ರೊಟ್ಟಿ ತಿನ್ನುವಾಗ ಎಷ್ಟು ತಿಂದೆ ಎಂದು ಲೆಕ್ಕ ಹಾಕುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ, ಇದರ ಹಿಂದೆ ಈ ಕಾರಣವಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: May 24, 2024 | 9:36 AM

ಅಡುಗೆ ಮನೆಯಲ್ಲಿ ರೊಟ್ಟಿ ತಯಾರಿಸುವಾಗ ಅದನ್ನು ಲೆಕ್ಕ ಹಾಕಬಾರದು ಎಂಬ ನಂಬಿಕೆ ಇದೆ. ಏಕೆಂದರೆ ಇದು ಒಬ್ಬ ವ್ಯಕ್ತಿಗೆ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಜೊತೆಗೆ ಸಂತೋಷ ಮತ್ತು ಅದೃಷ್ಟ ತರಲು ಸಹಾಯ ಮಾಡುತ್ತದೆ. ಇದನ್ನು ನಿರ್ಲಕ್ಷಿಸಿದರೆ, ಅವರು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ರೊಟ್ಟಿ ತಿನ್ನುವಾಗ ಎಷ್ಟು ತಿಂದೆ ಎಂದು ಲೆಕ್ಕ ಹಾಕುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ, ಇದರ ಹಿಂದೆ ಈ ಕಾರಣವಿದೆ
Follow us on

ಹಿಂದೂ ಧರ್ಮದಲ್ಲಿ, ಅಡುಗೆಮನೆಯನ್ನು ಬಹಳ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ, ಅದರಲ್ಲಿಯೂ ತಿನ್ನುವುದರಿಂದ ಹಿಡಿದು ಮಲಗುವವರೆಗೆ ನಾವು ಹತ್ತಾರು ನಿಯಮಗಳನ್ನು ಅನುಸರಿಸಿಕೊಂಡು ಬಂದಿರುತ್ತೇವೆ. ಈ ರೀತಿ ಮಾಡುವುದರಿಂದ ವ್ಯಕ್ತಿಯು ಶುಭ ಫಲಿತಾಂಶಗಳನ್ನು ಮತ್ತು ಯಶಸ್ಸನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ರೊಟ್ಟಿ ತಯಾರಿಸುವಾಗ ಅದನ್ನು ಲೆಕ್ಕ ಹಾಕಬಾರದು ಎಂಬ ನಂಬಿಕೆ ಇದೆ. ಏಕೆಂದರೆ ಇದು ಒಬ್ಬ ವ್ಯಕ್ತಿಗೆ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಜೊತೆಗೆ ಸಂತೋಷ ಮತ್ತು ಅದೃಷ್ಟ ತರಲು ಸಹಾಯ ಮಾಡುತ್ತದೆ. ಇದನ್ನು ನಿರ್ಲಕ್ಷಿಸಿದರೆ, ಅವರು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹಿಂದೂ ಧರ್ಮದಲ್ಲಿರುವ ನಂಬಿಕೆಯ ಪ್ರಕಾರ, ಏಕಾದಶಿ ಉಪವಾಸದ ಸಮಯದಲ್ಲಿ ಅನ್ನ ಮತ್ತು ಅದರಿಂದ ತಯಾರಿಸಿದ ಆಹಾರಗಳನ್ನು ಸೇವನೆ ಮಾಡುವುದನ್ನು ನಿಷೇಧಿಸಿರುವಂತೆ, ದೀಪಾವಳಿ, ಹುಣ್ಣಿಮೆ, ಅಷ್ಟಮಿ, ನಾಗಪಂಚಮಿ ಮತ್ತು ಮನೆಯಲ್ಲಿ ಯಾರಾದರೂ ಮರಣ ಹೊಂದಿದರೆ ಅಂತವರ ಮನೆಯಲ್ಲಿ ರೊಟ್ಟಿ ತಯಾರಿಸಬಾರದು ಎನ್ನಲಾಗುತ್ತದೆ. ಈ ನಿಯಮವನ್ನು ನಿರ್ಲಕ್ಷಿಸಿದರೆ ತಾಯಿ ಅನ್ನಪೂರ್ಣೆ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ಜೊತೆಗೆ ಜೀವನದಲ್ಲಿ ಹಣ ಮತ್ತು ಆಹಾರದ ಕೊರತೆ ಉಂಟಾಗುತ್ತದೆ ಎನ್ನಲಾಗುತ್ತದೆ.

ರೊಟ್ಟಿ ತಯಾರಿಸುವ ಮೊದಲು, ಕುಟುಂಬ ಸದಸ್ಯರು ಎಷ್ಟು ರೊಟ್ಟಿ ತಿನ್ನುತ್ತಾರೆ ಎಂದು ಕೇಳುವ ಅಭ್ಯಾಸ ಅಥವಾ ರೊಟ್ಟಿ ತಿನ್ನುವಾಗ ಅದನ್ನು ಎಣಿಸುವುದನ್ನು ಮಾಡಬಾರದು. ಹಿಂದೂ ನಂಬಿಕೆಯಲ್ಲಿ ಇದನ್ನು ಅಶುಭ ಎನ್ನಲಾಗುತ್ತದೆ. ರೊಟ್ಟಿ ಅಥವಾ ಇನ್ನಿತರ ಆಹಾರಗಳು ಸೂರ್ಯ ದೇವನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಹಾಗಾಗಿ ಈ ರೀತಿ ಮಾಡುವುದರಿಂದ ಜೀವನದಲ್ಲಿ ಸೂರ್ಯ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ರೊಟ್ಟಿ ಎಣಿಸುವ ಅಭ್ಯಾಸವನ್ನು ಬಿಟ್ಟುಬಿಡಿ.

ಇದನ್ನೂ ಓದಿ: ವಿಶ್ವದ ಮೊದಲ ‘ಓಂ’ ಆಕಾರದ ದೇವಾಲಯ ಎಲ್ಲಿದೆ ಗೊತ್ತಾ?

ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು!

ಧಾರ್ಮಿಕ ನಿಯಮಗಳ ಜೊತೆಗೆ, ಕೆಲವು ವಾಸ್ತು ನಿಯಮಗಳನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ರೊಟ್ಟಿ ತಯಾರಿಸುವಾಗ ಅಥವಾ ಇನ್ನಿರತ ಅಡುಗೆಗಳನ್ನು ಮಾಡುವಾಗ, ನೀವು ರೊಟ್ಟಿ ಬೇಯಿಸುವ ಒಲೆ ಯಾವಾಗಲೂ ಆಗ್ನೇಯ ಮೂಲೆಯಲ್ಲಿ ಅಂದರೆ ನಿಮ್ಮ ಅಡುಗೆಮನೆಯ ಆಗ್ನೇಯ ದಿಕ್ಕಿನಲ್ಲಿರಬೇಕು. ಅಲ್ಲದೆ, ರೊಟ್ಟಿ ಮಾಡುವಾಗ, ನಿಮ್ಮ ಮುಖವು ಪೂರ್ವದ ಕಡೆಗೆ ಇರಬೇಕು.

ಅನೇಕ ವರ್ಷಗಳಿಂದ ನಡೆದು ಬಂದ ಸಂಪ್ರದಾಯ!

ಹಿಂದೂ ಧರ್ಮದ ಪ್ರಕಾರ, ಅಡುಗೆಮನೆಯಲ್ಲಿ ತಯಾರಿಸಿದ ಮೊದಲ ರೊಟ್ಟಿಯನ್ನು ಯಾವಾಗಲೂ ಹಸುವಿಗೆ ನೀಡುವ ಸಂಪ್ರದಾಯವಿದೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಮನೆಯಲ್ಲಿ ಹಸು ಇಲ್ಲದಿದ್ದರೆ, ಮೊದಲ ರೊಟ್ಟಿಯನ್ನು ನಾಯಿಗೂ ನೀಡಬಹುದು. ಈ ಪರಿಹಾರವನ್ನು ಅನುಸರಿಸುವುದರಿಂದ ಮನೆಯಲ್ಲಿರುವ ಯಾವುದೇ ರೀತಿ ತೊಂದರೆಗಳಿದ್ದರೂ ಪರಿಹಾರವಾಗುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:30 am, Fri, 24 May 24