AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Turtle Day 2024 : ಆಮೆಗಳ ಸಂತತಿ ನಾಶವಾಗಲು ನಾವೇ ಕಾರಣ, ಹೇಗೆ ಗೊತ್ತಾ?

ವಿಶ್ವದಾದ್ಯಂತ ಅನೇಕ ಪ್ರಭೇದಗಳ ಆಮೆಗಳಿವೆ. ಆದರೆ ಬಹುತೇಕ ಆಮೆಗಳ ಪ್ರಭೇದಗಳು ಅಳಿವಿನಂಚಿನಲ್ಲಿದೆ. ಈ ಪ್ರಭೇಧಗಳನ್ನು ರಕ್ಷಿಸಲು ಹಾಗೂ ಈ ಬಗ್ಗೆ ಜನರಲ್ಲಿ ಈ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಮೇ 23 ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿ ಇಲ್ಲಿದೆ.

World Turtle Day 2024 : ಆಮೆಗಳ ಸಂತತಿ ನಾಶವಾಗಲು ನಾವೇ ಕಾರಣ, ಹೇಗೆ ಗೊತ್ತಾ?
ಸಾಯಿನಂದಾ
| Edited By: |

Updated on: May 23, 2024 | 11:17 AM

Share

ವಿಶ್ವದ ಅತ್ಯಂತ ಹಳೆಯ ಸರೀಸೃಪ ಗುಂಪುಗಳಿಗೆ ಸೇರಿದ ಆಮೆಗಳು ಶಾಂತ ಸ್ವಭಾವದ ಜೀವಿಗಳು. ಪ್ರಪಂಚದಲ್ಲಿ ಸುಮಾರು 350ಕ್ಕೂ ಹೆಚ್ಚಿನ ವಿವಿಧ ಆಮೆಯ ಸಂತತಿಗಳಿವೆ. ಈ ಭೂಮಿಯ ಮೇಲಿನ ಜೀವಿಗಳಲ್ಲಿ ಆಮೆಯ ಜೀವಿತಾವಧಿ ದೀರ್ಘವಾಗಿದೆ. 150-200 ವರ್ಷಗಳ ಕಾಲ ಬದುಕುವ ಈ ಸರೀಸೃಪಗಳ ಸಂತತಿಯನ್ನು ಕಾಣುವುದೇ ಅಪರೂಪವಾಗಿದೆ. ಸಮುದ್ರದಲ್ಲಿ ವಾಸಿಸುವ ಜೀವಿಯಾಗಿರುವ ಈ ಆಮೆಗಳ ಕೆಲ ಪ್ರಭೇದಗಳು ಕಣ್ಮರೆಯಾಗುತ್ತಿದೆ. ಇದಕ್ಕೆ ಒಂದು ಮೂಲ ಕಾರಣವೇ ಮಾನವನ ಬೇಟೆಯ ಪ್ರವೃತ್ತಿಯಾಗಿದ್ದು, ಚಿಪ್ಪು ಮತ್ತು ಮಾಂಸಕ್ಕಾಗಿ ಆಮೆಯನ್ನು ಕಳ್ಳಬೇಟೆಯಾಡುತ್ತಾರೆ. ಈ ಸರೀಸೃಪಗಳ ಸಂತತಿಯನ್ನು ಉಳಿಸುವ ಹಾಗೂ ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ.

ವಿಶ್ವ ಆಮೆ ದಿನದ ಇತಿಹಾಸ

ಅಮೇರಿಕಾದ ಆಮೆ ರಕ್ಷಣಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ 2000 ಇಸವಿಯಲ್ಲಿ ಈ ದಿನವನ್ನು ಆಚರಣೆಗೆ ತರಲಾಯಿತು. ಅಂದಿನಿಂದ ಪ್ರತೀ ವರ್ಷ ಮೇ 23ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ನೋ ಫೋನ್, ನೋ ಲ್ಯಾಪ್‌ಟಾಪ್‌, ಡಿಜಿಟಲ್​​​ ಒತ್ತಡದಿಂದ ದೂರವಿರಲು ಡಿಜಿಟಲ್ ಡಿಟಾಕ್ಸ್

ವಿಶ್ವ ಆಮೆ ದಿನದ ಮಹತ್ವ ಹಾಗೂ ಆಚರಣೆ

ಆಮೆಗಳ ಕೆಲವು ಪ್ರಭೇದಗಳು ಅಳಿವಿನಂಚಿಗೆ ತಲುಪಿದೆ. ಹೀಗಾಗಿ ಈ ಆಮೆಗಳನ್ನು ರಕ್ಷಿಸಲು ಹಾಗೂ ಅವುಗಳ ಕಣ್ಮರೆಯಾಗುತ್ತಿರುವ ಆವಾಸಸ್ಥಾನಗಳನ್ನು ಸಂರಕ್ಷಿಸಲು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸುವ ಉದ್ದೇಶವನ್ನು ಹೊಂದಿದೆ. ಈ ವಿಶ್ವ ಆಮೆ ದಿನವನ್ನು ಜಗತ್ತಿನಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಆಮೆಗಳಂತೆ ಉಡುಗೆ ತೊಟ್ಟು ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತವೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್