Oats Smoothie: ಬೆಳಗ್ಗೆಗೆ ಆರೋಗ್ಯಕರ ಬ್ರೇಕ್​ಫಾಸ್ಟ್ ಬೇಕಾ? ಈ 3 ಓಟ್ಸ್ ಸ್ಮೂಥಿ ಕುಡಿದು ನೋಡಿ

|

Updated on: Apr 18, 2024 | 8:37 AM

ಬಿಡುವಿಲ್ಲದ ಜೀವನದ ನಡುವೆ ಬೆಳಗ್ಗೆ ಆರೋಗ್ಯಕರವಾದ ಆಹಾರ ಸೇವಿಸಲು ಕೂಡ ನಮಗೆ ಸಮಯವಿರುವುದಿಲ್ಲ. ಹೀಗಾಗಿ, ನಮಗೆ ಯಾವುದು ಸುಲಭವೋ ಅಂತಹ ಆಹಾರವನ್ನೇ ಸೇವಿಸಲು ಆದ್ಯತೆ ನೀಡುತ್ತೇವೆ. ನೀವು ಕೂಡ ಬೆಳಗ್ಗೆ ಯಾವ ರೀತಿಯ ಆರೋಗ್ಯಕರವಾದ ಆಹಾರ ಸೇವಿಸಬೇಕೆಂಬ ಗೊಂದಲದಲ್ಲಿದ್ದರೆ ಈ 3 ಓಟ್ಸ್ ಸ್ಮೂಥಿಗಳನ್ನು ಸೇವಿಸಿ ನೋಡಿ.

Oats Smoothie: ಬೆಳಗ್ಗೆಗೆ ಆರೋಗ್ಯಕರ ಬ್ರೇಕ್​ಫಾಸ್ಟ್ ಬೇಕಾ? ಈ 3 ಓಟ್ಸ್ ಸ್ಮೂಥಿ ಕುಡಿದು ನೋಡಿ
ಓಟ್ಸ್‌ ಸ್ಮೂಥಿ
Image Credit source: istock
Follow us on

ಬಿಡುವಿಲ್ಲದ ಬೆಳಿಗ್ಗೆಯ ಕೆಲಸದ ನಡುವೆ ನೀವು ಆರೋಗ್ಯಕರವಾದ, ತಯಾರಿಸಲು ಸುಲಭವಾದ ಬ್ರೇಕ್​ಫಾಸ್ಟ್  (Breakfast Recipe) ಹುಡುಕುತ್ತಿದ್ದರೆ, ಮಧ್ಯಾಹ್ನದ ಊಟದ ಸಮಯದವರೆಗೆ ನಿಮ್ಮನ್ನು ತೃಪ್ತರನ್ನಾಗಿಸಬಹುದಾದ ಓಟ್ಸ್‌ನ (Oats Smoothie) ಕೆಲವು ಸ್ಮೂಥಿಗಳನ್ನು ಸೇವಿಸಬಹುದು. ನಿಮ್ಮ ಬೆಳಗಿನ ಆಹಾರದಲ್ಲಿ ಓಟ್ಸ್ ಅನ್ನು ಸೇರಿಸುವುದು ಫೈಬರ್ ಸೇವನೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಓಟ್ ಮೀಲ್ ಸ್ಮೂಥಿಗಳು ತೂಕ ಇಳಿಸಲು ಸೂಕ್ತವಾಗಿದೆ.

ಸ್ಟ್ರಾಬೆರಿ, ಸೇಬು ಮತ್ತು ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ಓಟ್ಸ್​ನೊಂದಿಗೆ ಹಾಕಿ ಸ್ಮೂಥಿ ತಯಾರಿಸಬಹುದು. ನೀವು ಹಣ್ಣುಗಳನ್ನು ಸೇವಿಸಲು ಇಷ್ಟಪಡುತ್ತಿದ್ದರೆ, ಈ ಪೌಷ್ಟಿಕ ಓಟ್ ಸ್ಮೂಥಿಗಳು ಖಂಡಿತವಾಗಿಯೂ ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಮೂಲಕ ಯಾವುದೇ ಹೆಚ್ಚುವರಿ ಪ್ರಯತ್ನವಿಲ್ಲದೆ ನೀವು ಸಾಕಷ್ಟು ಫೈಬರ್ ಮತ್ತು ಪೋಷಕಾಂಶಗಳನ್ನು ಪಡೆಯಬಹುದು.

ಇದನ್ನೂ ಓದಿ: Orange Benefits: ಬೆಳಗ್ಗೆ ತಿಂಡಿಯ ಬದಲು ಕಿತ್ತಳೆ ಹಣ್ಣು ತಿನ್ನುವುದರಿಂದಾಗುವ ಅಚ್ಚರಿಯ ಪ್ರಯೋಜನಗಳಿವು

ಆರೋಗ್ಯಕರ ಮತ್ತು ರುಚಿಕರವಾದ ಓಟ್ಸ್ ಸ್ಮೂಥಿ ಪಾಕವಿಧಾನಗಳು:

1. ಸೇಬು- ಓಟ್​ಮೀಲ್ ಸ್ಮೂಥಿ:

(ಶೆಫ್ ಸಂಜೀವ್ ಕಪೂರ್ ಅವರ ಪಾಕವಿಧಾನ)

ಬೇಕಾಗುವ ಪದಾರ್ಥಗಳು:

– 2 ದೊಡ್ಡ ಸೇಬು ಹಣ್ಣುಗಳನ್ನು ಸಿಪ್ಪೆ ಸುಲಿದು, ಸಣ್ಣದಾಗಿ ಕತ್ತರಿಸಬೇಕು.

– 4 ಕಪ್ ಹಾಲು

– ರೋಲ್ಡ್ ಓಟ್ಸ್

– ವೆನಿಲ್ಲಾ ಎಸೆನ್ಸ್

– 2 ಟೇಬಲ್ ಸ್ಪೂನ್ ಜೇನುತುಪ್ಪ

– ಅಗತ್ಯವಿರುವಷ್ಟು ಐಸ್ ತುಂಡುಗಳು

ಮಾಡುವ ವಿಧಾನ:

1. ಹಾಲು ಮತ್ತು ಓಟ್ಸ್ ಅನ್ನು ಬ್ಲೆಂಡರ್ ಜಾರ್​ನಲ್ಲಿ ಸೇರಿಸಿ.

2. ಸೇಬು, ವೆನಿಲ್ಲಾ ಎಸೆನ್ಸ್, ಜೇನುತುಪ್ಪ ಮತ್ತು ಕೆಲವು ಐಸ್ ಕ್ಯೂಬ್‌ಗಳನ್ನು ಸೇರಿಸಿ ಮತ್ತು ನಯವಾದ ಮಿಶ್ರಣ ಮಾಡಿ.

3. ಅದನ್ನು ಗ್ಲಾಸ್‌ಗಳಲ್ಲಿ ಸುರಿಯಿರಿ ಮತ್ತು ತಣ್ಣಗಾಗಲು ಬಿಟ್ಟು ನಂತರ ಸೇವಿಸಿ.

2. ಬಾಳೆಹಣ್ಣು- ಓಟ್ಸ್ ಸ್ಮೂಥಿ:

(ಶೆಫ್ ತರ್ಲಾ ದಲಾಲ್ ಅವರ ಪಾಕವಿಧಾನ)

ಬೇಕಾಗುವ ಪದಾರ್ಥಗಳು:

– 1 ಕಪ್ ಕತ್ತರಿಸಿದ ಬಾಳೆಹಣ್ಣುಗಳು

– ಕಪ್ ತ್ವರಿತ ಅಡುಗೆ ರೋಲ್ಡ್ ಓಟ್ಸ್

– 1 ಕಪ್ ತಣ್ಣನೆಯ ತಾಜಾ ಮೊಸರು

– 2 ಟೀ ಸ್ಪೂನ್ ಜೇನುತುಪ್ಪ

– 2 ಚಮಚ ಅಗಸೆ ಬೀಜಗಳು

– 1 ಕಪ್ ಐಸ್ ಕ್ಯೂಬ್ಸ್

ಮಾಡುವ ವಿಧಾನ:

1. ಮೊಸರು, ಜೇನುತುಪ್ಪ, ಬಾಳೆಹಣ್ಣುಗಳು, ಓಟ್ಸ್, ಅಗಸೆ ಬೀಜಗಳು ಮತ್ತು ಐಸ್-ಕ್ಯೂಬ್‌ಗಳನ್ನು ಸೇರಿಸಿ. ಆ ಮಿಶ್ರಣವು ನಯವಾಗುವವರೆಗೆ ಜ್ಯೂಸರ್‌ನಲ್ಲಿ ಮಿಶ್ರಣ ಮಾಡಿ.

2. ಅದನ್ನು ಗ್ಲಾಸ್‌ಗಳಿಗೆ ಸುರಿಯಿರಿ. ನಂತರ ಸೇವಿಸಿ.

ಇದನ್ನೂ ಓದಿ: Poha Benefits: ಬೆಳಗ್ಗೆ ತಿಂಡಿಗೆ ಅವಲಕ್ಕಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

3. ಸಸ್ಯಾಹಾರಿ ಸ್ಮೂಥಿ:

(ಶೆಫ್ ಕುನಾಲ್ ಕಪೂರ್ ಅವರ ಪಾಕವಿಧಾನ)

ಬೇಕಾಗುವ ಪದಾರ್ಥಗಳು:

– 1 ಕಪ್ ಓಟ್ಸ್

– 2 ಕಪ್ ಐಸ್ ನೀರು

– 1 ದೊಡ್ಡ ಬಾಳೆಹಣ್ಣು

– 2 ಚಮಚ ದಾಲ್ಚಿನ್ನಿ ಪುಡಿ

– 1 ಟೀಸ್ಪೂನ್ ವೆನಿಲ್ಲಾ ಸಾರ

– 1 ಟೀಸ್ಪೂನ್ ಕೋಕೋ ಪೌಡರ್

– 1 ಕಪ್ ಕಡಲೆಕಾಯಿ ಬೆಣ್ಣೆ

– 1 ಟೀಸ್ಪೂನ್ ಸಕ್ಕರೆ

ಮಾಡುವ ವಿಧಾನ:

1. ಸಸ್ಯಾಹಾರಿ ಸ್ಮೂಥಿಯನ್ನು ತಯಾರಿಸಲು ನಾವು ಓಟ್ಸ್ ಹಾಲು ತಯಾರಿಸಬೇಕು.

2. ಮಿಕ್ಸರ್ ಗ್ರೈಂಡರ್​ನಲ್ಲಿ ಓಟ್ಸ್ ಅನ್ನು ಪುಡಿಯಾಗಿ ಮಾಡಿಕೊಳ್ಳಿ. ಅದಕ್ಕೆ ತಣ್ಣಗಾದ ನೀರನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ.

3. ಈಗ ಮಿಕ್ಸರ್ ಗ್ರೈಂಡರ್ ಜಾರ್‌ನಲ್ಲಿ ಬಾಳೆಹಣ್ಣು, ದಾಲ್ಚಿನ್ನಿ ಪುಡಿ, ವೆನಿಲ್ಲಾ, ಕೋಕೋ ಪೌಡರ್, ಕಡಲೆಕಾಯಿ ಬೆಣ್ಣೆ ಮತ್ತು ತಣ್ಣನೆಯ ಓಟ್ಸ್ ಹಾಲು ಸೇರಿಸಿ.

4. ಬಾಳೆಹಣ್ಣು ಸಂಪೂರ್ಣವಾಗಿ ಪೇಸ್ಟ್ ರೀತಿ ಆಗುವ ತನಕ ಅದನ್ನು ಒಟ್ಟಿಗೆ ಮಿಶ್ರಣ ಮಾಡಿ. ನಂತರ ಸೇವಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ