ್ಜಿಕೊಳ್ಳಿ, ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಿ ಮತ್ತು ಅಗತ್ಯವಿದ್ದರೆ ಮೌತ್‌ವಾಶ್ ಬಳಸಿ.

ಇದನ್ನೂ ಓದಿ
ಈ ಚಿತ್ರದಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಕುರ್ಚಿ ವ್ಯಕ್ತಿತ್ವ ಹೇಳುತ್ತೆ
ಈ ಚಿತ್ರದ ಮೂಲಕ ತಿಳಿಯಿರಿ ನಿಮ್ಮ ವ್ಯಕ್ತಿತ್ವದ ರಹಸ್ಯ
ಈ ಚಿತ್ರ ನೋಡಿ, ನಿಮ್ಮ ರಹಸ್ಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಿರಿ
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನಿಮ್ಮ ಲವ್‌ಲೈಫ್‌ ಬಗ್ಗೆ ಹೇಳುತ್ತೆ

ಚರ್ಮದ ಆರೋಗ್ಯ : ಚರ್ಮದ ಗುಣಮಟ್ಟ ಮತ್ತು ಚರ್ಮದ ಆರೋಗ್ಯದ ಬಗ್ಗೆ ಗಮನ ಕೊಡಿ. ಚರ್ಮವು ಒಳಗಿನಿಂದ ಚೆನ್ನಾಗಿದ್ದರೆ ಮಾತ್ರ ಅದು ಹೊರಗಿನಿಂದ ಚೆನ್ನಾಗಿ ಕಾಣುತ್ತದೆ. ಎಷ್ಟೇ ಚೆನ್ನಾಗಿ ಮೇಕಪ್​​ ಮಾಡಿಕೊಂಡರು, ಚರ್ಮವು ಚೆನ್ನಾಗಿಲ್ಲದಿದ್ದರೆ ಅದು ಮುಖವನ್ನು ವಿಚಿತ್ರವಾಗಿ ಕಾಣುವಂತೆ ಮಾಡುತ್ತದೆ. ಇದರಲ್ಲೂ ಹುಡುಗರು ತಮ್ಮ ಚರ್ಮವನ್ನು ಸ್ಪಷ್ಟವಾಗಿ ಕಾಣುವಂತೆ ಮಾಡಲು ಚರ್ಮದ ಆರೈಕೆಯತ್ತ ಗಮನ ಹರಿಸಬೇಕು.

ವಿಡಿಯೋ ಇಲ್ಲಿದೆ ನೋಡಿ:

ಬಟ್ಟೆಗಳು ಸ್ವಚ್ಛವಾಗಿರಬೇಕು: ನಿಮ್ಮ ಬಟ್ಟೆಗಳನ್ನು ಸ್ವಚ್ಛವಾಗಿ ಮತ್ತು ಇಸ್ತ್ರಿ ಮಾಡಿಕೊಳ್ಳುವುದು ಮುಖ್ಯ. ಬಟ್ಟೆಗಳು ದುಬಾರಿಯಾಗಿದ್ದರೂ, ಅವುಗಳನ್ನು ಸರಿಯಾಗಿ ಇಸ್ತ್ರಿ ಮಾಡದಿದ್ದರೆ, ಅವು ನಿಮಗೆ ಸರಿಹೊಂದುವುದಿಲ್ಲ. ಅಲ್ಲದೆ, ಬಟ್ಟೆಗಳ ಮೇಲೆ ಯಾವುದೇ ರೀತಿಯ ಕಲೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಬಟ್ಟೆಗಳ ಶೈಲಿಯ ಬಗ್ಗೆಯೂ ಗಮನ ಕೊಡಿ. ಬಟ್ಟೆಗಳ ಮಾದರಿ ಅಥವಾ ಬಣ್ಣವು ಹೊಂದಿಕೆಯಾಗುತ್ತದೆಯೇ ಅಥವಾ ಪೂರಕವಾಗಿದೆಯೇ ಎಂಬುದರ ಬಗ್ಗೆ ಗಮನ ಕೊಡಿ.

ಶೂಗಳನ್ನು ಪಾಲಿಶ್ : ಶೂಗಳು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸುತ್ತದೆ. ನಿಮ್ಮ ಶೂಗಳು ಸ್ವಚ್ಛವಾಗಿಲ್ಲದಿದ್ದರೆ ಅಥವಾ ಪಾಲಿಶ್ ಮಾಡದಿದ್ದರೆ, ಅವು ಚೆನ್ನಾಗಿ ಕಾಣುವುದಿಲ್ಲ, ಇದು ನಿಮ್ಮ ಸಂಪೂರ್ಣ ಲುಕ್​​​ನ್ನು ಬದಲು ಮಾಡುತ್ತದೆ. ಅದಕ್ಕಾಗಿಯೇ ನಿಮ್ಮ ಶೂಗಳು ಅಥವಾ ಸ್ಯಾಂಡಲ್‌ಗಳನ್ನು ಸ್ವಚ್ಛವಾಗಿಡಿ.  ವಿಶೇಷವಾಗಿ ಕೆಲಸಕ್ಕೆ ಹೋಗವಾಗ ಪಾಲಿಶ್ ಮಾಡಿದ ಶೂಗಳನ್ನು ಧರಿಸಿ.

ಇದನ್ನೂ ಓದಿ: ನೀವು ಎಲ್ಲರನ್ನೂ ಕುರುಡಾಗಿ ನಂಬುವವರೇ; ಈ ಚಿತ್ರವೇ ಹೇಳುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ

ದೇಹ ಸುಗಂಧ: ನಿಮ್ಮಲ್ಲಿ ಬೆವರಿ ವಾಸನೆ ಇದ್ದರೆ ಯಾರು ನಿಮ್ಮ ಬಳಿ ಬರುವುದಿಲ್ಲ, ಹಾಗಾಗಿ ದೇಹವು ಪರಿಮಳವಾಗಿರಲಿ. ಪ್ರತಿದಿನ ಸ್ನಾನ ಮಾಡಿ, ಬೆವರಿನಿಂದ ಬರುವ ವಾಸನೆಯನ್ನು ತೆಗೆದುಹಾಕಲು ಡಿಯೋ ಹಚ್ಚಿ ಮತ್ತು ನೀವು ಬಯಸಿದರೆ, ಉತ್ತಮ ಪರಿಮಳವಿರುವ ಸುಗಂಧ ದ್ರವ್ಯವನ್ನು ಬಳಸಿ. ಅಂದಗೊಳಿಸುವಿಕೆಗೆ ತಾಜಾ ಮತ್ತು ಉತ್ತಮ ವಾಸನೆಯನ್ನು ಹೊಂದಿರುವುದು ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ