AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Brothers Day 2024 : ಅಣ್ಣನ ಪ್ರತಿ ಕ್ಷಣವನ್ನು ಹೀಗೆ ಸಂಭ್ರಮಿಸಿ, ಅವನಿಗೆ ಈ ದಿನ ವಿಶೇಷ

ಪ್ರತಿ ವರ್ಷ ಮೇ 24ರಂದು ಯುನೈಟೆಡ್ ಸ್ಟೇಟ್ಸ್‌, ಭಾರತ, ಜರ್ಮನ್ ಸೇರಿದಂತೆ ಇನ್ನಿತ್ತರ ದೇಶಗಳಲ್ಲಿ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಇದು ಸಹೋದರರ ಮೇಲಿನ ಪ್ರೀತಿ ಹಾಗೂ ವ್ಯಾತ್ಸಲ್ಯದ ಮಹತ್ವವನ್ನು ತೋರಿಸುವ ದಿನವಾಗಿದೆ. ಈ ರಾಷ್ಟ್ರೀಯ ಸಹೋದರರ ದಿನದ ಇತಿಹಾಸ ಮತ್ತು ಮಹತ್ವದ ಬಗೆಗಿನ ಮಾಹಿತಿ ಇಲ್ಲಿದೆ.

National Brothers Day 2024 : ಅಣ್ಣನ ಪ್ರತಿ ಕ್ಷಣವನ್ನು ಹೀಗೆ ಸಂಭ್ರಮಿಸಿ, ಅವನಿಗೆ ಈ ದಿನ ವಿಶೇಷ
ಸಾಯಿನಂದಾ
| Edited By: |

Updated on: May 23, 2024 | 6:13 PM

Share

ಅಪ್ಪನ ದಿನ, ಅಮ್ಮನ ದಿನ, ಶಿಕ್ಷಕರ ದಿನ, ಸ್ನೇಹಿತರ ದಿನ, ಪ್ರೇಮಿಗಳ ದಿನ ಹೀಗೆ ಒಂದಲ್ಲ ಒಂದು ಸಂಬಂಧಕ್ಕೂ ಒಂದೊಂದು ದಿನವನ್ನು ಮೀಸಲಾಗಿಡಲಾಗಿದೆ. ಜೀವನದಲ್ಲಿ ಜೊತೆಯಾಗುವ ಸಂಬಂಧಗಳಲ್ಲಿ ಒಡಹುಟ್ಟಿದವರು ಕೂಡ ಪ್ರಮುಖ ಪಾತ್ರವಹಿಸುತ್ತಾರೆ. ಪ್ರಪಂಚದ ಎಲ್ಲಾ ಸಂಬಂಧಗಳಲ್ಲಿ ಸಹೋದರರ ಸಂಬಂಧವು ತುಂಬಾ ವಿಶೇಷವಾಗಿದೆ. ಈ ಸಂಬಂಧದಲ್ಲಿ ದ್ವೇಷ, ಜಗಳ, ಕೋಪದ ಜೊತೆಗೆ ವಿವರಿಸಲಾಗದ ಪ್ರೀತಿಯು ಇರುತ್ತದೆ. ಕಷ್ಟ ಸುಖಗಳಿಗೆ ಜೊತೆಯಾಗುವ ಸಹೋದರ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಡಹುಟ್ಟಿದವರು ಮಾತ್ರ ಅಣ್ಣ ತಮ್ಮಂದಿರು ಆಗಬೇಕಾಗಿಲ್ಲ. ಮನಸ್ಸಿನಲ್ಲಿ ನಿಷ್ಕಲ್ಮಶ ಭಾವನೆಯಿಂದ ಕಾಳಜಿ ವಹಿಸುವವರು ಸಹೋದರರೇ. ಈ ಸಂಬಂಧದ ಮೌಲ್ಯ ಹಾಗೂ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಈ ರಾಷ್ಟ್ರೀಯ ಸಹೋದರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ರಾಷ್ಟ್ರೀಯ ಸಹೋದರರ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆ ಹೇಗೆ?

ಯುಎಸ್ಎ ಮೊದಲ ಸಹೋದರ ಸಂಘಟನೆಯಾದ ಫ್ರೀಮಾಸನ್ಸ್ ಸ್ಥಾಪನೆಯನ್ನು ಸ್ಮರಿಸುವ ದಿನವಾಗಿದೆ. 2005ರಿಂದ ಮೇ 24ರಂದು ಸಹೋದರರ ದಿನವನ್ನು ಆಚರಿಸಲಾಯಿತು. ಅಲಬಾಮಾ ಮೂಲದ ಸಿ. ಡೇನಿಯಲ್ ರೋಡ್ಸ್ ಅವರು ರಾಷ್ಟ್ರೀಯ ಸಹೋದರರ ದಿನ ಮತ್ತು ಅದರ ಕಾರ್ಯವಿಧಾನಗಳನ್ನು ಮೊದಲು ಆಯೋಜಿಸಿದ್ದರು. ಅಂದಿನಿಂದ ಪ್ರತಿ ವರ್ಷ ಮೇ 24ರಂದು ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಗೌರವಿಸಲಾಗುತ್ತದೆ. ಈ ದಿನದಂದು ಸಹೋದರ ಸಹೋದರಿಯರು ಪ್ರೀತಿಯ ಉಡುಗೊರೆಯನ್ನು ನೀಡಿ ವಿಶೇಷ ದಿನವನ್ನು ಆಚರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಹಾಲು ಉಕ್ಕಿ ಚೆಲ್ಲದಂತೆ ತಡೆಯುವುದೇಗೆ? ಈ ಟಿಪ್ಸ್ ಪಾಲಿಸಿ

ನಿಮ್ಮ ಸಹೋದರರಿಗೆ ಹೀಗೆ ಶುಭಾಶಯಗಳನ್ನು ಕೋರಿ

* ನಿಮ್ಮ ಸಂತೋಷ, ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಸಹೋದರರ ದಿನದ ಶುಭಾಶಯಗಳು

* ನನ್ನ ಜೀವನದ ಒಡನಾಡಿ, ನನ್ನ ರಕ್ಷಕ ಮತ್ತು ಸಮಾನವಾಗಿ ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಪ್ರೀತಿಯ ಅಣ್ಣನಿಗೆ ಸಹೋದರರ ದಿನದ ಶುಭಾಶಯಗಳು

* ನನ್ನೆಲ್ಲಾ ಸಹೋದರರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಗೊಳ್ಳಲಿ. ಕಷ್ಟಗಳು ದೂರವಾಗಲಿ, ಆರೋಗ್ಯ ವೃದ್ಧಿಯಾಗಲಿ. ಎಲ್ಲರಿಗೂ ಸಹೋದರರ ದಿನದ ಶುಭಾಶಯಗಳು

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ