AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips in Kannada : ಹಾಲು ಉಕ್ಕಿ ಚೆಲ್ಲದಂತೆ ತಡೆಯುವುದೇಗೆ? ಈ ಟಿಪ್ಸ್ ಪಾಲಿಸಿ

ಕೆಲವು ಮಹಿಳೆಯರ ಪಾಲಿಗೆ ಅಡುಗೆ ಮನೆಯೇ ಪ್ರಪಂಚ. ಆದರೆ ಕೆಲವೊಮ್ಮೆ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಕೆಲಸಗಳು ಹೆಚ್ಚೆ ಆಗುತ್ತದೆ. ಹೆಚ್ಚಿನವರು ಗ್ಯಾಸ್ ಮೇಲೆ ಸಾರು ಅಥವಾ ಹಾಲನ್ನು ಇಟ್ಟು ಇನ್ಯಾವುದೋ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಉಕ್ಕಿ ಬಂದು ಚೆಲ್ಲಿದ ಪದಾರ್ಥಗಳನ್ನು ಸ್ವಚ್ಛ ಮಾಡುವುದೇ ತಲೆ ನೋವಾಗುತ್ತದೆ. ಈ ಹಾಲು ಕಾಯಿಸುವಾಗ ಹಾಲು ಉಕ್ಕಿ ಬಂದು ಸ್ಟವ್ ತುಂಬಾ ಚೆಲ್ಲುತ್ತದೆ. ಆದರೆ ಹಾಲು ಉಕ್ಕದಂತೆ ತಡೆಯಲು ಈ ಕೆಲವು ಟಿಪ್ಸ್ ಗಳನ್ನು ಪಾಲಿಸಬಹುದು.

Kitchen Tips in Kannada : ಹಾಲು ಉಕ್ಕಿ ಚೆಲ್ಲದಂತೆ ತಡೆಯುವುದೇಗೆ? ಈ ಟಿಪ್ಸ್ ಪಾಲಿಸಿ
ಸಾಯಿನಂದಾ
| Edited By: |

Updated on: May 23, 2024 | 2:32 PM

Share

ಬಹುತೇಕ ಮಹಿಳೆಯರು ಸ್ಟವ್ ಮೇಲೆ ಹಾಲು ಇಟ್ಟು ಬೇರೆ ಕೆಲಸದಲ್ಲಿ ಮಗ್ನರಾಗಿ ಬಿಡುತ್ತಾರೆ. ಇತ್ತ ಹಾಲು ಉಕ್ಕಿ ಚೆಲ್ಲುವ ತನಕ ಈ ಬಗ್ಗೆ ಗಮನವೇ ಇರುವುದಿಲ್ಲ. ಕೆಲವೊಮ್ಮೆ ಹಾಲಿನ ಪಾತ್ರೆಯ ಮುಂದೆ ನಿಂತುಕೊಂಡಿದ್ದರೆ ಹಾಲು ಉಕ್ಕಿ ಮೇಲೆ ಬರುವುದೇ ಇಲ್ಲ. ಒಂದೆರಡು ನಿಮಿಷ ಗಮನವನ್ನು ಬೇರೆಡೆ ಹರಿಸಿಬಿಟ್ಟರೆ ಸ್ಟವ್ ಮೇಲೆಲ್ಲಾ ಹಾಲು ಚೆಲ್ಲಿರುತ್ತದೆ. ಈ ಒಲೆಯನ್ನು ಶುಚಿ ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಹಾಲು ಕುದಿಸುವಾಗ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಉತ್ತಮ.

* ಹಾಲು ಕಾಯಿಸಲು ಬಳಸುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ, ಆ ಬಳಿಕ ಹಾಲನ್ನು ಹಾಕಿ ಬಿಸಿ ಮಾಡಿದರೆ ಹಾಲು ಉಕ್ಕಿ ಬರುವುದಿಲ್ಲ.ಅದಲ್ಲದೇ, ಹಾಲು ಕುದಿಸುವ ಪಾತ್ರೆಯು ಸ್ವಲ್ಪ ದೊಡ್ಡದಾಗಿರಲಿ.

* ಹಾಲು ಕುದಿಸುವ ಪಾತ್ರೆಯ ಸುತ್ತಲೂ ಬೆಣ್ಣೆಯನ್ನು ಹಚ್ಚಿ, ಹಾಲು ಕುದಿಸಿದರೆ ಉಕ್ಕಿ ಹೊರಗೆ ಚೆಲ್ಲುವುದಿಲ್ಲ.

* ಸಾಮಾನ್ಯವಾಗಿ ಹಾಲು ಉಕ್ಕಿ ಬರುವಾಗ ಹಾಲಿನ ಮೇಲೆ ನೊರೆ ಬರುತ್ತದೆ. ಈ ವೇಳೆಯಲ್ಲಿ ಸ್ವಲ್ಪ ನೀರನ್ನು ಚಿಮುಕಿಸಿದರೆ ಹಾಲು ಉಕ್ಕುವುದು ನಿಲ್ಲುತ್ತದೆ.

ಇದನ್ನೂ ಓದಿ: ಜರ್ಮನಿಯ ವಾದ್ಯ ಅಕಾರ್ಡಿಯನ್‌ಗೆ ವಿಶೇಷ ಗೌರವ ನೀಡಿದ ಗೂಗಲ್ ಡೂಡಲ್

* ಹಾಲು ಕುದಿಸುವಾಗ ಪಾತ್ರೆಯ ಮಧ್ಯದಲ್ಲಿ ಒಂದು ಮರದ ಚಮಚವನ್ನು ಇರಿಸಿದರೆ ಹಾಲು ಉಕ್ಕಿ ಬರುವುದಿಲ್ಲ.

* ಹಾಲು ಉಕ್ಕುತ್ತಿದೆ ಎಂದ ತಕ್ಷಣವೇ ಪಾತ್ರೆಯನ್ನು ಮೇಲೆತ್ತಿ ಅಲುಗಾಡಿಸಿ ನಂತರ ಕುದಿಯಲು ಇಟ್ಟರೆ ಹಾಲು ಉಕ್ಕುವುದನ್ನು ತಕ್ಷಣವೇ ನಿಲ್ಲಿಸಬಹುದು.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ