Oatsmeal: ಓಟ್ಸ್​​​ ಮೀಲ್ ತೂಕ ನಷ್ಟಕ್ಕೆ ಮಾತ್ರವಲ್ಲ, ಚರ್ಮದ ರಕ್ಷಣೆಗೂ ಉತ್ತಮ ಆಯ್ಕೆ..!

| Updated By: ಗಂಗಾಧರ​ ಬ. ಸಾಬೋಜಿ

Updated on: Jun 24, 2022 | 7:02 AM

ಓಟ್ಸ್​​​ ಮೀಲ್​​ ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕ ಆಹಾರವಾಗಿದೆ. ಅದರ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅವು ಚರ್ಮಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ.

Oatsmeal: ಓಟ್ಸ್​​​ ಮೀಲ್ ತೂಕ ನಷ್ಟಕ್ಕೆ ಮಾತ್ರವಲ್ಲ, ಚರ್ಮದ ರಕ್ಷಣೆಗೂ ಉತ್ತಮ ಆಯ್ಕೆ..!
ಪ್ರಾತಿನಿಧಿಕ ಚಿತ್ರ
Follow us on

ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರೊಂದಿಗೆ ಕ್ಯಾನ್ಸರ್‌ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುವುದು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವಂತಹ ಹಲವಾರು ಪ್ರಯೋಜನಗಳಿವೆ ಎಂಬುದು ಓಟ್ಸ್​​​ ಮೀಲ್ (Oatsmeal) ಸೇವನೆಯಿಂದ ತಿಳಿದುಬಂದಿದೆ. ವಾಸ್ತವವಾಗಿ ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್​ನ್ನು ಹೊಂದಿದ್ದು, ಓಟ್ಸ್​​ ಮೀಲ್ ತಿಂದ ನಂತರ ಹೊಟ್ಟೆ ತುಂಬಾ ಹೊತ್ತು ತುಂಬಿದ ಅನುಭವವಾಗುತ್ತದೆ. ಇದರಿಂದಾಗಿ ತೂಕ ಕಡಿಮೆ ಮಾಡಿಕೊಳ್ಳಲು ಸಹ ಸಹಕಾರಿಯಾಗಿದೆ. ಆದರೆ ಇದು ಚರ್ಮವನ್ನು ಹಾನಿಯಾಗದಂತೆ ಸಹಾಯ ಮಾಡುತ್ತದೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಓಟ್ಸ್​ ಮೀಲ್ ಸೇವನೆಯು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಬೀಟಾ ಗ್ಲುಕನ್ (ನೀರನ್ನು ಹೀರಿಕೊಳ್ಳುತ್ತದೆ), ಆಂಟಿ-ಆಕ್ಸಿಡೆಂಟ್ ಆಗಿರುವ ಫಿನಾಲ್ ಇರುವುದರಿಂದ ಚರ್ಮವನ್ನು ಸ್ವಚ್ಛವಾಗಿಡಲು ಸಹಾಯ ಮಾಡುವ ಸಪೋನಿನ್ ಅಂಶಗಳಿವೆ. ಓಟ್ಸ್​ ಮೀಲ್ ಚರ್ಮಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯಿರಿ.

ನೀರಿನಂಶ ಕಡಿಮೆ ಮಾಡುತ್ತದೆ:

ಮುಂಜಾನೆ ಓಟ್ಸ್ ಅಥವಾ ಗಂಜಿ ಸೇವಿಸುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರೊಂದಿಗೆ, ಮುಖದ ಮೇಲೆ, ಕಣ್ಣುಗಳ ಕೆಳಗೆ ಊತ ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು. ಅದಕ್ಕಾಗಿಯೇ ಇದನ್ನು ಉತ್ತಮ ಬ್ರೇಕ್ ಫಾಸ್ಟ್ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.

ಚರ್ಮದ ಶುದ್ಧೀಕರಣ:

ಓಟ್ಸ್​ ಮೀಲ್‌ನಲ್ಲಿರುವ ಸಪೋನಿನ್‌ಗಳು ಚರ್ಮದ ಶುದ್ಧೀಕರಣ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ರೀತಿ ಓಟ್ಸ್​​​ ಮೀಲ್ ಸೇವನೆಯಿಂದ ಚರ್ಮ ಕೊಳೆಯಿಂದ ದೂರ ಉಳಿದು ಸ್ವಚ್ಛವಾಗಿರುತ್ತದೆ. ನೀವು ಚರ್ಮದ ಮೇಲಿನ ಕಲೆಗಳನ್ನು ಸಹ ಹೋಗಲಾಡಿಸಬಹುದು.

ಎಣ್ಣೆಯುಕ್ತ ಚರ್ಮಕ್ಕೆ ಉತ್ತಮ:

ಓಟ್ಸ್​​ ಮೀಲ್​ನ್ನು ಮುಲ್ತಾನಿ ಮಿಟ್ಟಿಯೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿ ಹಚ್ಚಿದರೆ, ಅದು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಈ ಫೇಸ್ ಪ್ಯಾಕ್​ನ್ನು ಟ್ರೈ ಮಾಡಬಹುದು.

ಒಣ ಚರ್ಮಕ್ಕೆ ಮುಕ್ತಿ:

ಎರಡು ಚಮಚ ಓಟ್ಸ್​​ ಮೀಲ್, ಒಂದು ಮೊಟ್ಟೆ, ನಿಂಬೆ ಮತ್ತು ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ತ್ವಚೆಗೆ  ಹಚ್ಚುವುದರಿಂದ ಒಣ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಬಹುದು. ಏಕೆಂದರೆ ಈ ಪ್ಯಾಕ್ ತ್ವಚೆಗೆ ಹೈಡ್ರೇಟಿಂಗ್ ಗುಣಗಳನ್ನು ಒದಗಿಸುತ್ತದೆ. ಈ ಫೇಸ್ ಪ್ಯಾಕ್ ಮಳೆಗಾಲದಲ್ಲಿ ತುಂಬಾ ಉಪಯುಕ್ತವಾಗಿದೆ. ಏಕೆಂದರೆ ಈ ಸಮಯದಲ್ಲಿ ಅನೇಕ ಜನರು ಒಣ ತ್ವಚೆಯ ಸಮಸ್ಯೆಯನ್ನು ಎದುರಿಸುತ್ತಾರೆ.

ಇದನ್ನೂ ಓದಿ: chameleon changes colour: ಮೈಬಣ್ಣ ಬದಲಿಸುವ ಊಸರವಳ್ಳಿಯ ಒಳಗುಟ್ಟು ಏನು ಗೊತ್ತಾ..!