AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Digital Detox: ನೋ ಫೋನ್, ನೋ ಲ್ಯಾಪ್‌ಟಾಪ್‌, ಡಿಜಿಟಲ್​​​ ಒತ್ತಡದಿಂದ ದೂರವಿರಲು ಡಿಜಿಟಲ್ ಡಿಟಾಕ್ಸ್

ಡಿಜಿಟಲ್‌ ಡಿಟಾಕ್ಸ್ ಈ ಪದವನ್ನು ಕೇಳಿರಬಹುದು. ಆದರೆ ಆ ಬಗೆಗಿನ ಮಾಹಿತಿಯ ಬಗ್ಗೆ ತಿಳಿದಿರಲಿಕ್ಕಿಲ್ಲ. ಬದುಕನ್ನು ಡಿಜಿಟಲ್‌ ಜಗತ್ತಿನಿಂದ ಹೊರ ಬಂದು ತಮ್ಮ ನೈಜ ಬದುಕನ್ನು ಆನಂದಿಸುವುದಾಗಿದೆ. ಈ ಮೂಲಕ ಉಪಕರಣಗಳನ್ನು ಸ್ವಲ್ಪ ದೂರವೇ ಇಡುವ ಅಭ್ಯಾಸವನ್ನು ರೂಢಿಸಿಕೊಳ್ಳುವುದಾಗಿದೆ. ಈ ವಿಧಾನವನ್ನು ಅನುಸರಿಸುವುದು ಪ್ರಾರಂಭದಲ್ಲಿ ಕಷ್ಟವಾದರೂ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ತಜ್ಞರು.

Digital Detox: ನೋ ಫೋನ್, ನೋ ಲ್ಯಾಪ್‌ಟಾಪ್‌, ಡಿಜಿಟಲ್​​​ ಒತ್ತಡದಿಂದ ದೂರವಿರಲು ಡಿಜಿಟಲ್ ಡಿಟಾಕ್ಸ್
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 22, 2024 | 6:25 PM

Share

ನಾವಿಂದು ತಂತ್ರಜ್ಞಾನದ ಯುಗದಲ್ಲಿದ್ದೇವೆ. ಹೀಗಾಗಿ ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಬಿಡುವು ಸಿಕ್ಕಾಗಲೆಲ್ಲಾ ಮೊಬೈಲ್ ಫೋನ್ ನಲ್ಲಿ ಸಮಯ ಕಳೆಯುವವರು ಹೆಚ್ಚಾಗಿದ್ದಾರೆ. ಆದರೆ ಈ ಡಿಜಿಟಲ್‌ ಡಿಟಾಕ್ಸ್‌ ಎನ್ನುವುದು ಪರದೆಯ ಜಗತ್ತಿನಿಂದ ನಮ್ಮನ್ನು ಹೊರ ಕರೆದುಕೊಂಡು ಬಂದು ನೈಜ ಬದುಕಿನ ಜೊತೆಗೆ ಸಂಪರ್ಕ ಹೊಂದುವ ಪ್ರಕ್ರಿಯೆಯಾಗಿದೆ.

ಡಿಜಿಟಲ್‌ ಡಿಟಾಕ್ಸ್‌ ಎಂದರೇನು?

ನಿಗದಿತ ಸಮಯದವರೆಗೆ ಡಿಜಿಟಲ್ ಗ್ಯಾಜೆಟ್‌ಗಳು, ಸ್ಮಾರ್ಟ್ ಫೋನ್ ಅಥವಾ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದನ್ನು ತಡೆಯುವ ಉದ್ದೇಶಪೂರ್ವಕ ಅಭ್ಯಾಸವಾಗಿದೆ. ನೈಜ ಪ್ರಪಂಚದೊಂದಿಗೆ ಬೆಸೆದು ಕೊಳ್ಳಲು ಡಿಜಿಟಲ್ ಪ್ಲಾಟ್ ಫಾರ್ಮ್ ನಿಂದ ದೂರ ಉಳಿಯಲು ಸಹಾಯಕವಾಗಿದೆ ಎಂದು ಸೈಕೋಥೆರಪಿಸ್ಟ್ ಹಾಗೂ ಗೇಟ್‌ವೇ ಆಫ್ ಹೀಲಿಂಗ್‌ನ ಸಂಸ್ಥಾಪಕ-ನಿರ್ದೇಶಕ ಡಾ ಚಾಂದಿನಿ ತುಗ್ನೈಟ್ ಹೇಳಿದ್ದಾರೆ.

ಡಿಜಿಟಲ್‌ ಡಿಟಾಕ್ಸ್‌ನಿಂದ ಆರೋಗ್ಯಕ್ಕೆ ಲಾಭಗಳೇನು?

ಡಿಜಿಟಲ್ ಡಿಟಾಕ್ಸ್ ನಿಂದ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಪ್ರಯೋಜನಗಳಿವೆ ಎಂದು ಎಂಆರ್ ಸಿ ದೆಹಲಿಯ ಪಿಡಿ ಹಿಂದುಜಾ ಆಸ್ಪತ್ರೆಯ ಮನಶ್ಶಾಸ್ತ್ರಜ್ಞ ಮತ್ತು ಸಲಹೆಗಾರರಾಗಿರುವ ಡಾ ಶೀನಾ ಸೂದ್ ಅವರು ಈ ಬಗ್ಗೆ ವಿವರಿಸಿದ್ದಾರೆ.

* ಒತ್ತಡವನ್ನು ಕಡಿಮೆ ಮಾಡುತ್ತದೆ: ಸ್ಕ್ರೀನ್‌ ಟೈಮ್‌ನಿಂದ ಹೊರ ಬರುವುದರಿಂದ ಡಿಜಿಟಲ್‌ ಪ್ರಪಂಚದಿಂದ ದೂರ ಉಳಿಯುವುದರಿಂದ ಮೆದುಳಿಗೆ ಪುನಃ ಶಕ್ತಿ ತುಂಬಲು ನೆರವಾಗುವುದಲ್ಲದೆ ಒತ್ತಡವನ್ನು ದೂರ ಮಾಡುತ್ತದೆ.

* ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿ : ಸ್ಮಾರ್ಟ್ ಫೋನ್ ಹಾಗೂ ಲ್ಯಾಪ್ ಟಾಪ್ ನಂತಹ ಸಾಧನಗಳಿಂದ ದೂರ ಉಳಿಯುವುದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

* ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ : ಸ್ಕ್ರೀನ್‌ನ ಬೆಳಕು ಚರ್ಮದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದಾಗ ಚರ್ಮದ ಮೇಲಾಗುವ ಹಾನಿಯನ್ನು ತಡೆಯುತ್ತದೆ.

* ಉತ್ತಮ ನಿದ್ದೆಗೆ ಸಹಕಾರಿ : ಡಿಜಿಟಲ್‌ ಡಿಟಾಕ್ಸ್‌ನಿಂದ ಮೆದುಳು ನಿದ್ದೆಯ ಹಾರ್ಮೋನ್ ಮೆಲಟೋನಿನ್‌ ಅನ್ನು ಉತ್ಪಾದಿಸುತ್ತದೆ. ಇದರಿಂದ ಉತ್ತಮ ನಿದ್ರೆಯನ್ನು ಮಾಡಬಹುದಾಗಿದೆ.

* ಸಂವಹನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ : ಡಿಜಿಟಲ್‌ ಜಗತ್ತಿನಲ್ಲಿ ಚಾಟ್‌ ಹಾಗೂ ಫೋನ್‌ ನಿಂದಲೇ ಸಂವಹನವು ನಡೆಯುತ್ತಿದೆ. ಡಿಜಿಟಲ್ ಡಿಟಾಕ್ಸ್ ನಿಂದ ಮನುಷ್ಯರು ಮುಖತಃ ಭೇಟಿಯಾಗಿ ಸಂವಹನ ನಡೆಸಲು ಸಹಕಾರಿಯಾಗಿದೆ.

ಡಿಜಿಟಲ್ ಡಿಟಾಕ್ಸ್ ಯಶಸ್ವಿಯಾಗಲು ಇಲ್ಲಿವೆ ಸಲಹೆಗಳು

ಡಾ. ಚಾಂದಿನಿ ತುಗ್ನೈಟ್ ಅವರು ಡಿಜಿಟಲ್ ಡಿಟಾಕ್ಸ್ ಗೆ ಒಳಗಾದ ಸಮಯದಲ್ಲಿ ಕೆಲವು ಯೋಜನೆಗಳನ್ನು ರೂಪಿಸುವುದು ಹಾಗೂ ಸುತ್ತಮುತ್ತಲಿನವರಿಗೆ ತಿಳಿಸುವುದು ಮುಖ್ಯವಾಗಿರುತ್ತದೆ. ಡಿಜಿಟಲ್ ಡಿಟಾಕ್ಸ್ ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

* ನಿಮ್ಮ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಡಿಜಿಟಲ್ ಡಿಟಾಕ್ಸ್‌ನಲ್ಲಿದ್ದಾಗ ತೊಡಗಿಕೊಂಡಿರುವ ಬಗ್ಗೆ ತಿಳಿಸುವುದು ಉತ್ತಮ. ಈ ನಿರ್ಧಾರ ಹಿಂದಿನ ಕಾರಣ ಹಾಗೂ ಎಷ್ಟು ಸಮಯದವರೆಗೆ ಡಿಜಿಟಲ್ ಪ್ಲಾಟ್ ಫಾರ್ಮ್ ನಿಂದ ದೂರ ಉಳಿಯುವಿರಿ ಎನ್ನುವುದನ್ನು ಮನವರಿಕೆ ಮಾಡಿಸುವುದು ಒಳ್ಳೆಯದು.

* ಡಿಜಿಟಲ್ ಸಂವಹನ ಅಗತ್ಯವಿರುವ ವ್ಯಾಪಾರ ಅಥವಾ ವೈಯಕ್ತಿಕ ಕರ್ತವ್ಯಗಳನ್ನು ನೀವು ಹೊಂದಿದ್ದರೆ, ಅವುಗಳನ್ನು ಬೇರೆಯವರಿಗೆ ನಿಯೋಜಿಸಿಕೊಳ್ಳಿ.

* ಡಿಜಿಟಲ್ ಸಂವಹನ ಚಾನೆಲ್‌ಗಳ ಮೂಲಕ ಸಂಪರ್ಕಿಸಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿಸಲು ಇಮೇಲ್ ಮತ್ತು ವಾಯ್ಸ್ ಮೆಸೇಜ್ ಗಳನ್ನು ಆಯ್ಕೆ ಮಾಡಿಕೊಳ್ಳಿ.

* ಡಿಜಿಟಲ್ ಸಂವಹನದಿಂದ ದೂರವಿರುರಾದರೆ ತುರ್ತು ಸಂದರ್ಭಗಳಿಗಾಗಿ ಪರ್ಯಾಯ ಸಂಪರ್ಕ ವ್ಯವಸ್ಥೆಯನ್ನು ಹೊಂದಿಸಿಕೊಳ್ಳಿ.

* ಆಫ್‌ಲೈನ್ ಚಟುವಟಿಕೆಗಳನ್ನು ಯೋಜಿಸುವುದು ಮುಖ್ಯ. ಡಿಜಿಟಲ್ ಗ್ಯಾಜೆಟ್‌ಗಳತ್ತ ಮನಸ್ಸು ವಾಲುತ್ತದೆ. ಹೀಗಾದಾಗ ಆಫ್‌ಲೈನ್ ಚಟುವಟಿಕೆಗಳು, ಹವ್ಯಾಸಗಳು ಟ್ರಿಪ್ ಮಾಡಿದರೆ ನಿಮ್ಮೊಂದಿಗೆ ನೀವು ಸಮಯ ಕಳೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಉಗುರುಗಳು ಸುಲಭವಾಗಿ ಮುರಿಯುತ್ತಿದೆ? ನಿರ್ಲಕ್ಷ್ಯಿಸದಿರಿ; ಇವು ಕಾರಣಗಳಾಗಿರಬಹುದು

ಇಂದಿನ ಕಾಲಘಟ್ಟದಲ್ಲಿ ಡಿಜಿಟಲ್ ಡಿಟಾಕ್ಸ್ ಸಾಧ್ಯವೇ?

ಡಿಜಿಟಲ್ ಡಿಟಾಕ್ಸ್ ಸಾಧ್ಯವೇ ಎನ್ನುವ ಬಗ್ಗೆ ತಜ್ಞರು ಮಿಶ್ರ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಡಿಜಿಟಲ್ ಡಿಟಾಕ್ಸ್‌ಗೆ ಹೋಗುವುದು ಸಾಧ್ಯ. ಕೆಲವರು ಡಿಜಿಟಲ್ ಪ್ಲಾಟ್ ಫಾರ್ಮ್ ನಿಂದ ದೂರವಿದ್ದು , ಪ್ರಯಾಣ ಸೇರಿದಂತೆ ಇನ್ನಿತ್ತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು. ಅನಗತ್ಯ ಅಡಚಣೆಯನ್ನು ಉಂಟುಮಾಡದೆ ಬದಲಾವಣೆಗೆ ಕ್ರಮೇಣ ಹೊಂದಿಕೊಳ್ಳಲು ವ್ಯಕ್ತಿಗೆ ಹಾಗೂ ಸುತ್ತಮುತ್ತಲಿನವರಿಗೆ ಅನುವು ಮಾಡಿಕೊಡುತ್ತದೆ ಎಂದು ಡಾ ಸೂದ್ ಹೇಳಿದ್ದಾರೆ.

ನಮ್ಮ ಜೀವನವು ಈಗ ತಂತ್ರಜ್ಞಾನದೊಂದಿಗೆ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದೆ. ಹೀಗಾಗಿ ಹೆಚ್ಚಿನ ವ್ಯಕ್ತಿಗಳಿಗೆ ಡಿಜಿಟಲ್ ಡಿಟಾಕ್ಸ್ ವಿಧಾನವು ಯಶಸ್ವಿಗೊಳಿಸಲು ಸಾಧ್ಯವಾಗುವುದಿಲ್ಲ. ದೀರ್ಘಕಾಲದವರೆಗೆ ಸಂಪೂರ್ಣವಾಗಿ ಫೋನ್-ಮುಕ್ತವಾಗಿ ಹೋಗುವುದು ಹೆಚ್ಚು ಕಷ್ಟಕರವಾಗಿದೆ ಎಂದು ಡಾ ಚಾಂದಿನಿ ತುಗ್ನೈಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು