Independence Day Special : ಸ್ವಾತಂತ್ರ್ಯ ದಿನದಂದು ಈ ಕೆಟ್ಟ ಅಭ್ಯಾಸಗಳನ್ನು ದೂರು ಮಾಡಿ, ಆರೋಗ್ಯಕ್ಕೆ ಹೆಚ್ಚು ಗಮನ ನೀಡಿ

ಈ ಬಾರಿಯ ಸ್ವಾತಂತ್ರ್ಯ ದಿನದಂದು ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ಮುಕ್ತರಾಗುವ ಮೂಲಕ ಆರೋಗ್ಯಕರ ಜೀವನವನ್ನು ಪಾಲಿಸಿ. ಇದರಿಂದ ದೀರ್ಘಕಾಲದವರೆಗೆ ನೀವು ಆರೋಗ್ಯಕರವಾಗಿ ಜೀವಿಸಬಹುದು.

Independence Day Special : ಸ್ವಾತಂತ್ರ್ಯ ದಿನದಂದು ಈ ಕೆಟ್ಟ ಅಭ್ಯಾಸಗಳನ್ನು ದೂರು ಮಾಡಿ, ಆರೋಗ್ಯಕ್ಕೆ ಹೆಚ್ಚು ಗಮನ ನೀಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 15, 2023 | 11:13 AM

ಭಾರತವು ತನ್ನ 77ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದೆ. ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ತಾಯ್ನಾಡನ್ನು ಬ್ರಿಟೀಷರ ಕೈವಶದಿಂದ ಮುಕ್ತಗೊಳಿಸಿ, ಭಾರತವನ್ನು ಸ್ವತಂತ್ರಗೊಳಿಸಿದ್ದಾರೆ. ಆದರೆ ಅದೇ ಪುಣ್ಯ ಭೂಮಿಯಲ್ಲಿರುವ ನಾವು ಇಂದಿಗೂ ಒಂದಲ್ಲ ಒಂದು ಕೆಟ್ಟ ಅಭ್ಯಾಸದ ಸೆರೆಯಲ್ಲಿದ್ದೇವೆ. ಈ ಕೆಟ್ಟ ಅಭ್ಯಾಸಗಳು ನಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು ಮತ್ತು ನಮ್ಮನ್ನು ನಿಷ್ಪ್ರಯೋಜಕರನ್ನಾಗಿ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ಅಭ್ಯಾಸಗಳಿಂದ ಮುಕ್ತಿ ಪಡೆಯಲು ಆಗಸ್ಟ್ 15 ಕ್ಕಿಂತ ಉತ್ತಮ ಅವಕಾಶ ಇನ್ನೊಂದಿಲ್ಲ. ಬನ್ನಿ ಈ ಸ್ವಾತಂತ್ರ್ಯ ದಿನದಂದು ಈ ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ಮುಕ್ತಿ ಪಡೆಯುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿ.

ಈ ಕೆಟ್ಟ ಅಭ್ಯಾಸಗಳಿಗೆ ವಿದಾಯ ಹೇಳಿ:

ಕಡಿಮೆ ನೀರು ಕುಡಿಯುವುದು:

ನಿಮಗೂ ಕಡಿಮೆ ನೀರು ಕುಡಿಯುವ ಅಭ್ಯಾಸವಿದ್ದರೆ, ಈ ಸ್ವಾತಂತ್ರ್ಯ ದಿನದಂದು ಈ ಅಭ್ಯಾಸಕ್ಕೆ ವಿದಾಯ ಹೇಳಿ. ಇಲ್ಲದಿದ್ದರೆ ನೀರಿನ ಕೊರತೆಯಿಂದ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಕಡಿಮೆ ನೀರು ಕುಡಿಯುವವರಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಪಾಯ ಹೆಚ್ಚಿರುವುದು ಅಧ್ಯಯನಗಳಲ್ಲಿ ಕಂಡುಬಂದಿದೆ. ವಾಸ್ತವವಾಗಿ ನೀವು ಕಡಿಮೆ ನೀರನ್ನು ಸೇವಿಸಿದಾಗ ರಕ್ತವು ದಪ್ಪವಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ರಕ್ತದ ಹರಿವಿನ ಸಂದರ್ಭದಲ್ಲಿ ಹೆಚ್ಚು ಒತ್ತಡ ಉಂಟಾಗುತ್ತದೆ. ಅಲ್ಲದೆ ಕಡಿಮೆ ನೀರು ಕುಡಿಯುವುದರಿಂದ ಚರ್ಮದ ಶುಷ್ಕತೆ, ಒತ್ತಡದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿನಿತ್ಯ ಎರಡರಿಂದ ರಿಂದ ಮೂರು ಲೀಟರ್ ನೀರು ಕುಡಿಯುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ.

ವ್ಯಾಯಾಮ ಮಾಡದಿರುವುದು:

ವ್ಯಾಯಾಮ ಮಾಡುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ದೇಹದ ತೂಕವನ್ನು ನಿಯಂತ್ರಣದಲ್ಲಿಡಬಹುದು, ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಬಹುದು. ಮಧುಮೇಹ, ಹೃದ್ರೋಗ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಯನ್ನು ತಡೆಗಟ್ಟಬಹುದು. ಅಲ್ಲದೆ ವ್ಯಾಯಾಮವು ಇದು ರಕ್ತ ಸಂಚಾರವನ್ನು ಸುಗಮಗೊಳಿಸುವುದು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯವನ್ನು ಸಮತೋಲನದಲ್ಲಿಡಬಹುದು.

ಕಡಿಮೆ ನಿದ್ರೆ ಮಾಡುವುದು:

ನೀವು ತಡರಾತ್ರಿಯ ವರೆಗೆ ಎಚ್ಚರವಿದ್ದೂ, ಕಡಿಮೆ ಪ್ರಮಾಣದಲ್ಲಿ ನಿದ್ದೆ ಪಡೆಯುತ್ತಿದ್ದರೆ, ಈ ಅಭ್ಯಾಸವನ್ನು ಬಿಟ್ಟುಬಿಡಿ. ಏಕೆಂದರೆ ದೀರ್ಘಾಯುಷ್ಯ ಪಡೆಯಲು ಮತ್ತು ಕಾಯಿಲೆಗಳಿಂದ ದೂರವಿರಲು ಒಬ್ಬ ಮನುಷ್ಯನಿಗೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಬಹಳ ಅವಶ್ಯಕ. ನಿದ್ರೆಯ ಕೊರತೆಯು ಸ್ಮರಣೆ ಮತ್ತು ಏಕಾಗ್ರತೆಯ ಕುಸಿತಕ್ಕೆ ಕಾರಣವಾಗಬಹುದು. ಇದಲ್ಲದೆ ನಿದ್ರಾಹೀನತೆಯಿಂದ ಒತ್ತಡದ ಹಾರ್ಮೋನು ಕಾರ್ಟಿಸೋಲ್ ಸ್ರವಿಸುವಿಕೆಯು ಹೆಚ್ಚಾಗುವುದರಿಂದ ಮತ್ತು ಫೀಲ್ ಗುಡ್ ಹಾರ್ಮೋನು ಉತ್ಪಾದನೆ ಕಡಿಮೆಯಾಗುವುದರಿಂದ ನೀವು ಖಿನ್ನತೆಗೆ ಬಲಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಈ ಬಾರಿಯ ಸ್ವಾತಂತ್ರ್ಯ ದಿನದಂದು ಮನೆಯಲ್ಲಿಯೇ ತಯಾರಿಸಿ ತ್ರಿವರ್ಣ ಪಲಾವ್

ಕೆಫಿನ್ ಸೇವನೆ:

ನೀವು ಸಹ ಚಹಾ ಮತ್ತು ಕಾಫಿಯನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದರೆ, ಈ ಅಭ್ಯಾಸವನ್ನು ಬಿಟ್ಟುಬಿಡಿ. ಇದು ನಿದ್ರಾಹೀನತೆ, ಎದೆಯುರಿ, ತಲೆನೋವು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಲ್ಲದೆ ಜೀರ್ಣಕ್ರಿಯೆಯ ಸಮಸ್ಯೆಗಳು ಮತ್ತು ಅಧಿಕರಕ್ತದೊತ್ತಡದಂತಹ ಸಮಸ್ಯೆಗಳಿಗೂ ಇದು ಕಾರಣವಾಗಬಹುದು. ಹಾಗಾಗಿ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಕೆಫಿನ್ ಸೇವನೆಯನ್ನು ಮಿತಿಗೊಳಿಸಿ.

ಜಂಕ್ ಫುಡ್ ಸೇವನೆಯನ್ನು ನಿಲ್ಲಿಸಿ:

ಬೀದಿ ಬದಿಯ ಆಹಾರಗಳು, ಜಂಕ್ ಫುಡ್ ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಅನೇಕರು ಇಂತಹ ಆಹಾರಗಳನ್ನು ಹೆಚ್ಚು ಸೇವನೆ ಮಾಡುತ್ತಾರೆ. ಇದು ನಿಮ್ಮ ದೇಹದ ಚಯಾಪಚಯಕ್ರಿಯೆಯನ್ನು ಹಾಳು ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ , ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಅಪಾಯವೂ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ ಇದರ ಅತಿಯಾದ ಸೇವನೆ ದೇಹದಲ್ಲಿ ಬೊಜ್ಜು ಉತ್ಪಾದನೆಗೆ ಕಾರಣವಾಗಬಹುದು. ಹಾಗಾಗಿ ಯಾವಾಗಲೂ ಸಮತೋಲಿತ ಆಹಾರವನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಧೂಮಪಾನವನ್ನು ತ್ಯಜಿಸಿ:

ಈ ಸ್ವಾತಂತ್ರ್ಯದ ದಿನದಂದು ಧೂಮಪಾನದ ಚಟಕ್ಕೆ ನಾಂದಿ ಹಾಡಿ. ಮದ್ಯಪಾನ ಮತ್ತು ದೂಮಪಾನದಿಂದ ಕ್ಯಾನ್ಸರ್ ಸೇರಿದಂತೆ ಹಲವಾರು ಮಾರಣಾಂತಿಕ ಕಾಯಿಲೆಗಳು ಉಂಟಾಗುತ್ತದೆ. ಆದ್ದರಿಂದ ಈ ಸ್ವಾತಂತ್ರ್ಯ ದಿನದಂದು ಈ ಕೆಟ್ಟ ಚಟದಿಂದ ಮುಕ್ತಿ ಪಡೆದು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ