AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happiness: ಖುಷಿಯಾಗಿರುವುದು ನಿಮ್ಮ ಅವಶ್ಯಕತೆಯಲ್ಲ, ಹಕ್ಕು , ನೀವು ಹ್ಯಾಪಿ ಆಗಿರಲು ಹೀಗೆ ಮಾಡಬಹುದಲ್ಲಾ

ಬಾಲ್ಯದಲ್ಲಿ ಚಿಕ್ಕಪುಟ್ಟ ಖುಷಿಯನ್ನು ಎಂಜಾಯ್ ಮಾಡುತ್ತಿದ್ದೆವು, ಬೆಳೆದು ದೊಡ್ಡವರಾದಂತೆ ಖುಷಿಯ ಪದದ ಅರ್ಥವೇ ಬದಲಾಗಿದೆ.

Happiness: ಖುಷಿಯಾಗಿರುವುದು ನಿಮ್ಮ ಅವಶ್ಯಕತೆಯಲ್ಲ, ಹಕ್ಕು , ನೀವು ಹ್ಯಾಪಿ ಆಗಿರಲು ಹೀಗೆ ಮಾಡಬಹುದಲ್ಲಾ
ನಗು
ನಯನಾ ರಾಜೀವ್
|

Updated on: Mar 22, 2023 | 9:00 AM

Share

ಬಾಲ್ಯದಲ್ಲಿ ಚಿಕ್ಕಪುಟ್ಟ ಖುಷಿಯನ್ನು ಎಂಜಾಯ್ ಮಾಡುತ್ತಿದ್ದೆವು, ಬೆಳೆದು ದೊಡ್ಡವರಾದಂತೆ ಖುಷಿಯ ಪದದ ಅರ್ಥವೇ ಬದಲಾಗಿದೆ. ಹಣವಿದ್ದರೆ ಮಾತ್ರ ಖುಷಿ, ಇಷ್ಟಪಟ್ಟಿದ್ದನ್ನು ಕೊಂಡುಕೊಂಡರೆ ಮಾತ್ರ ಮೊಗದಲ್ಲಿ ನಗು ಹೀಗೆ ಖುಷಿಯ ಅರ್ಥವೂ ಕೂಡ ವಿಷಯಗಳಿಗೆ ಸೀಮಿತವಾಗುತ್ತಾ ಹೋಯಿತು. ಮೊದಲು ಅಮ್ಮ ಮನೆಯಲ್ಲಿ ಸಹಿ ಮಾಡಿದರೆ ಸಾಕು ಚಪ್ಪರಿಸಿ ತಿಂದು ಖುಷಿಪಡುತ್ತಿದ್ದೆವು ಈಗ ಮೃಷ್ಟಾನ್ನ ಭೋಜನವನ್ನೇ ತಿಂದರೂ ಆ ಖುಷಿ ಇಲ್ಲ, ಹಬ್ಬಕ್ಕೆ ಅಪ್ಪ ಬಟ್ಟೆ ತಂದಾಗ ಆಗುವ ಖುಷಿ ನಿತ್ಯ ಮಾಲ್​ಗಳಿಗೆ ಹೋಗಿ ಹತ್ತಾರು ಒಟ್ಟಿಗೆ ಕೊಂಡರೂ ಸಿಗುತ್ತಿಲ್ಲ.

ಸ್ನೇಹಿತರ ಜತೆ ಸೈಕಲ್ ತುಳಿದರೂ ಎಷ್ಟೋ ಖುಷಿ ಈಗ ಸ್ನೇಹಿತರೊಂದಿಗೆ ಮಾತನಾಡಲೂ ಸಮಯವಿಲ್ಲ. ಖುಷಿಯನ್ನು ನೀವೇ ಅರಸುವುದನ್ನು ಬಿಟ್ಟಿದ್ದೀರಿ. ಖುಷಿ ಎಲ್ಲಿಯೂ ಹೋಗಿಲ್ಲ, ಆ ನಗುವನ್ನು ಕಂಡುಕೊಳ್ಳಲು ನೀವು ಪ್ರಯತ್ನಿಸುತ್ತಲೇ ಇಲ್ಲ. ಎಲ್ಲರಿಗೂ ಖುಷಿಯಾಗಿರುವ ಹಕ್ಕಿದೆ.

ನೀವು ಗಳಿಸಿರುವ ಸಂತೋಷಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ನೀವು ಈಗಿರುವ ಸ್ಥಿತಿಗೆ ಸಿಕ್ಕಿರುವ ಖುಷಿಗೆ ಸಂತೋಷವನ್ನು ವ್ಯಕ್ತಪಡಿಸಿ. ನಿಮ್ಮಲ್ಲಿರುವ ಎಷ್ಟೋ ವಸ್ತುಗಳು ಬೇರೆಯವರ ಬಳಿ ಇರುವುದಿಲ್ಲ ಅದಕ್ಕಾಗಿ ಖುಷಿ ಪಡಿ.

ನಿಮ್ಮ ತಪ್ಪುಗಳನ್ನು ಸುಧಾರಿಸಿಕೊಳ್ಳಿ ನೀವು ಹಿಂದೆ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಈಗ ಹೇಗೆ ತಂತೋಷವಾಗಿರಬೇಕು ಎಂಬುದರ ಕಡೆಗೆ ಹೆಚ್ಚು ಗಮನಕೊಡುವುದು ಅಗತ್ಯ. ಕೆಲವರು ಅನುಭವಿಸಿರುವ ಕಹಿ ನೆನಪುಗಳನ್ನೇ ಮೆಲುಕು ಹಾಕುತ್ತಾ ಮತ್ತೆ ಮತ್ತೆ ನೋವು ಅನುಭವಿಸುತ್ತಿರುತ್ತಾರೆ, ಆದರೆ ಅದೆಲ್ಲದರಿಂದ ಹೊರಬರಲೇಬೇಕು ಆಗ ಮಾತ್ರ ನೀವು ಸಂತೋಷವಾಗಿರಲು ಸಾಧ್ಯ.

ಇತರರಿಗೆ ಹಿತವೆನಿಸುವಂತಿರಿ ಯಾರಾದರೂ ನಮಗೆ ಕಟ್ಟದ್ದನ್ನು ಮಾಡಿದರೆ, ನಮಗೆ ಅವರ ಮೇಲೆ ನಕಾರಾತ್ಮಕ ಭಾವನೆಗಳು ಹುಟ್ಟುವುದು ಸಹಜ. ಆದರೆ ಅವರ ತಪ್ಪುಗಳನ್ನು ಕ್ಷಮಿಸಿ ಮುನ್ನಡೆಯುವುದು ಜಾಣತನ. ನಿಮ್ಮ ಮನಸ್ಸಿನಲ್ಲಿ ಯಾರಿಗಾದರೂ ನಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಂಡರೆ, ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಕೋಪವನ್ನು ನಿಯಂತ್ರಿಸಿ.

ನಿಮಗೆ ಏನಿಷ್ಟವೋ ಅದನ್ನು ಮಾಡಿ ನಿಮ್ಮ ನೆಚ್ಚಿನ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯವಾಗಿರುತ್ತದೆ. ಇದು ಚಿಂತೆಯನ್ನು ದೂರವಿರಸಲು ಸುಲಭ ಮಾರ್ಗವಾಗಿದೆ. ನಿಮ್ಮ ಬಯಕೆಗಳ ಮೇಲೆ ಕೆಲಸ ಮಾಡುವುದು ಒತ್ತಡ ಮತ್ತು ಆತಂಕದಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.

ನಿಮಗೆ ನೀವೇ ಸವಾಲು ಹಾಕಿ ಇತರರನ್ನು ಸವಾಲಾಗಿ ತೆಗೆದುಕೊಳ್ಳುವ ಬದಲು ನಿಮಗೆ ನೀವು ಸವಾಲು ಹಾಕಿ, ನಿಮ್ಮ ವ್ಯಕ್ತಿತ್ವವನ್ನು ಹೇಗೆ ಸುಧಾರಿಸಿಕೊಳ್ಳುವುದು ಎಂಬುದರ ಕುರಿತು ಗಮನವಹಿಸಿ ಅದರಿಂದ ನೀವು ಚಿಂತೆಯನ್ನು ಮರೆತು ನೆಮ್ಮದಿಯಿಂದ ಇರಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ