ನಿಮಗೆ ಸುಂದರ ನಗು ಬೇಕೇ? ನಿಮ್ಮ ಹಲ್ಲುಗಳು ಹೊರಚಾಚಿದೆಯೇ? ಇನ್ನು ಮುಂದೆ ನೀವು ಸುಂದರವಾದ ನಗುವನ್ನು ಪಡೆಯಬಹುದು ಎಂಬ ಜಾಹೀರಾತುಗಳಿಗೆ ನೀವು ಆಕರ್ಷಿತರಾಗಿ ಆನ್ಲೈನ್ನಲ್ಲಿ ಲಭ್ಯವಿರುವ ಟೀತ್ ಬ್ರೇಸೆಸ್ ನೀವು ಖರೀದಿಸಲು ಬಯಸಿದರೆ ಈ ಸ್ಟೋರಿನಾ ಓದಲೇ ಬೇಕು. ಆನ್ಲೈನ್ ಬ್ರೇಸೆಸ್ ನಿಮ್ಮ ಹಲ್ಲುಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ದಂತ ವೈದ್ಯರು ನೀಡಿರುವ ಎಚ್ಚರಿಕೆ ಇಲ್ಲಿದೆ.
ಆನ್ಲೈನ್ ಬ್ರೇಸೆಸ್ ಖರೀದಿಸಿ ನೀವು ಮನೆಯಲ್ಲಿಯೇ ಯಾವುದೇ ಕ್ಲಿಪ್ ಇಲ್ಲದೇ ನಿಮ್ಮ ಹಲ್ಲನ್ನು ಸರಿಪಡಿಸಲು ಸಾಧ್ಯವಿದೆ ಎಂದು ತಿಳಿದ್ದಿದ್ದರೆ, ಇದು ನಿಮ್ಮ ಹಲ್ಲನ್ನು ಸರಿಪಡಿಸಲಾಗದಂತೆ ಹಾನಿಗೊಳಿಸಬಹುದು ಎಂದು ಅಮೇರಿಕನ್ ಅಸೋಸಿಯೇಷನ್ ಆಫ್ ಆರ್ಥೊಡಾಂಟಿಸ್ಟ್ಸ್ (AAO) ಮತ್ತು ಕ್ಯಾಲಿಫೋರ್ನಿಯಾ ಡೆಂಟಲ್ ಅಸೋಸಿಯೇಷನ್ (CDA) ಎಚ್ಚರಿಕೆ ನೀಡಿದೆ.
ನನ್ನ ಮುಂಭಾಗದ ಹಲ್ಲು ಓರೆ ಕೋರೆ ಇತ್ತು. ಆದ್ದರಿಂದ ಅದನ್ನು ಸರಿಪಡಿಸಲು ಆನ್ಲೈನ್ನಲ್ಲಿ ಲಭ್ಯವಿರುವ ಟೀತ್ ಬ್ರೇಸೆಸ್ ಖರೀದಿಸಿದೆ ಹಾಗೂ ಬಳಸಲು ಪ್ರಾರಂಭಿಸಿದ ನಂತರ ಇದು ನನ್ನ ಮುಂಭಾಗದ ಹಲ್ಲನ್ನು ದುರ್ಬಲಗೊಳಿಸಿದೆ. ನನಗೆ ಸೇಬು ಹಣ್ಣನ್ನು ಕಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಆನ್ಲೈನ್ನಲ್ಲಿ ಲಭ್ಯವಿರುವ ಬ್ರೇಸೆಸ್ ಬಳಸಿದ ವ್ಯಕ್ತಿಯೂ ನೀಡಿರುವ ಹೇಳಿಕೆಯನ್ನು ದಂತವೈದ್ಯರು ಬಿಬಿಸಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಠಾತ್ ಹೃದಯ ಸ್ತಂಭನವಾದ ವ್ಯಕ್ತಿಗೆ ಮೊದಲು ನೀವು ಏನು ಮಾಡಬೇಕು? ತಕ್ಷಣದ ಕ್ರಮಗಳೇನು?
ಆದ್ದರಿಂದ ನೀವು ಯಾವುದೇ ಆನ್ಲೈನ್ನಲ್ಲಿ ಲಭ್ಯವಿರುವ ಬ್ರೇಸೆಸ್ ಬಳಸುವ ಮೊದಲು ನಿಮ್ಮ ಹತ್ತಿರದ ದಂತ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಯಾವುದೇ ಸಲಹೆ ಇಲ್ಲದೇ ನೀವು ಉಪಯೋಗಿಸಿದರೆ ನಿಮ್ಮ ಬಾಯಿಯ ಗಟ್ಟಿಯಾದ ಮತ್ತು ಮೃದುವಾದ ಅಂಗಾಂಶಗಳ ಆರೋಗ್ಯ, ಹಲ್ಲುಗಳು ಮತ್ತು ಒಸಡುಗಳು, ಮತ್ತು ಹಲ್ಲುಗಳ ಬೇರುಗಳು ಚಲನೆಯನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬುದು ದಂತವೈದ್ಯರು ಪರಿಗಣಿಸುವ ಕೆಲವು ಅಂಶಗಳಾಗಿವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: