Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day Special Recipe: ಈ ಬಾರಿಯ ಸ್ವಾತಂತ್ರ್ಯ ದಿನದಂದು ಮನೆಯಲ್ಲಿಯೇ ತಯಾರಿಸಿ ತ್ರಿವರ್ಣ ಪಲಾವ್

ಭಾರತದ ಜನಪ್ರಿಯ ಖಾದ್ಯಗಳಲ್ಲಿ ಪಲಾವ್ ಕೂಡ ಒಂದು. ಈ ಬಾರಿಯ ಸ್ವಾತಂತ್ರ್ಯ ದಿನದ ವಿಶೇಷವಾಗಿ ನೀವು ತ್ರಿವರ್ಣ ಪಲಾವ್ ತಯಾರಿಸಿ ಮನೆಮಂದಿಗೆಲ್ಲಾ ಬಡಿಸಬಹುದು. ಈ ಪಲಾವ್ ರೆಸಿಪಿಯ ಪಾಕವಿಧಾನ ಇಲ್ಲಿದೆ.

Independence Day Special Recipe: ಈ ಬಾರಿಯ ಸ್ವಾತಂತ್ರ್ಯ ದಿನದಂದು ಮನೆಯಲ್ಲಿಯೇ ತಯಾರಿಸಿ ತ್ರಿವರ್ಣ ಪಲಾವ್
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 14, 2023 | 4:27 PM

ಈ ವರ್ಷ ಭಾರತವು ತನ್ನ 76ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯನ್ನು ಗೃಹಿಣಿಯರು ಕೂಡಾ ಮನೆಯಲ್ಲಿಯೇ ವಿಶೇಷವಾಗಿ ಆಚರಿಸಬಹುದು. ನೀವು ಸಹ ಮನೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿವಸವನ್ನು ವಿಶೇಷವಾಗಿ ಆಚರಿಸಲು ಬಯಸಿದರೆ ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಪಲಾವ್ ರೆಸಿಪಿ ತಯಾರಿಸಿ, ಮನೆಮಂದಿಗೆ ಬಡಿಸಿ. ತ್ರಿವರ್ಣ ಪಲಾವ್ ರೆಸಿಪಿಯ ಸುಲಭ ಪಾಕವಿಧಾನದ ಮಾಹಿತಿ ಇಲ್ಲಿದೆ.

ತ್ರಿವರ್ಣ ಬಣ್ಣದ ಪಲಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು

3 ಕಪ್ ಬಾಸ್ಮತಿ ಅಕ್ಕಿ

6 ಲವಂಗ

1 ಕಪ್ ಕಿತ್ತಳೆ ರಸ

ಸಣ್ಣಗೆ ಹೆಚ್ಚಿದ ಈರುಳ್ಳಿ

50 ಗ್ರಾಂ ಕೊತ್ತಂಬರಿ ಸೊಪ್ಪು

1 ಚಮಚ ತೆಂಗಿನಕಾಯಿ ತುರಿ

1 ಕಪ್ ತುರಿದ ಪನೀರ್

2 ಇಂಚು ದಾಲ್ಚಿನ್ನಿ ತುಂಡು

3 ರಿಂದ 4 ಏಲಕ್ಕಿ

1 ಕ್ಯಾರೆಟ್

ತುಪ್ಪ

3 ರಿಂದ 4 ಹಸಿ ಮೆಣಸಿನಕಾಯಿ

2 ರಿಂದ 3 ಬೆಳ್ಳುಳ್ಳಿ

ಸ್ವಲ್ಪ ಶುಂಠಿ

1/2 ಕಪ್ ಹಸಿ ಬಟಾಣಿ

ರುಚಿಗೆ ತಕ್ಕಷ್ಟು ಉಪ್ಪು

ಕೇಸರಿ ಬಣ್ಣ

ತ್ರಿವರ್ಣ ಪಲಾವ್ ಮಾಡುವ ವಿಧಾನ

ತ್ರಿವರ್ಣ ಪಲಾವ್ ಮಾಡಲು ಮೊದಲು ಬಾಸ್ಮತಿ ಅಕ್ಕಿಯನ್ನು ಎರಡು ಭಾಗಗಳಾಗಿ ವಿಂಗಡಿಸಿ, ಒಂದು ಭಾಗದಲ್ಲಿ 2 ಕಪ್ ಅಕ್ಕಿ ಮತ್ತು ಇನ್ನೊಂದು ಭಾಗದಲ್ಲಿ 1 ಕಪ್ ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ಪ್ರತ್ಯೇಕವಾಗಿ ನೆನೆಯಲು ಬಿಡಿ.

ಈಗ ಬಾಣಲೆಯಲ್ಲಿ 1 ಚಮಚ ತುಪ್ಪವನ್ನು ಬಿಸಿ ಮಾಡಿ, ಲವಂಗ, ದಾಲ್ಚಿನ್ನಿ ಏಲಕ್ಕಿ ಹಾಕಿ ಸ್ವಲ್ಪ ಹುರಿಯಿರಿ. ಈಗ ಅದಕ್ಕೆ 2 ಕಪ್ ಅಕ್ಕಿ ಸೇರಿಸಿ 2 ನಿಮಿಷ ಹುರಿಯಿರಿ. ನಂತರ 2 ಅಕ್ಕಿಗೆ 4 ಕಪ್ ನೀರು ಸೇರಿಸಿ ಮತ್ತು ಅನ್ನವನ್ನು ಬೇಯಿಸಿ. ಕುಕ್ಕರ್​​ನಲ್ಲಿಯೂ ಈ ಅನ್ನವನ್ನು ನೀವು ಬೇಯಿಸಬಹುದು. ಬೆಂದ ನಂತರ ಅನ್ನವನ್ನು ಪಕ್ಕಕ್ಕೆ ಇಟ್ಟುಬಿಡಿ.

ಕೇಸರಿ ಪಲಾವ್:

ಒಂದು ಬಾಣಲೆಗೆ ತುಪ್ಪ ಹಾಕಿ ಅದರಲ್ಲಿ ತುರಿದ ಕ್ಯಾರೆಟ್ ಹುರಿಯಿರಿ ನಂತರ ಮೊದಲೇ ನೆನೆಸಿಟ್ಟ 1 ಕಪ್ ಅಕ್ಕಿ ಸೇರಿಸಿ. ಈಗ ಅದಕ್ಕೆ ಕಿತ್ತಳೆ ರಸ, ಒಂದು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು 7 ರಿಂದ 8 ಹನಿ ಕೇಸರಿ ಬಣ್ಣವನ್ನು ಸೇರಿಸಿ ಅನ್ನವನ್ನು ಬೇಯಿಸಿದರೆ ಕೇಸರಿ ಪಲಾವ್ ಕೂಡ ರೆಡಿ.

ಬಿಳಿ ಪಲಾವ್ ಮಾಡಲು:

ಬಿಳಿ ಬಣ್ಣದ ಪಲಾವ್ ಮಾಡಲು ಮೊದಲು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅದಕ್ಕೆ ತುರಿದ ಪನ್ನೀರ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಈಗ ಅದಕ್ಕೆ 1 ಕಪ್ ಬೇಯಿಸಿದ ಅನ್ನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಬಿಳಿ ಬಣ್ಣದ ಪಲಾವ್ ಸಿದ್ಧ.

ಹಸಿರು ಪಲಾವ್:

ಹಸಿರು ಬಣ್ಣದ ಪಲಾವ್ ಮಾಡಲು ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿಯನ್ನು ಒಂದು ಮಿಕ್ಸಿ ಜಾರ್ ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಣಲೆಯಲ್ಲಿ ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ ಮತ್ತು ಮೊದಲೇ ತಯಾರಿಸಿಟ್ಟ ಕೊತ್ತಂಬರಿ ಸೊಪ್ಪು ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಬೇಯಿಸಿಕೊಳ್ಳಿ. ಈಗ ಅದಕ್ಕೆ ಹಸಿ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಬೇಯಲು ಬಿಟ್ಟುಬಿಡಿ. ಬಟಾಣಿ ಬೆಂದ ನಂತರ ಅದಕ್ಕೆ ಒಂದು ಕಪ್ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಹಸಿರು ಬಣ್ಣದ ಪಲಾವ್ ರೆಡಿ.

ಇದನ್ನೂ ಓದಿ: ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮುನ್ನ ಈ ಕ್ರಮಗಳನ್ನು ಗಮನಿಸಿ

ಕೊನೆಯಲ್ಲಿ ತ್ರಿವರ್ಣ ಪಲಾವ್ ಬಡಿಸುವುದು ಹೇಗೆ?

ದೊಡ್ಡ ಪಾತ್ರೆಯಲ್ಲಿ ತುಪ್ಪ ಹಾಕಿ ಅದಕ್ಕೆ ಮೊದಲು ಕೇಸರಿ ಬಣ್ಣದ ಅನ್ನವನ್ನು ಸೇರಿಸಿ ಅದರ ಮೇಲೆ ತುರಿದ ಪನೀರ್ ಹಾಕಿ. ನಂತರ ಅದರ ಮೇಲೆ ಬಿಳಿ ಬಣ್ಣದ ಅನ್ನವನ್ನು ಹರಡಿ. ಮತ್ತೊಮ್ಮೆ ತುರಿದ ಪನೀರ್​​​ನ್ನು ಬಿಳಿ ಅನ್ನದ ಮೇಲೆ ಹರಡಿ. ಈಗ ಹಸಿರು ಬಣ್ಣದ ಅನ್ನವನ್ನು ಸೇರಿಸಿ ಅದರ ಮೇಲೂ ತುರಿದ ಪನೀರ್ ಸೇರಿಸಿ. ಈಗ ಈ ಮಿಶ್ರಣವನ್ನು 10 ನಿಮಿಷಗಳ ಕಾಲ ಕಡಿಮೆ ಹುರಿಯಲ್ಲಿ ಬೇಯಲು ಬಿಡಿ. ಬಳಿಕ ಸ್ಟವ್ ಆಫ್ ಮಾಡಿ. ತ್ರಿವರ್ಣ ಪಲಾವ್ ನ್ನು ರೈತಾ ದೊಂದಿಗೆ ಬಡಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್