AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Orange Benefits: ಬೆಳಗ್ಗೆ ತಿಂಡಿಯ ಬದಲು ಕಿತ್ತಳೆ ಹಣ್ಣು ತಿನ್ನುವುದರಿಂದಾಗುವ ಅಚ್ಚರಿಯ ಪ್ರಯೋಜನಗಳಿವು

ಕಿತ್ತಳೆ ಹಣ್ಣು ವಿಟಮಿನ್ ಸಿ ಹೇರಳವಾಗಿರುವ ಹಣ್ಣಾಗಿದ್ದು, ನಮ್ಮ ಕಣ್ಣು, ಕೂದಲು, ಮೂಳೆ ಇತ್ಯಾದಿಗಳ ಪೋಷಣೆಗೆ ಉಪಯುಕ್ತವಾಗಿದೆ. ಆದರೆ, ಬೆಳಗ್ಗೆ ಎದ್ದಕೂಡಲೆ ಕಿತ್ತಳೆ ಹಣ್ಣು ತಿನ್ನುವುದರಿಂದಲೂ ಆರೋಗ್ಯಕ್ಕೆ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ?

ಸುಷ್ಮಾ ಚಕ್ರೆ
|

Updated on:Mar 01, 2024 | 12:53 PM

ಬಾಲಿವುಡ್ ನಟಿ ಅನುಷ್ಕಾ ಶರ್ಮ ತಿಂಡಿಯ ಜೊತೆಗೆ ಮುಂಜಾನೆ ಕಿತ್ತಳೆ ಹಣ್ಣು ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ.

1 / 12
ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೆಲವೇ ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ 2ನೇ ಮಗುವಿಗೆ ಅಕಾಯ್ ಕೊಹ್ಲಿ ಎಂದು ನಾಮಕರಣ ಮಾಡಿದ್ದರು. ಫಿಟ್​ನೆಸ್ ಬಗ್ಗೆ ಮೊದಲಿನಿಂದಲೂ ಬಹಳ ಎಚ್ಚರ ವಹಿಸುವ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾಗಲೂ ಹಣ್ಣು, ತರಕಾರಿ, ಡ್ರೈಫ್ರೂಟ್​ಗಳನ್ನು ಒಳಗೊಂಡಿರುವ ಸಸ್ಯಾಹಾರಿ ಡಯೆಟ್ ಅನ್ನೇ ಅನುಸರಿಸಿದ್ದರು.

2 / 12
ಕೆಲವು ಸೆಲಬ್ರಿಟಿಗಳು ಬೆಳಗ್ಗೆ ತಿಂಡಿಗೆ ಓಟ್ಸ್, ಜ್ಯೂಸ್​ಗೆ ಆದ್ಯತೆ ನೀಡಿದರೆ ಅನುಷ್ಕಾ ಶರ್ಮ ತಾಜಾ ಕಿತ್ತಳೆ ಹಣ್ಣುಗಳನ್ನು ತಿನ್ನುತ್ತಾರಂತೆ.

3 / 12
ಬೆಳಗಿನ ಉಪಾಹಾರದಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಕಿತ್ತಳೆ ಹಣ್ಣನ್ನು ಜ್ಯೂಸ್​ ಮಾಡಿಕೊಂಡು ಕುಡಿಯಬಾರದು. ತಾಜಾ ಹಣ್ಣನ್ನು ಸೇವಿಸುವುದರಿಂದ ಪ್ರಯೋಜನಗಳು ಹೆಚ್ಚು.

4 / 12
ಈ ಬಗ್ಗೆ ಫಿಟ್‌ನೆಸ್ ಸಲಹೆಗಾರರು ಕೂಡ ಮಾಹಿತಿ ನೀಡಿದ್ದು, ಬೆಳಗ್ಗೆ ತಿಂಡಿಯ ಬದಲು ಕಿತ್ತಳೆ ಹಣ್ಣು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ, ಜೀರ್ಣಕಾರಿ ಮತ್ತು ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

5 / 12
ಹೀಗಾಗಿ, ಕಿತ್ತಳೆ ಹಣ್ಣನ್ನು ಬೆಳಗ್ಗೆ ತಿನ್ನಲು ಆರಂಭಿಸಿದ ನಂತರ ದೇಹದಲ್ಲಿ ಉತ್ತಮ ರೀತಿಯ ಬದಲಾವಣೆಗಳನ್ನು ಗಮನಿಸಬಹುದು. ನಾನು ಬೆಳಗ್ಗೆ ಕಿತ್ತಳೆ ಹಣ್ಣು ತಿನ್ನತೊಡಗಿದ ನಂತರ ನನಗೆ ಹಲವು ರೀತಿಯಲ್ಲಿ ಸಹಾಯಕವಾಗಿದೆ. ಈಗ ನಾನು ನನ್ನ ಹಣ್ಣುಗಳ ಸೇವನೆಯನ್ನು 3 ಪಟ್ಟು ಹೆಚ್ಚಿಸಿದ್ದೇನೆ ಎಂದು ಫಿಟ್​ನೆಸ್ ತಜ್ಞೆಯೊಬ್ಬರು ಹೇಳಿದ್ದಾರೆ.

6 / 12
ನಾನು ಈಗ ಇತರ ರೀತಿಯ ಹಣ್ಣುಗಳನ್ನು ತಿನ್ನಲು ಪ್ರಯತ್ನಿಸುತ್ತೇನೆ. ವಿಶೇಷವಾಗಿ ಕಿವಿ ಹಣ್ಣು, ಬಾಳೆ ಹಣ್ಣುಗಳು ಮತ್ತು ಪೇರಳೆ ಹಣ್ಣುಗಳನ್ನು ನಾನು ಹೆಚ್ಚು ತಿನ್ನುತ್ತಿದ್ದೇನೆ. ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಈಗ ನನ್ನ ಡಯೆಟ್​ನಲ್ಲಿ ಈ ಹಣ್ಣುಗಳೇ ಮುಖ್ಯ ಸ್ಥಾನ ಪಡೆದಿವೆ ಎಂದು ಅವರು ಹೇಳಿಕೊಂಡಿದ್ದಾರೆ.

7 / 12
ಕಿತ್ತಳೆ ಹಣ್ಣುಗಳು ವಿಟಮಿನ್ ಸಿ ಯಂತಹ ವಿಟಮಿನ್‌ಗಳನ್ನು ಒದಗಿಸುವುದರ ಜೊತೆಗೆ ಫೈಬರ್‌ ಅಂಶವನ್ನೂ ಹೊಂದಿದೆ. ಅದರ ಹೆಚ್ಚಿನ ಅಂಶವು ತಿರುಳಿನಲ್ಲಿರುತ್ತದೆ. ಆದ್ದರಿಂದ ನೀವು ಕಿತ್ತಳೆ ಜ್ಯೂಸ್ ಸೇವಿಸುವುದರ ಬದಲು ಕಿತ್ತಳೆ ಹಣ್ಣನ್ನು ಇಡಿಯಾಗಿ ತಿಂದರೆ ಪ್ರಯೋಜನ ಹೆಚ್ಚು.

8 / 12
ಬೆಳಗಿನ ಉಪಾಹಾರದಲ್ಲಿ ಯಾವುದೇ ರೀತಿಯ ಹಣ್ಣುಗಳನ್ನು ಸೇರಿಸುವುದು ಆರೋಗ್ಯಕರವಾಗಿದ್ದರೂ, ಕಿತ್ತಳೆಗಳು ಸಂತೃಪ್ತಿಕರ ಹಣ್ಣಾಗಿದೆ.

9 / 12
ಇದು ರಕ್ತದಲ್ಲಿನ ಗ್ಲೂಕೋಸ್ ಗರಿಷ್ಠ ಮಟ್ಟವನ್ನು ನಿಯಂತ್ರಿಸುತ್ತವೆ. ಇದರಲ್ಲಿರುವ ವಿಟಮಿನ್ ಸಿ ಚರ್ಮದ ದೃಢತೆಯನ್ನು ಕಾಪಾಡುವ ಕಾಲಜನ್ ಸಂಶ್ಲೇಷಣೆಗೆ ಅವಶ್ಯಕವಾಗಿದೆ.

10 / 12
ಕಿತ್ತಳೆ ಹಣ್ಣಿನಲ್ಲಿ ಕ್ಯಾಲೋರಿಗಳು, ವಿಟಮಿನ್ ಸಿ, ಕಾರ್ಬೋಹೈಡ್ರೇಟ್‌ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಇವೆ.

11 / 12
ಕಿತ್ತಳೆ ಕ್ಯಾರೋಟಿನ್ ಮತ್ತು ವಿಟಮಿನ್ ಎರಡನ್ನೂ ಒಳಗೊಂಡಿರುತ್ತವೆ. ಇದು ಕಣ್ಣಿನ ದೃಷ್ಟಿಗೆ ಒಳ್ಳೆಯದು. ವಿಟಮಿನ್ ಕಾರ್ನಿಯಾವನ್ನು ರಕ್ಷಿಸುತ್ತದೆ. ಮತ್ತೊಂದೆಡೆ, ಕಿತ್ತಳೆ ರಸವು ಬ್ಯಾಕ್ಟೀರಿಯಾ ಅಥವಾ ಸೋಂಕಿನಿಂದ ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

12 / 12

Published On - 12:53 pm, Fri, 1 March 24

Follow us
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ

ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ

ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?

ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್

ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ

ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?

ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ

ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?

ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!

ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು